Advertisement

ಬೆಂಗಳೂರು ಸೇರಿದಂತೆ ಎಂಟು ನಗರಗಳಲ್ಲಿ ಏರ್‌ಟೆಲ್‌ 5ಜಿ ಪ್ಲಸ್‌ ಸೇವೆ ಶುರು

08:03 PM Oct 06, 2022 | Team Udayavani |

ನವದೆಹಲಿ : ಭಾರ್ತಿ ಏರ್‌ಟೆಲ್‌ ಬೆಂಗಳೂರು ಸೇರಿದಂತೆ ಎಂಟು ನಗರಗಳಲ್ಲಿ 5ಜಿ ಪ್ಲಸ್‌ ಸೇವೆಯನ್ನು ಆರಂಭಿಸಿದೆ. ಈ ಮೂಲಕ ಅದು ದೇಶದಲ್ಲಿ ಹೊಸ ಸೇವೆಯನ್ನು ಶುರು ಮಾಡಿರುವ ಮೊದಲ ದೂರಸಂಪರ್ಕ ಕಂಪನಿ ಎಂಬ ಹೆಗ್ಗಳಿಕೆಗೆ ಕೂಡ ಪಾತ್ರವಾಗಿದೆ.

Advertisement

ನವದೆಹಲಿ, ಮುಂಬೈ, ಚೆನ್ನೈ, ಹೈದರಾಬಾದ್‌, ಸಿಲಿಗುರಿ, ನಾಗ್ಪುರ ಮತ್ತು ವಾರಾಣಸಿ ಇತರ ಇತರ ನಗರಗಳಾಗಿವೆ. ರಿಲಯನ್ಸ್‌ ಜಿಯೋ ಹೊಂದಿರುವ ಮಾದರಿಯಲ್ಲಿಯೇ ಏರ್‌ಟೆಲ್‌ನ ಸೇವೆಯೂ ಇರಲಿದೆ.

ಎಂಟು ನಗರಗಳಲ್ಲಿ ಇರುವ ಏರ್‌ಟೆಲ್‌ ಬಳಕೆದಾರರಿಗೆ ಹೊಸ ಸಿಮ್‌ ಪಡೆದುಕೊಳ್ಳದೆಯೇ 5ಜಿ ಸೇವೆಯನ್ನು ಪಡೆದುಕೊಳ್ಳಲು ಸಾಧ್ಯವಿದೆ. ರಿಲಯನ್ಸ್‌ ಜಿಯೋ ನವದೆಹಲಿ, ಮುಂಬೈ, ಕೋಲ್ಕತಾ, ವಾರಾಣಸಿಯಲ್ಲಿ 5ಜಿ ಸೇವೆ ಲಭ್ಯವಾಗಲಿದೆ.

ಇದನ್ನೂ ಓದಿ : ದಸರಾ ರ‍್ಯಾಲಿಯಲ್ಲಿ ಶಿಂಧೆ ‘ನಿಜವಾದ ಶಿವಸೇನೆ’ ತೋರಿಸಿದ್ದಾರೆ: ಫಡ್ನವಿಸ್

Advertisement

Udayavani is now on Telegram. Click here to join our channel and stay updated with the latest news.

Next