ಮುಂಬೈ: ಭಾರತೀಯ ಟೆಸ್ಟ್ ತಂಡದ ಅವಿಭಾಜ್ಯ ಅಂಗವಾಗಿರುವ ಚೇತೇಶ್ವರ ಪೂಜಾರ, ಅಜಿಂಕ್ಯ ರಹಾನೆ ತಮ್ಮ ಅಸ್ಥಿರ ಪ್ರದರ್ಶನದಿಂದ ಅಲ್ಲೂ ಸ್ಥಾನ ಕಳೆದುಕೊಳ್ಳುವ ಪರಿಸ್ಥಿತಿಯಲ್ಲಿದ್ದಾರೆ.
ಕಳೆದ ಆರೇಳು ತಿಂಗಳುಗಳಿಂದ ಈ ಇಬ್ಬರು ನಿರೀಕ್ಷೆಗೆ ತಕ್ಕಂತೆ ಆಡಿಲ್ಲ. ಇದರ ನಡುವೆ ಇಬ್ಬರಿಗೂ ಆಘಾತಕಾರಿ ಸುದ್ದಿಯೊಂದು ಎದುರಾಗಿದೆ.
ಈ ಇಬ್ಬರೂ ಸದ್ಯದಲ್ಲೇ ಬಿಸಿಸಿಐ ಬಿಡುಗಡೆ ಮಾಡುವ ಕೇಂದ್ರೀಯ ಗುತ್ತಿಗೆಯಲ್ಲಿ ಹಿಂಬಡ್ತಿ ಪಡೆಯುವ ಸಾಧ್ಯತೆಯಿದೆ. ಸದ್ಯ ಎ ದರ್ಜೆ ಹೊಂದಿರುವ ಇಬ್ಬರೂ, ಬಿಗೆ ಇಳಿಯಬಹುದು. ಬಿಸಿಸಿಐ ಕೇಂದ್ರೀಯ ಗುತ್ತಿಗೆ ವ್ಯಾಪ್ತಿಯಲ್ಲಿ ಒಟ್ಟು ನಾಲ್ಕು ದರ್ಜೆಗಳಿವೆ. ಎ+ ವ್ಯಾಪ್ತಿಯ ಆಟಗಾರರು ಕ್ರಿಕೆಟ್‌ನ ಮೂರೂ ಮಾದರಿಯಲ್ಲಿ ಸ್ಥಾನ ಪಡೆದಿರುತ್ತಾರೆ.
ಇದನ್ನೂ ಓದಿ:ಚಿನ್ನ ಕೊಟ್ಟು ದುಡ್ಡು ಪಡೆಯುವ ನೆಪದಲ್ಲಿ ವ್ಯಕ್ತಿಯನ್ನೇ ಕೊಂದು ಕೆರೆಗೆ ಎಸೆದರು
ಇವರ ವಾರ್ಷಿಕ ವೇತನ 7 ಕೋಟಿ ರೂ., ಎ ವಿಭಾಗದ ಆಟಗಾರರಿಗೆ 5 ಕೋಟಿ ರೂ., ಬಿ ವಿಭಾಗದವರಿಗೆ 3 ಕೋಟಿ ರೂ., ಸಿ ವಿಭಾಗದವರಿಗೆ 1 ಕೋಟಿ ರೂ. ವೇತನವಿರುತ್ತದೆ.