Advertisement

“ಲವ್‌ ಯು ರಚ್ಚು”ಹಿಂದಿನ ಕಥೆ ಹೇಳಿದ ಅಜೇಯ್‌ ರಾವ್‌

02:40 PM Dec 23, 2021 | Team Udayavani |

ಇತ್ತೀಚೆಗೆ ನಡೆದ “ಲವ್‌ ಯು ರಚ್ಚು’ ಚಿತ್ರದ ಟ್ರೇಲರ್‌ ಬಿಡುಗಡೆಗೆ ನಟ ಅಜೇಯ್‌ ರಾವ್‌ ಗೈರಾಗಿದ್ದು ಸಾಕಷ್ಟು ಸುದ್ದಿಯಾಗಿತ್ತು. ಅದರ ಬೆನ್ನಿಗೆ ನಟ ಅಜೇಯ್‌, “ನನಗೂ ನಿರ್ಮಾಪಕರಿಗೂ ಅಸಮಾಧಾನ ಇರೋದು ನಿಜ. ಹಾಗಂತ ಅದು ಸಾರ್ವಜನಿಕವಾಗಿ ಚರ್ಚಿಸುವ ವಿಚಾರವಲ್ಲ’ ಎಂದಿದ್ದರು. ಇದರ ಬೆನ್ನಿಗೆ ಅಜೇಯ್‌ ರಾವ್‌ “ಲವ್‌ ಯು ರಚ್ಚು’ ಚಿತ್ರದ ಬಗ್ಗೆ ಮಾತನಾಡಿದ್ದಾರೆ. ಹಾಗಂತ ಕಾಂಟ್ರಾವರ್ಸಿಯಲ್ಲ, ಬದಲಾಗಿ ಸಿನಿಮಾದ ಟೈಟಲ್‌ ಹುಟ್ಟಿದ್ದು ಹೇಗೆ ಎಂಬುದನ್ನು ಹೇಳಿಕೊಂಡಿದ್ದಾರೆ.

Advertisement

ಇಡೀ ತಂಡ ಸೇರಿ ಟೈಟಲ್‌ ಬಗ್ಗೆ ಚರ್ಚೆ ಮಾಡುವಾಗ ಲವ್‌ ಇಮೇಜ್‌ ಇರುವ ಟೈಟಲ್‌ ಇಟ್ಟುಕೊಳ್ಳೋಣ ಎಂದು ನಿರ್ಧರಿಸಿದರಂತೆ. ಅದರಂತೆ ನಿರ್ದೇಶಕ ಶಶಾಂಕ್‌ ಕೂಡಾ ಕೃಷ್ಣನ್‌ ಲವ್‌ಸ್ಟೋರಿ ತರಹದ ಟೈಟಲ್‌ ಇಡೋಣ ಎಂದರಂತೆ.

“ಚಿತ್ರದಲ್ಲಿ ನಾಯಕ, ನಾಯಕಿಯನ್ನು ಎಷ್ಟು ಪ್ರೀತಿಸುತ್ತಾನೆ ಎಂಬುದನ್ನು ವ್ಯಕ್ತಪಡಿಸುವ ಟೈಟಲ್‌ ಇಟ್ಟರೆ ಚೆಂದ ಎಂದು ಚರ್ಚಿಸಿ, ನನ್ನ ಜೊತೆ ನಾಯಕಿಯರಾಗಿ ನಟಿಸಿದ ಎಲ್ಲಾ ಹೀರೋಯಿನ್‌ಗಳ ಹೆಸರು ಹೇಳುತ್ತಾ ಹೋದೆವು. ಅದರಲ್ಲಿ ಲವ್‌ ಯು ರಚ್ಚು ಸೌಂಡಿಂಗ್‌ ಚೆನ್ನಾಗಿತ್ತು. ನಟಿ ರಮ್ಯಾ ಹೆಸರೂ ತಲೆಗೆ ಬಂದಿತ್ತು. ಆದರೆ “ಲವ್‌ ಯು ರಚ್ಚು’ ಚೆನ್ನಾಗಿ ಸೂಟ್‌ ಆಯಿತು. ನಟಿ ರಚಿತಾ ಕೂಡಾ ಕಥೆಯನ್ನು ತುಂಬಾ ಇಷ್ಟಪಟ್ಟರು’ ಎನ್ನುತ್ತಾ ಟೈಟಲ್‌ ರಹಸ್ಯ ಬಿಚ್ಚಿಟ್ಟರು ಅಜೇಯ್‌.

ಇದನ್ನೂ ಓದಿ:ಆರ್ ಸಿಬಿ ತಂಡದ ಮುಖ್ಯ ಕೋಚ್ ಈಗ ಹೈದರಾಬಾದ್ ತಂಡದಲ್ಲಿ ಸಹಾಯಕ ಕೋಚ್!

ಸದ್ಯ ಬಿಡುಗಡೆಯಾಗಿರುವ “ಲವ್‌ ಯು ರಚ್ಚು’ ಚಿತ್ರದ ಟ್ರೇಲರ್‌ ದೊಡ್ಡ ಮಟ್ಟದಲ್ಲಿ ಹಿಟ್‌ ಆಗಿದ್ದು, ಚಿತ್ರದಲ್ಲಿನ ಸಸ್ಪೆನ್ಸ್‌, ಥ್ರಿಲ್ಲರ್‌ ಅಂಶಗಳು ಗಮನ ಸೆಳೆಯುತ್ತಿವೆ. ಗುರುದೇಶಪಾಂಡೆ ಈ ಚಿತ್ರದ ನಿರ್ಮಾಪಕರು.

Advertisement

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next