Advertisement

Spam Call/SMS report: ಸ್ಪ್ಯಾಮ್ ವರದಿ ಬಿಡುಗಡೆಗೊಳಿಸಿದ ಏರ್‌ಟೆಲ್

05:01 PM Dec 11, 2024 | Team Udayavani |

ಬೆಂಗಳೂರು: ಭಾರತಿ ಏರ್‌ಟೆಲ್, ಭಾರತದ ಮೊದಲ ಸ್ಪ್ಯಾಮ್ ವಿರೋಧಿ ನೆಟ್ವರ್ಕ್, ತನ್ನ ಎಐ-ಚಾಲಿತ, ಸ್ಪ್ಯಾಮ್ ವಿರೋಧಿ ಪರಿಹಾರವನ್ನು ಪರಿಚಯಿಸಿದ ಎರಡೂವರೆ ತಿಂಗಳುಗಳಲ್ಲಿಯೇ 8 ಬಿಲಿಯನ್ ಸ್ಪ್ಯಾಮ್ ಕರೆಗಳು ಮತ್ತು 0.8 ಬಿಲಿಯನ್ ಸ್ಪ್ಯಾಮ್ ಎಸ್.ಎಂ.ಎಸ್.ಗಳನ್ನು ವರದಿ ಮಾಡಿದೆ. ‌

Advertisement

ಈ ಸುಧಾರಿತ ಅಲ್ಗಾರಿದಮ್ ಬಳಸಿಕೊಂಡು ಎಐ-ಚಾಲಿತ ನೆಟ್ವರ್ಕ್ ಯಶಸ್ವಿಯಾಗಿ ಪ್ರತಿ ದಿನ ಅಂದಾಜು 1 ಮಿಲಿಯನ್ ಸ್ಪ್ಯಾಮರ್ ಗಳನ್ನು ಗುರುತಿಸಿದೆ.

ಸಂಸ್ಥೆಯು, ಕಳೆದ 2.5 ತಿಂಗಳುಗಳಲ್ಲಿ, ತನ್ನ 252 ಮಿಲಿಯನ್ ವಿಶಿಷ್ಟ ಗ್ರಾಹಕರಿಗೆ ಈ ಅನುಮಾನಾಸ್ಪದ ಕರೆಗಳ ಬಗ್ಗೆ ಎಚ್ಚರಿಕೆ ನೀಡಿದೆ. ಜೊತೆಗೆ ಇಂತಹ ಕರೆಗಳನ್ನು ಸ್ವೀಕರಿಸುವ ಗ್ರಾಹಕರ ಪ್ರಮಾಣದಲ್ಲಿ 12%ರಷ್ಟು ಕುಸಿತವನ್ನು ಸಹ ಗಮನಿಸಿದೆ. ಏರ್‌ಟೆಲ್ ನೆಟ್ವರ್ಕ್ ನ ಎಲ್ಲಾ ಕರೆಗಳಲ್ಲಿ ಶೇಕಡಾ 6% ಸ್ಪ್ಯಾಮ್ ಕರೆಗಳಾಗಿವೆ ಮತ್ತು ಎಲ್ಲಾ ಎಸ್.ಎಂ.ಎಸ್. ಗಳ ಶೇಕಡಾ 2% ರಷ್ಟು ಸಂದೇಶಗಳು ಸ್ಪ್ಯಾಮ್ ಸಂದೇಶಗಳು ಎಂದು ತಿಳಿದುಬಂದಿದೆ.

ಶೇ. 35%ರಷ್ಟು ಸ್ಪ್ಯಾಮರ್ ಗಳು ಸ್ಥಿರ ದೂರವಾಣಿಗಳನ್ನು ಬಳಸುತ್ತಾರೆ. ಹೆಚ್ಚುವರಿಯಾಗಿ, ದೆಹಲಿಯಲ್ಲಿರುವ ಗ್ರಾಹಕರು ಅತ್ಯಧಿಕ ಸ್ಪ್ಯಾಮ್ ಕರೆಗಳನ್ನು ಸ್ವೀಕರಿಸಿದರೆ, ಆಂಧ್ರಪ್ರದೇಶ ಮತ್ತು ಪಶ್ಚಿಮ ಉತ್ತರ ಪ್ರದೇಶ ಸ್ಪ್ಯಾಮ್ ಕರೆಗಳನ್ನು ಸ್ವೀಕರಿಸುವ ನಂತರದ ರಾಜ್ಯಗಳಾಗಿವೆ.

ಗರಿಷ್ಠ ಸ್ಪ್ಯಾಮ್ ಕರೆಗಳ ಮೂಲವು ಮೊದಲು ದೆಹಲಿ, ನಂತರ ಮುಂಬೈ ಮತ್ತು ಕರ್ನಾಟಕದ್ದಾಗಿದೆ ಎಂದೂ ಸಹ ಗಮನಿಸಲಾಗಿದೆ. ಎಸ್.ಎಂ.ಎಸ್.ಗಳಿಗೆ ಸಂಬಂಧಿತ ವಿಷಯದಲ್ಲಿ, ಮೊದಲು ಗುಜರಾತ್, ನಂತರ ಕೊಲ್ಕತ್ತಾ ಮತ್ತು ಉತ್ತರ ಪ್ರದೇಶದಿಂದ ಹೆಚ್ಚಿನ ಸ್ಪ್ಯಾಮ್ ಸಂದೇಶಗಳನ್ನು ಕಳುಹಿಸಲಾಗಿದೆ ಮತ್ತು ಮುಂಬೈ, ಚೆನ್ನೈ ಹಾಗೂ ಗುಜರಾತ್ ನಗರಗಳಲ್ಲಿನ ಗ್ರಾಹಕರು ಸ್ಪ್ಯಾಮ್ ಕರೆಗಳಿಗೆ ಗುರಿಯಾಗಿದ್ದಾರೆ.

Advertisement

ಇತ್ತೀಚಿನ ಪ್ರವೃತ್ತಿಗಳ ಪ್ರಕಾರ, ಎಲ್ಲಾ ಸ್ಪ್ಯಾಮ್ ಕರೆಗಳ ಶೇಖಡಾ 76%ರಷ್ಟು ಸ್ಪ್ಯಾಮ್ ಕರೆಗಳು ಪುರುಷ ಗ್ರಾಹಕರನ್ನು ಗುರಿಪಡಿಸುತ್ತದೆ. ಜೊತೆಗೆ, ವಯಸ್ಸಿನ ಅಂಕಿ-ಅಂಶಗಳಾದ್ಯಂತ ಸ್ಪ್ಯಾಮ್ ಕರೆಗಳ ಆವರ್ತನದಲ್ಲಿಯೂ ಸಹ ಗಮನಾರ್ಹ ವ್ಯತ್ಯಾಸಗಳನ್ನು ಕಾಣಬಹುದಾಗಿದೆ.

36-60 ವಯಸ್ಸಿನ ಗ್ರಾಹಕರು ಶೇಖಡಾ 48%ರಷ್ಟು ಸ್ಪ್ಯಾಮ್ ಕರೆಗಳನ್ನು ಸ್ವೀಕರಿಸುತ್ತಾರೆ. ಇನ್ನು 26-35 ವಯೋಮಿತಿಯವರು ಎಲ್ಲಾ ಕರೆಗಳ ಶೇಖಡಾ 26%ರಷ್ಟು ಸ್ಪ್ಯಾಮ್ ಕರೆಗಳನ್ನು ಸ್ವೀಕರಿಸುತ್ತಾರೆ. ಈ ವಯೋಮಿತಿಯವರು ಎರಡನೇ ಅತ್ಯಂತ ಹೆಚ್ಚಿನ ಸ್ಪ್ಯಾಮ್ ಕರೆಗಳನ್ನು ಸ್ವೀಕರಿಸುವವರಾಗಿದ್ದಾರೆ. ಇನ್ನು ಅಂದಾಜು, ಎಲ್ಲಾ ಸ್ಪ್ಯಾಮ್ ಕರೆಗಳ ಕೇವಲ 8%ರಷ್ಟು ಮಾತ್ರ ಹಿರಿಯ ನಾಗರಿಕರಿಗೆ ಮಾಡಲಾಗಿದೆ.

ಸಂಸ್ಥೆಯ ತನಿಖೆಯು ಸ್ಪ್ಯಾಮ್ ಚಟುವಟಿಕೆಯ ಗಂಟೆಯ ವಿತರಣೆಯ ಮೇಲೆಯೂ ಸಹ ಬೆಳಕು ಚೆಲ್ಲುತ್ತದೆ. ಸ್ಪ್ಯಾಮ್ ಕರೆಗಳು ಬೆಳಗ್ಗೆ 9ರ ನಂತರ ಶುರುವಾಗುತ್ತಾ, ದಿನದ ಸಮಯ ಹೆಚ್ಚಾಗುತ್ತಿದ್ದಂತೆ ಸ್ಪ್ಯಾಮ್ ಕರೆಗಳ ಸಂಖ್ಯೆಯೂ ಸಹ ಹೆಚ್ಚುತ್ತದೆ. ಸ್ಪ್ಯಾಮ್ ಕರೆಗಳನ್ನು ಸಾಮಾನ್ಯವಾಗಿ ಮಧ್ಯಾಹ್ನ 12 ಗಂಟೆಯಿಂದ 3ರವರೆಗೆ ಬಹಳ ಹೆಚ್ಚಾಗಿ ಕಾಣಬಹುದು.

ಇದಲ್ಲದೆ, ವಾರದ ದಿನಗಳು ಮತ್ತು ವಾರಾಂತ್ಯಗಳಲ್ಲಿನ ಕರೆಗಳಲ್ಲಿಯೂ ಸಹ ಸ್ಪ್ಯಾಮ್ ಕರೆಗಳ ಆವರ್ತನಗಳಲ್ಲಿ ಬಹಳ ವ್ಯತ್ಯಾಸವನ್ನು ಕಾಣಬಹುದು. ಭಾನುವಾರದ ದಿನದಂದು ಈ ಕರೆಗಳು ಶೇಖಡಾ 40%ರಷ್ಟು ಕಡಿಮೆಯಾಗುತ್ತದೆ. ನಿರ್ದಿಷ್ಟವಾಗಿ ಹೇಳುವುದಾದರೆ, ರೂ. 15,000 ದಿಂದ ರೂ.20,000ಗಳವರೆಗಿನ ಸಾಧನಗಳನ್ನು ಬಳಸುವವರು ಎಲ್ಲ ಸ್ಪ್ಯಾಮ್ ಕರೆಗಳ ಶೇಖಡಾ 22%ರಷ್ಟು ಕರೆಗಳನ್ನು ಸ್ವೀಕರಿಸುತ್ತಾರೆ.

Advertisement

Udayavani is now on Telegram. Click here to join our channel and stay updated with the latest news.

Next