ಮುಂಡರಗಿ: ಯುವಕರಿಗೆ ನೀತಿ ಬೋಧನೆ, ದೇಶಭಕ್ತಿ, ಐತಿಹಾಸಿಕ ದೇವಸ್ಥಾನ, ಮಠ-ಮಂದಿರಗಳು ಕುರಿತು ತಿಳಿವಳಿಕೆ ಮೂಡಿಸುವ ದುಶ್ಚಟಗಳಿಂದ ಯುವಶಕ್ತಿ ಉಳಿಸುವ ಪರಿಸರ ರಕ್ಷಣೆ ಮಾಡುವ ಐರ್ವ ಸಿನಿಮಾದ ಚಿತ್ರೀಕರಣ ನಡೆಯಲಿದೆ.
ಜನವರಿ ತಿಂಗಳಲ್ಲಿ ಮುಂಡರಗಿ ತಾಲೂಕು ಸೇರಿದಂತೆ ಜಿಲ್ಲೆಯ ಪ್ರಮುಖ ದೇವಸ್ಥಾನದ ಸ್ಥಳಗಳಲ್ಲಿ ಚಿತ್ರೀಕರಣ ಪ್ರಾರಂಭವಾಗಲಿದೆ ಎಂದು ಎಸ್. ಬ್ರ್ಯಾಂಡ್ ಮೂವಿ ಕ್ರಿಯೇಶನ್
ಅರ್ಪಿಸುವ ಐರ್ವ ನಿರ್ಮಾಪಕರು, ಕೊರ್ಲಹಳ್ಳಿ ಗ್ರಾಪಂ ಅಧ್ಯಕ್ಷ ಮದರಸಾಬ್ ಸಿಂಗನಮಲ್ಲಿ ಹೇಳಿದರು. ಪಟ್ಟಣದ ಪ್ರವಾಸಿ ಮಂದಿರದಲ್ಲಿ ಐರ್ವ ಚಿತ್ರದ ಪೋಸ್ಟರ್ ಬಿಡುಗಡೆಗೊಳಿಸಿ ಅವರು ಮಾತನಾಡಿದರು.
ಈ ಭಾಗದ ಸಿಂಗಟಾಲೂರ ಶ್ರೀ ವೀರಭದ್ರೇಶ್ವರ ದೇವಸ್ಥಾನ, ಮದಲಗಟ್ಟಿ, ಇಲ್ಲೂರ ತೋಟದ ನಂಜನಗೂಡ ಮಂತ್ರಾಲಯ ದೇವಸ್ಥಾನ, ದಾವಲ ಮಲ್ಲಿಕ್ ಗುಡ್ಡ ಸೇರಿದಂತೆ ಹತ್ತು ಹಲವಾರು ಪ್ರೇಕ್ಷಣೀಯ, ಐತಿಹಾಸಿಕ ಸ್ಥಳಗಳಲ್ಲಿ ಚಿತ್ರೀಕರಣ ನಡೆಯಲಿದೆ ಎಂದು ಮದರಸಾಬ್ ಸಿಂಗನಮಲ್ಲಿ ಅಭಿಪ್ರಾಯಪಟ್ಟರು.
ನಿರ್ದೇಶಕರಾದ ಡಾ| ಬಿ.ಎನ್. ಹೊರಪೇಟ, ಕಥೆ ಚಿತ್ರಕಥೆ ಡಾ| ಲಕ್ಷ್ಮಣ ಕುಲಕರ್ಣಿ, ಸಂಭಾಷಣೆ ಎಸ್., ಬಿ. ಶಶಿಧರ, ಪುಣ್ಯಕೋಟಿ ಪೂಜಾ, ಸರ್ಚಿ ಒಡೆಯರ ಮತ್ತು ಇತರರು ತಂಡದಲ್ಲಿ ಇದ್ದು, ಚಿತ್ರಿಕರಣದಲ್ಲಿ ಪಾಲ್ಗೊಳ್ಳಲಿದ್ದಾರೆಂದು ನಿರ್ದೇಶಕ ಡಾ| ಬಿ.ಎನ್. ಹೊರಪೇಟ ತಿಳಿಸಿದರು.