Advertisement

“ಅಜ್‌ಫನ್‌ ಡೇಟ್ಸ್‌ ಆ್ಯಂಡ್‌ ನಟ್ಸ್‌’ ಮಳಿಗೆ ಉದ್ಘಾಟನೆ

05:02 PM Nov 25, 2023 | Team Udayavani |

ಉಡುಪಿ: ಅಭಿವೃದ್ದಿಹೊಂದುತ್ತಿರುವ ಉಡುಪಿ ನಗರಕ್ಕೆ ಡ್ರೈಪ್ರೂಟ್ಸ್‌ ಮಳಿಗೆ ಅಗತ್ಯವಿದೆ. ಒಂದೇ ಸೂರಿನಡಿಯಲ್ಲಿ ಹಲವು ರೀತಿಯ ಒಣಹಣ್ಣುಗಳು ಸಿಗುವುದರಿಂದ ಜನರಿಗೆ ಸಮಯದ ಉಳಿತಾಯದೊಂದಿಗೆ ಅತೀ ಕಡಿಮೆ ದರದಲ್ಲಿ ಸಿಗಲಿದೆ ಎಂದು ನಗರಸಭೆ ಸದಸ್ಯ ಡಿ. ಬಾಲಕೃಷ್ಣ ಶೆಟ್ಟಿ ಹೇಳಿದರು.

Advertisement

ಅಂಬಾಗಿಲು ಪುತ್ತೂರಿನ ಅಮೃತ್‌ ಗಾರ್ಡನ್‌ ಮುಂಭಾಗದ ರಾ.ಹೆ. 66ರ ಸಮೀಪದ ಅಂಬಿಕಾ ಕಟ್ಟಡದಲ್ಲಿ ನೂತನವಾಗಿ ತೆರೆಯಲಾದ “ಅಜ್‌ಫನ್‌ ಡೇಟ್ಸ್‌ ಆ್ಯಂಡ್‌ ನಟ್ಸ್‌’ ಡ್ರೈಪ್ರೂಟ್ಸ್‌ನ 172ನೇ ಶಾಖೆಯನ್ನು ಅವರು ಶುಕ್ರವಾರ ಉದ್ಘಾಟಿಸಿ ಮಾತನಾಡಿದರು.

ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಆಡಳಿತ ಪಾಲುದಾರ ಡಾ| ಎನ್‌. ಮಹಮ್ಮದ್‌ ಕುಟ್ಟಿಯವರು, ನಮ್ಮಲ್ಲಿ ದೊರೆಯುವ ಎಲ್ಲ ಡ್ರೈಪ್ರೂಟ್ಸ್‌ ಮೂರು ಕಡೆಗಳಲ್ಲಿ ಪರೀಕ್ಷೆಗೊಳಪಟ್ಟ ಅನಂತರವೇ ಮಾರಾಟಕ್ಕೆ ಇಡಲಾಗುವುದು. ನಮ್ಮಲ್ಲಿ ವಿಶೇಷವಾಗಿ 45 ಬಗೆಯ ಖರ್ಜೂರಗಳು ದೊರೆಯಲಿವೆ ಎಂದರು.

ಎಂಜಿನಿಯರ್‌ ಎಂ. ಶ್ರೀನಾಗೇಶ್‌ ಹೆಗ್ಡೆ, ಉದ್ಯಮಿ ಪಿ.ಬಿ. ಇಬ್ರಾಹಿಂ, ಕಟ್ಟಡ ಮಾಲಕ ಜಗದೀಶ್‌, ರಾಜ್ಯ ಮಾರಾಟ ವಿಭಾಗದ ಮುಖ್ಯಸ್ಥ ಸಲ್ಮಾನ್‌ ಉಪಸ್ಥಿತರಿದ್ದರು. ರಾಜ್ಯ ಮಾರಾಟ ವಿಭಾಗದ ಮುಖ್ಯಸ್ಥ ಮಂಜುನಾಥ ಸ್ವಾಗತಿಸಿ, ವಂದಿಸಿದರು.

ಗುಣಮಟ್ಟಕ್ಕೆ ಆದ್ಯತೆ
ಇಲ್ಲಿ ನೈಸರ್ಗಿಕವಾದ ಉತ್ತಮ ಗುಣಮಟ್ಟದ ವಿವಿಧ ಡ್ರೈಪ್ರೂಟ್ಸ್‌ಗಳು, ಸೌದಿಅರೇಬಿಯಾದಲ್ಲಿ ತಮ್ಮ ಸ್ವಂತ ತೋಟದಲ್ಲಿ ಬೆಳೆಸಿದ ವಿವಿಧ ಬಗೆಯ ವಿಶೇಷ ಖರ್ಜೂರಗಳು, ವಿದೇಶಿ ಚಾಕಲೇಟ್‌ಗಳು, ತಂಪು ಪಾನೀಯಗಳು, ಪ್ರಕೃತಿ ಮಡಿಲಿನ ಜೇನುತುಪ್ಪ, ವಿವಿಧ ಬಗೆಯ ಸಾಂಬಾರ ಪದಾರ್ಥಗಳು ದೊರೆಯುತ್ತದೆ. ಉತ್ತಮ ಗುಣಮಟ್ಟಕ್ಕೆ ಪ್ರಥಮ ಆದ್ಯತೆ ನೀಡುವುದರೊಂದಿಗೆ ಗ್ರಾಹಕರಿಗೆ ನಗುಮೊಗದ ಸೇವೆ ನೀಡುವ ಧ್ಯೇಯೋದ್ದೇಶವನ್ನು ಸಂಸ್ಥೆ ಹೊಂದಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next