Advertisement
ಆಜ್ರಿ ಪೇಟೆಯಲ್ಲಿ ಪ್ರತಿ ವರ್ಷದ ಮಳೆಗಾಲದಲ್ಲಿ ನೀರು ನಿಂತು ಕೃತಕ ನೆರೆ ಸೃಷ್ಟಿಯಾಗುತ್ತದೆ. ಇದಕ್ಕೆ ಮಳೆ ನೀರು ಹರಿದು ಹೋಗಲು ಸರಿಯಾದ ಚರಂಡಿ ವ್ಯವಸ್ಥೆ ಇಲ್ಲದಿರುವುದು ಹಾಗೂ ಕೆಲವೆಡೆ ಚರಂಡಿಯೇ ಇಲ್ಲದಿರುವುದು ಪ್ರಮುಖ ಕಾರಣ. ಈ ಬಾರಿಯೂ ಕೂಡ ಸ್ಥಳೀಯಾಡಳಿತ ಇನ್ನೂ ಎಚ್ಚೆತ್ತುಕೊಂಡಂತೆ ಕಾಣುತ್ತಿಲ್ಲ. ಆಜ್ರಿಯ ಪೇಟೆಯಲ್ಲಿ ಚರಂಡಿಯ ಹೂಳೆತ್ತುವ, ರಸ್ತೆ ಬದಿಯ ಗಿಡಗಂಟಿ ತೆರವು ಸಹಿತ ಮುಂಗಾರಿಗೆ ಮುನ್ನ ಆಗಬೇಕಾಗಿರುವ ಯಾವುದೇ ಪೂರ್ವ ಸಿದ್ಧತಾ ಕಾರ್ಯಗಳು ಆರಂಭಗೊಂಡಿಲ್ಲ.
ಆಜ್ರಿಯ ಪೇಟೆಯಿಂದ ಆರಂಭಗೊಂಡು, ಎಲ್ಲ ಪ್ರಮುಖ ರಸ್ತೆಗಳಿಗೂ ಮಳೆ ನೀರು ಹರಿದು ಹೋಗಲು ಸೂಕ್ತ ಚರಂಡಿ ವ್ಯವಸ್ಥೆಯೇ ಇಲ್ಲದಂತಾಗಿದೆ. ಕೆಲವೆಡೆಗಳಲ್ಲಿ ಚರಂಡಿಯಿದ್ದರೂ ಅದರಲ್ಲಿ ಹೂಳು ತುಂಬಿದೆ. ಕಸ, ಕಡ್ಡಿಗಳ ರಾಶಿಯೇ ಇದೆ. ಅದನ್ನು ತೆರವು ಮಾಡಿಲ್ಲ. ಇದರಿಂದ ಪ್ರತಿ ಮಳೆಗಾಲದಲ್ಲೂ ಮಳೆ ನೀರು ರಸ್ತೆಯಲ್ಲಿಯೇ ಹರಿಯುತ್ತಿದೆ. ರಸ್ತೆಗಳು ತೋಡುಗಳಂತೆ ಕಾಣುತ್ತವೆ. ಮತ್ತೆ ಕೆಲವು ಕಡೆಗಳಲ್ಲಿ ಚರಂಡಿಯ ನೀರು ಸಮರ್ಪಕವಾಗಿ ಹರಿದು ಹೋಗದೆ ಅಲ್ಲೇ ನಿಂತು ಕೃತಕ ನೆರೆ ಸೃಷ್ಟಿಯಾಗುತ್ತಿದೆ.
Related Articles
ಈ ಬಗ್ಗೆ ಪಂಚಾಯತ್‌ನಲ್ಲಿ ಚರ್ಚಿಸಲಾಗಿದೆ. ಶೀಘ್ರ ಚರಂಡಿ ಸ್ವತ್ಛತೆ, ಹೂಳೆತ್ತುವ ಕೆಲಸ ಮಾಡಲಾಗುವುದು. ಇನ್ನು ಚರಂಡಿ ಇಲ್ಲದಿರುವ ಕಡೆ ಚರಂಡಿ ನಿರ್ಮಾಣ ಕುರಿತಂತೆ ಜಿ.ಪಂ., ತಾ.ಪಂ.ಗೆ ಪ್ರಸ್ತಾವನೆ ಸಲ್ಲಿಸಲಾಗುವುದು.
-ಗೋಪಾಲ್ ದೇವಾಡಿಗ,
ಪಿಡಿಒ, ಆಜ್ರಿ ಗ್ರಾ.ಪಂ.
Advertisement