Advertisement

ಜಮ್ಮು ಕಾಶ್ಮೀರದಲ್ಲಿ ಏರ್‌ಟೆಲ್‌ 4ಜಿ ಸೇವೆ ; ದೇಶವ್ಯಾಪಿ ಜಾಲ ಪೂರ್ಣ

03:55 PM Mar 14, 2017 | udayavani editorial |

ಜಮ್ಮು : ಭಾರತದ ಅತೀ ದೊಡ್ಡ ದೂರಸಂಪರ್ಕ ಸೇವಾ ಪೂರೈಕೆದಾರ ಸಂಸ್ಥೆಯಾಗಿರುವ ಭಾರ್ತಿ ಏರ್‌ಟೆಲ್‌, ಜಮ್ಮು ಕಾಶ್ಮೀರದಲ್ಲಿ ತನ್ನ 4ಜಿ ಸೇವೆಯನ್ನು ಆರಂಭಿಸಿರುವುದಾಗಿ ಇಂದು ಪ್ರಕಟಿಸಿದೆ. ಇದರೊಂದಿಗೆ ತನ್ನ ದೂರಸಂಪರ್ಕ ಜಾಲಕ್ಕೆ ಇಡಿಯ ದೇಶ ಒಳಪಟ್ಟಂತಾಗಿದೆ ಎಂದು ಅದು ಹೇಳಿಕೊಂಡಿದೆ.

Advertisement

ಜಮ್ಮು ಕಾಶ್ಮೀರದಲ್ಲಿ 4ಜಿ ಸೇವೆಯನ್ನು ಆರಂಭಿಸುವ ಮೂಲಕ ಏರ್‌ಟೆಲ್‌ 4ಜಿ ಸೇವೆ ಈಗ ದೇಶಾದ್ಯಂತದ 22 ಟೆಲಿಕಾಂ ವೃತ್ತಗಳಲ್ಲಿ ದೊರಕಿದಂತಾಗಿದೆ.

ಭಾರ್ತಿ ಏರ್‌ಟೆಲ್‌ನ ಜಮ್ಮು ಕಾಶ್ಮೀರ ಸಿಓಓ ರವೀಂದ್ರ ದೇಸಾಯಿ ಅವರು “ಜಮ್ಮು ಕಾಶ್ಮೀರದಲ್ಲಿ 4ಜಿ ಸೇವೆಯನ್ನು ಆರಂಭಿಸುವುದಕ್ಕೆ ನಾವು ಸಂತಸ ಪಡುತ್ತೇವೆ. ಭಾರತದ ಅತ್ಯುತ್ತಮ ಸ್ಮಾರ್ಟ್‌ ಫೋನ್‌ ನೆಟ್‌ವರ್ಕನ್ನು ಇಲ್ಲಿನ ಜನರು ಕೂಡ ಪಡೆಯುವಂತಾಗಿದ್ದು ಜನರು ಇದರ ಪೂರ್ಣ ಪ್ರಯೋಜನ ಪಡೆಯಬೇಕು ಎಂದು ಕರೆ ನೀಡಿದರು. 

Advertisement

Udayavani is now on Telegram. Click here to join our channel and stay updated with the latest news.

Next