Advertisement

ಏರ್ ಟೆಲ್, ಜಿಯೋ  ಜಿದ್ದಾಜಿದ್ದಿ..!?

05:57 PM Jul 30, 2021 | |

ನವ ದೆಹಲಿ : ಟೆಲಿಕಾಂ ನೆಟ್ ವರ್ಕ್ ನ ದೈತ್ಯ ಸಂಸ್ಥೆ ಏರ್ ಟೆಲ್ ತನ್ನ  ಅಗ್ಗದ ರೀಚಾರ್ಜ್ ಪ್ಯಾನ್ 49 ರೂ. ನನ್ನು ನಿಲ್ಲಿಸಿ ತನ್ನ ಆರಂಭಿಕ ರೀಚಾರ್ಜ್ ದರವನ್ನು 79 ರೂ ಗೆ ಏರಿಸಿದ ಬೆನ್ನಿಗೆ ರಿಲಯನ್ಸ್ ಜಿಯೋ ಸಂಸ್ಥೆ 75 ರೂ ಯೋಜನೆ ಬಲವಾದ ಪೈಪೋಟಿ ನೀಡುವಂತಿದೆ.

Advertisement

ಏರ್‌ ಟೆಲ್‌ ನ ಈ ಯೋಜನೆಯು ಡೇಟಾ ಮತ್ತು ಕರೆಗಳನ್ನು ಒಳಗೊಂಡಿರುತ್ತದೆ. ಜಿಯೋ ತನ್ನ ಬಳಕೆದಾರರಿಗೆ ಗರಿಷ್ಠ ಪ್ರಯೋಜನಗಳನ್ನು ನೀಡುತ್ತಿದೆ. ಆದರೆ ಜಿಯೋನ ಈ ಯೋಜನೆ ಜಿಯೋ ಫೋನ್ ಬಳಕೆದಾರರಿಗೆ ಮಾತ್ರ ಎನ್ನುವುದು ಇಲ್ಲಿ ಗಮನಿಸಬೇಕಾದ ಪ್ರಮುಖಾಂಶ.

ಇದನ್ನೂ ಓದಿ ಹಣ ಪಡೆದು ವಾಹನಗಳ ಸಂಚಾರಕ್ಕೆ ಅನುಮತಿ : ಕರವೇ ಪ್ರವೀಣ್ ಶೆಟ್ಟಿ ಬಣದಿಂದ ಪ್ರತಿಭಟನೆ

ಏರ್‌ ಟೆಲ್ ನ 79 ರೂ. ರೀಚಾರ್ಜ್ ಪ್ಲ್ಯಾನ್ :

ಏರ್‌ ಟೆಲ್ ನ 79 ರೂಗಳ  ಪ್ರಿಪೇಯ್ಡ್ ಯೋಜನೆಯಲ್ಲಿ, 64 ರೂ.ಗಳ ಟಾಕ್ ಟೈಮ್ ಲಭ್ಯವಿರುತ್ತದೆ. 28 ದಿನಗಳ ಸಿಂಧುತ್ವವು ಕೂಡ ಇರಲಿದೆ. ಮಾತ್ರವಲ್ಲದೇ 200 ಎಂ.ಬಿ ಡೇಟಾವೈ ಕೂಡ ಲಭ್ಯವಿದೆ. 49 ರೂ.ಗಳ ಯೋಜನೆಯಲ್ಲಿ, ಬಳಕೆದಾರರಿಗೆ 38 ರೂ.ಗಳ ಟಾಕ್ ಟೈಮ್ ನೀಡಲಾಗುತ್ತಿತ್ತು ಮತ್ತು 100 ಎಂ.ಬಿ ಡೇಟಾ ಕೂಡಾ ಸಿಗುತ್ತಿತ್ತು. ಇನ್ನು ಇದರ ಸಿಂಧುತ್ವವು 28 ದಿನಗಳವರೆಗೆ ಇರಲಿದೆ.

Advertisement

ಜಿಯೋ 75 ರೂ .  ಪ್ಲ್ಯಾನ್ :

ರಿಲಯನ್ಸ್ ಜಿಯೋ 75 ರೂ ಯೋಜನೆಯ ಹೆಸರು JIOPHONE ALL-IN-ONE PLAN. ಇದರಲ್ಲಿ ಬಳಕೆದಾರರಿಗೆ 3 ಜಿಬಿ ಲಭ್ಯವಿದೆ. ಅಲ್ಲದೆ, ಹೆಚ್ಚುವರಿ 200 ಎಂ. ಬಿ ಡೇಟಾ ಕೂಡ ಸಿಗುತ್ತದೆ. ಸಿಂಧುತ್ವವು 28 ದಿನಗಳವರೆಗೆ ಇರಲಿದೆ. ಈ ಯೋಜನೆಯಲ್ಲಿ, ಯಾವುದೇ ನೆಟ್‌ ವರ್ಕ್‌ನಲ್ಲಿ ಅನಿಯಮಿತ ಕರೆ ಮಾಡುವ ಸೌಲಭ್ಯ ಇರುತ್ತದೆ. ಅಲ್ಲದೆ, 50 ಎಸ್‌ಎಂಎಸ್ ಸಹ ನೀಡಲಾಗಿದೆ. ಇದರೊಂದಿಗೆ ಜಿಯೋ ಅಪ್ಲಿಕೇಶನ್‌ಗಳಿಗೆ ಚಂದಾದಾರಿಕೆಯನ್ನು ಸಹ ಗ್ರಾಹಕರು ಪಡೆದುಕೊಳ್ಳಬಹುದಾಗಿದೆ.

ಇದನ್ನೂ ಓದಿ : ಜಾಗತಿಕ ಷೇರುಪೇಟೆ ಎಫೆಕ್ಟ್: ಮುಂಬಯಿ ಷೇರುಪೇಟೆ ಸೆನ್ಸೆಕ್ಸ್, ನಿಫ್ಟಿ ಇಳಿಕೆ

Advertisement

Udayavani is now on Telegram. Click here to join our channel and stay updated with the latest news.

Next