Advertisement

ಕಾರ್‌ ಬದಲು ವಿಮಾನ ಪಾರ್ಕ್‌

02:13 AM Jun 27, 2019 | mahesh |

ವಾಷಿಂಗ್ಟನ್‌: ಜಗತ್ತಿನ ಪ್ರಮುಖ ವಿಮಾನ ತಯಾರಿಕೆ ಕಂಪೆನಿ ಬೋಯಿಂಗ್‌ನ ವಿಮಾನಗಳು ಒಂದಾದ ಮೇಲೆ ಒಂದರಂತೆ ತಾಂತ್ರಿಕ ದೋಷ ಎದುರಿಸುತ್ತಿದ್ದು, ನೂರಾರು ವಿಮಾನಗಳು ಹಾರಾಟ ನಡೆಸದೇ ರಿಪೇರಿಗೆ ಬಾಕಿ ಇವೆ. ಪರಿಸ್ಥಿತಿ ಈಗ ಯಾವ ಮಟ್ಟಕ್ಕೆ ತೆರಳಿದೆಯೆಂದರೆ, ಅಮೆರಿಕದ ವಾಷಿಂಗ್ಟನ್‌ನಲ್ಲಿರುವ ಕಂಪೆನಿಯ ಸ್ಥಳದಲ್ಲಿ ಈಗ ವಿಮಾನಗಳನ್ನು ಪಾರ್ಕ್‌ ಮಾಡುವುದಕ್ಕೆ ಸ್ಥಳವಿಲ್ಲದೇ, ಉದ್ಯೋಗಿಗಳ ಕಾರು ಪಾರ್ಕ್‌ ಮಾಡುವುದಕ್ಕೆಂದು ಮೀಸಲಾದ ಸ್ಥಳದಲ್ಲಿ ವಿಮಾನಗಳನ್ನು ಪಾರ್ಕ್‌ ಮಾಡಲಾಗಿದೆ. ಇದರ ಫೋಟೋಗಳು ಈಗ ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗಿವೆ.

Advertisement

ಇದೇ ಸಮಸ್ಯೆಯಿಂದಾಗಿ ಲಯನ್‌ ಏರ್‌ ಮತ್ತು ಇಥಿಯೋಪಿಯನ್‌ ಏರ್‌ಲೈನ್ಸ್‌ನ ವಿಮಾನಗಳು ಅಕ್ಟೋಬರ್‌ ಮತ್ತು ಮಾರ್ಚ್‌ ನಲ್ಲಿ ಅಪಘಾತಕ್ಕೀಡಾಗಿ 350 ಜನರು ಸಾವನ್ನಪ್ಪಿದ್ದರು. ಈ ಘಟನೆಯ ಅನಂತರ ಬೋಯಿಂಗ್‌ನ 737 ಮ್ಯಾಕ್ಸ್‌ ವಿಮಾನಗಳನ್ನು ದೇಶಾದ್ಯಂತ ಸೇವೆಯಿಂದ ಹಿಂಪಡೆಯಲಾಗಿತ್ತು. ಮೂಲಗಳ ಪ್ರಕಾರ ಒಟ್ಟು 500 ವಿಮಾನಗಳು ದೇಶದ ವಿವಿಧೆಡೆ ಕಾರ್ಯಾಚರಣೆ ನಡೆಸದೇ ವಿಮಾನ ನಿಲ್ದಾಣಗಳಲ್ಲಿ ನಿಂತಿವೆ. ಈ ಪೈಕಿ ವಾಷಿಂಗ್ಟನ್‌ನಲ್ಲಿರುವ ಬೋಯಿಂಗ್‌ನ ಫ್ಯಾಕ್ಟರಿಯಲ್ಲಿ 100 ವಿಮಾನಗಳಿವೆ. ಇದರ ಮಾಸಿಕ ನಿರ್ವಹಣೆ ವೆಚ್ಚವೇ ಮಾಸಿಕ ತಲಾ ವಿಮಾನಕ್ಕೆ 1.5 ಲಕ್ಷ ರೂ. ಆಗಲಿದೆ. ಅಷ್ಟೇ ಅಲ್ಲ, ಈ ವಿಮಾನ ಕಾರ್ಯಾಚರಣೆ ನಿಲ್ಲಿಸಿದ್ದರಿಂದಾಗಿ ವಿವಿಧ ವಿಮಾನಯಾನ ಸಂಸ್ಥೆಗಳಿಗೆ ಉಂಟಾದ ಆರ್ಥಿಕ ನಷ್ಟವನ್ನೂ ಬೋಯಿಂಗ್‌ ತುಂಬಿಕೊಡಬೇಕಾಗಿದ್ದು, ಇದಕ್ಕಾಗಿ 9 ಸಾವಿರ ಕೋಟಿ ರೂ. ಅನ್ನು ಬೋಯಿಂಗ್‌ ವೆಚ್ಚ ಮಾಡಬೇಕಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next