ನವದೆಹಲಿ: ಉಡಾನ್‌ಯೋಜನೆ ಅನ್ವಯ ಟೈರ್-2 ಹಾಗೂ ಟೈರ್-3 ಶ್ರೇಣಿ ನಗರಗಳಲ್ಲಿ ಕಾರ್ಯನಿರ್ವಹಿಸುತ್ತಿರುವ 60ಕ್ಕೂ ಹೆಚ್ಚು ವಿಮಾನ ನಿಲ್ದಾಣಗಳಲ್ಲಿ ಕೈಗಾರಿಕಾ ಭದ್ರತಾ ಪಡೆ (ಸಿಐಎಸ್‌ಎಫ್) ಸಿಬ್ಬಂದಿಯನ್ನೊಳಗೊಂಡ 1,650 ಟ್ರೂಪ್‌ಗ್ಳನ್ನು ಶೀಘ್ರವೇ ನಿಯೋಜಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸಣ್ಣ ಟರ್ಮಿನಲ್‌ಗಳಿಂದ ಪ್ರಯಾಣಿಸುವ ಪ್ರಯಾಣಿಕರ ಸುರಕ್ಷತೆ ಹಿತದೃಷ್ಟಿಯಿಂದ ಭದ್ರತಾ ಪಡೆಗಳ ನಿಯೋಜನೆಗೆ ನಾಗರಿಕ ವಿಮಾನಯಾನ ಭದ್ರತಾ ಬ್ಯೂರೋ (ಬಿಸಿಎಎಸ್) ಕೇಂದ್ರ ನಾಗರಿಕ ವಿಮಾನಯಾನ ಸಚಿವಾಲಯ ಹಾಗೂ ಸಿಐಎಸ್‌ಎಫ್ ಜತೆಗೆ ಸಮಾಲೋಚಿಸಿ ಪ್ರಸ್ತಾಪ ಸಲ್ಲಿಸಿತ್ತು. ಉಗ್ರ ನಿಗ್ರಹ ಭದ್ರತಾ ವ್ಯವಸ್ಥೆಗೆ ಕೇಂದ್ರ ಗೃಹ ಸಚಿವಾಲಯದಿಂದ ಅಂತಿಮ ಅನುಮೋದನೆ ಬಾಕಿ ಇದೆ ಎಂದು ಹೇಳಿದ್ದಾರೆ.
ಸದ್ಯಕ್ಕೆ ಉಡಾನ್ ಅನ್ವಯ ಕಾರ್ಯನಿರ್ವಹಿಸುತ್ತಿರುವ ಕೆಲವು ಟರ್ಮಿನಲ್‌ಗಳಲ್ಲಿ ಸಿಐಎಸ್‌ಎಫ್ ಯೋಧರನ್ನು ನಿಯೋಜಿಸಲಾಗಿದ್ದು, ಇನ್ನೂ ಹಲವು ಟರ್ಮಿನಲ್‌ಗಳಲ್ಲಿ ರಾಜ್ಯ ಪೊಲೀಸ್ ಪಡೆಗಳ ವಿವಿಧ ಘಟಕಗಳು ನಿಯೋಜನೆಗೊಂಡಿವೆ.
ಇದನ್ನೂ ಓದಿ: ವಂದೇ ಭಾರತ್ 8ನೇ ರೈಲು ಲೋಕಾರ್ಪಣೆ: ಸಿಖಂದರಾಬಾದ್ – ವಿಶಾಖಪಟ್ಟಣಂ ನಡುವೆ ಸಂಚಾರ