ವಿಜಯಪುರ: ಕೇಂದ್ರ ಸರ್ಕಾರದ ಕೃಷಿ ಕಾಯ್ದೆಗಳ ತಿದ್ದುಪಡಿ ವಿರೋಧಿಸಿ ದೆಹಲಿಯಲ್ಲಿ ರೈತರುನಡೆಸುತ್ತಿರುವ ಹೋರಾಟ ಬೆಂಬಲಿಸಿ ಐಯುಟಿಯುಸಿಜಿಲ್ಲಾ ಸಮಿತಿ ಮಂಗಳವಾರ ಅಂಬೆಡ್ಕರ್ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿ ಜಿಲ್ಲಾ ಡಳಿತ ಮೂಲಕ ಪ್ರಧಾನಿಗೆ ಮನವಿ ಸಲ್ಲಿಸಿತು.
ಈ ವೇಳೆ ಎಐಯುಟಿಯುಸಿ ಜಿಲ್ಲಾಧ್ಯಕ್ಷ ಎಚ್.ಟಿ. ಮಲ್ಲಿಕಾರ್ಜುನ ಮಾತನಾಡಿ, ಬಿಜೆಪಿ ಸರ್ಕಾರದ ಮೂರು ಕರಾಳ ಕಾಯ್ದೆಗಳ ವಿರುದ್ಧ ದೆಹಲಿಯ ಗಡಿ ಭಾಗದಲ್ಲಿ ಕೊರೆಯುವ ಚಳಿ ನಡುವೆಯೂ ಕಳೆದ 36 ದಿನಗಳಿಂದ ನಡೆಯುತ್ತಿರುವ ರೈತರ ದಿಟ್ಟ ಹೋರಾಟಕ್ಕೆ ನಮ್ಮ ಬೆಂಬವಿದ್ದು ಕೇಂದ್ರ ಸರ್ಕಾರ ಕೂಡಲೇ ಈಕರಾಳ ಕಾಯ್ದೆಗಳನ್ನು ಕೈ ಬಿಡುವಂತೆ ಆಗ್ರಹಿಸಿದರು. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರಸರ್ಕಾರ ಕಾರ್ಪೋರೇಟ್ ಕಂಪನಿಗಳ ಪರವಾಗಿಅಂದರೆ ಅಂಬಾನಿ-ಆದಾನಿಯಂತಹ ಕೈಗಾರಿಕಾ ಮನೆತನಗಳ ಲಾಭಕ್ಕಾಗಿ ಕಾರ್ಮಿಕ ವಿರೋಧಿ ಕಾಯ್ದೆಗಳು ರೈತರ ಹಾಗೂ ದೇಶದ ಕೃಷಿಯ ಮೇಲೂಸಹ ದಾಳಿ ಮಾಡುತ್ತಿವೆ. ಎಪಿಎಂಸಿ ತಿದ್ದುಪಡಿಕಾಯ್ದೆ 2020 (ರೈತರ ಉತ್ಪನ್ನಗಳ ವ್ಯಾಪಾರ ಮತ್ತು ವಾಣಿಜ್ಯಗಳ ಉತ್ತೇಜನ ಮತ್ತು ಸೌಕರ್ಯ ಕಾಯ್ದೆ 2020), ಬೆಲೆ ಭರವಸೆ (ಸಶಕ್ತೀಕರಣ ಮತ್ತು ಸುರಕ್ಷೆ)ಕೃಷಿ ಸೇವೆಗಳ ಕಾಯ್ದೆ 2020 (ಗುತ್ತಿಗೆ ಕೃಷಿ ಕಾಯ್ದೆ2020), ಅಗತ್ಯ ವಸ್ತುಗಳ ತಿದ್ದುಪಡಿ ಕಾಯ್ದೆ 2020ಹಾಗೂ ವಿದ್ಯುತ್ ತಿದ್ದುಪಡಿ ಮಸೂದೆ 2020 ಜಾರಿಗೆಮುಂದಾಗಿದೆ ಎಂದು ಹರಿಹಾಯ್ದರು.ಮತ್ತೂಂದೆಡೆ ಕರ್ನಾಟಕ ರಾಜ್ಯದಲ್ಲಿ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ತರುತ್ತಿರುವ ಎಪಿಎಂಸಿ ತಿದ್ದುಪಡಿ ಕಾಯ್ದೆ, ಭೂ ಸ್ವಾಧೀನ ತಿದ್ದುಪಡಿ ಕಾಯ್ದೆಗಳು ಅಗತ್ಯ ವಸ್ತುಗಳನ್ನು
ಕಾಳಸಂತೆಯಲ್ಲಿ ದಾಸ್ತಾನು ಮಾಡುವುದಕ್ಕೆ ಅವಕಾಶ ನೀಡುತ್ತವೆ. ಅಲ್ಲದೆ ಇದು ಸರ್ಕಾರಿ ಕೃಷಿ-ಮಂಡಿಗಳನ್ನು(ಎಪಿಎಂಸಿ) ನಾಶ ಮಾಡುತ್ತದೆ. ಉದ್ಯಮಿಗಳಿಗೆಖಾಸಗಿ (ಎಪಿಎಂಸಿ) ಮಂಡಿಗಳನ್ನು ತೆರೆಯಲುಅವಕಾಶ ನೀಡುತ್ತದೆ. ರೈತರ ಭೂಮಿಯನ್ನು ಕಸಿದುಕೊಂಡು ಅವರನ್ನು ಒಕ್ಕಲೆಬ್ಬಿಸುತ್ತದೆ. ಕೃಷಿಯನ್ನು ಖಾಸಗಿ ಕಂಪನಿಗಳ ನಿಯಂತ್ರಣಕ್ಕೆ ತರಲಾಗುತ್ತದೆ. ರೈತರು ಸಂಪೂರ್ಣವಾಗಿ ತಮ್ಮ ಸ್ವಾತಂತ್ರ್ಯ ಕಳೆದುಕೊಂಡು ಕಂಪನಿಗಳ ಹಂಗಿನಲ್ಲಿನಡೆದಾಡುವ ಹೆಣಗಳಾಗಿ ಬಿಡುತ್ತಾರೆ. ಇದನ್ನು ವಿರೋಧಿ ಸಿ ದೇಶದ ರಾಜಧಾನಿಯಲ್ಲಿ ರೈತರು ಬೀದಿಗೆಇಳಿದು ಹೋರಾಟಕ್ಕೆ ಮುಂದಾಗಿದ್ದಾರೆ ಎಂದರು.
ಸಂಘಟನೆ ಜಿಲ್ಲಾ ಕಾರ್ಯದರ್ಶಿ ಸುನೀಲ ಸಿದ್ರಾಮಶೆಟ್ಟಿ ಮಾತನಾಡಿ, ಪಂಜಾಬ, ಹರಿಯಾಣ,ಉತ್ತರಪ್ರದೇಶ, ರಾಜಸ್ಥಾನ, ಉತ್ತರಖಂಡ,ಛತ್ತೀಸ್‌ಘಡ್, ಮಧ್ಯಪ್ರದೇಶ ಹೀಗೆ ಹಲವುರಾಜ್ಯಗಳಿಂದ ರೈತರು ದೆಹಲಿಯತ್ತ ತೆರಳಿದ್ದು,ಲಕ್ಷಾಂತರ ರೈತರು ಬೀದಿಯಲ್ಲೇ ಕುಳಿತು ಹೋರಾಟಮುಂದುವರಿಸಿದ್ದಾರೆ. ರೈತರ ಹೋರಾಟಕ್ಕೆ ಹೆದರಿದಮೋದಿ ಸರಕಾರ ರೈತರು ದೆಹಲಿ ತಲುಪದಂತೆ ಕುತಂತ್ರ ನಡೆಸಲು ಬರ್ಬರ ವಾಗಿ ವರ್ತಿಸಿತು. ಸರ್ಕಾರ ನಡೆಸಿದ ಎಲ್ಲ ಸಂಚುಗಳನ್ನು ಎದುರಿಸಿ ರೈತರು ಮುನ್ನುಗ್ಗಿದ್ದಾರೆ. ಪೋಲಿಸರನ್ನು ಬಳಸಿಕೊಂಡು ಮಾಡಿದ ಯಾವುದೆ ದೌರ್ಜನ್ಯಕ್ಕೂ ರೈತರು ಬಗ್ಗದೇ, ಜಗ್ಗದೇ ಹೋರಾಟಕ್ಕೆ ಅಣಿಯಾಗಿರುವುದು ರೈತ ಶಕ್ತಿಯ ಕೆಚ್ಚಿನ ಪ್ರತೀಕ. ಇನ್ನಾದರೂ ಕೇಂದ್ರ, ರಾಜ್ಯ ಸರ್ಕಾರಗಳು ರೈತ ವಿರೋಧಿ ಕಾಯ್ದೆಗಳಿಂದ ಹಿಂದೆ ಸರಿಯಲಿ ಎಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಕಾಶೀಬಾಯಿ ಜನಗೊಂಡ, ಮಹಾದೇವಿ ಧರ್ಮಶೆಟ್ಟಿ, ಶಶಿಕಲಾ ಮ್ಯಾಗೇರಿ, ಲಕ್ಷ್ಮೀ ಲಕ್ಷಟ್ಟಿ ಮಾತನಾಡಿದರು.ಕಾರ್ಮಿಕರಾದ ಅಂಬಿಕಾ ಒಳಸಂಗ,ಗಂಗೂಬಾಯಿ ಉಳಾಗಡ್ಡಿ, ಪ್ರಶಾಂತ ಮನಗೂಳಿ, ವಿಜಯಲಕ್ಷ್ಮೀ ಹುಣಶ್ಯಾಳ, ಭಾಗೀರತಿ ಬಡಿಗೇರ, ಬಸಿರಾ ಬಾಗೇವಾಡಿ, ಯಮನವ್ವ ಕೋಲಾರ, ಮುತ್ತು, ಮಂಜು, ಹನುಮಂತ, ಪರಶುರಾಮ ತಳವಾರ ಇದ್ದರು.