Advertisement

ಏರ್‌ಸೆಲ್‌: ಜೂ.5ರ ವರೆಗೆ ಚಿದಂಬರಂ ವಿರುದ್ದ ಬಲವಂತದ ಕ್ರಮ ಇಲ್ಲ

11:24 AM May 30, 2018 | udayavani editorial |

ಹೊಸದಿಲ್ಲಿ : ಏರ್‌ಸೆಲ್‌ ಮ್ಯಾಕ್ಸಿಸ್‌ ಹಣ ದುರುಪಯೋಗ ಕೇಸಿಗೆ ಸಂಬಂಧಿಸಿ ಸಂಭವನೀಯ ಬಂಧನದಿಂದ ತನಗೆ ರಕ್ಷಣೆ ನೀಡಬೇಕು ಎಂದು ಕೋರಿ ದಿಲ್ಲಿ ನ್ಯಾಯಾಲಯವನ್ನು ಸಂಪರ್ಕಿಸಿರುವ ಮಾಜಿ ಕೇಂದ್ರ ಹಣಕಾಸು ಸಚಿವ ಪಿ ಚಿದಂಬರಂ ಅವರಿಗೆ ನ್ಯಾಯಾಲಯ ಜೂನ್‌ 5ರ ವರೆಗೆ ರಕ್ಷಣೆ ನೀಡಿದೆ.

Advertisement

ಚಿದಂಬರಂ ಅವರ ಅರ್ಜಿಯನ್ನು ಪರಿಗಣಿಸಿ ನ್ಯಾಯಾಲಯ ಜಾರಿ ನಿರ್ದೇಶನಾಲಯಕ್ಕೆ ನೊಟೀಸ್‌ ಜಾರಿ ಮಾಡಿದ್ದು ಜೂನ್‌ 5ರ ಒಳಗೆ ಉತ್ತರಿಸುವಂತೆ ಮತ್ತು ಅಲ್ಲಿಯ ವರೆಗೆ ಚಿದಂಬರಂ ವಿರುದ್ಧ ಯಾವುದೇ ಬಲವಂತದ ಕ್ರಮ ತೆಗೆದುಕೊಳ್ಳದಂತೆ ಆದೇಶಿಸಿದೆ. 

2 ಜಿ ತರಂಗಾಂತರ ಕೇಸುಗಳಿಗೆ ಸಂಬಂಧಿಸಿದಂತೆ ಏರ್‌ಸೆಲ್‌ ಮ್ಯಾಕ್ಸಿಸ್‌ ವಿಷಯದಲ್ಲಿ ಸಿಬಿಐ ಮತ್ತು ಜಾರಿ ನಿರ್ದೇಶನಾಲಯ ದಾಖಲಿಸಿರುವ ಎರಡು ಕೇಸುಗಳಲ್ಲಿ ದಿಲ್ಲಿ ನ್ಯಾಯಾಲಯ ಚಿದಂಬರಂ ಅವರ ಪುತ್ರ ಕಾರ್ತಿ ಚಿದಂಬರಂ ಅವರಿಗೆ ಜುಲೈ 10ರ ವರೆಗಿನ ಅವಧಿಗೆ  ಮಧ್ಯಾವಧಿ ರಕ್ಷಣೆಯನ್ನು ನೀಡಿತ್ತು. 

ಏರ್‌ಸೆಲ್‌ ಕಂಪೆನಿಯಲ್ಲಿ ಹೂಡಿಕೆಗಾಗಿ ಗ್ಲೋಬಲ್‌ ಕಮ್ಯುನಿಕೇಶನ್‌ ಹೋಲ್ಡಿಂಗ್‌ ಸರ್ವಿಸಸ್‌ ಲಿಮಿಟೆಡ್‌ಗೆ ವಿದೇಶಿ ಹೂಡಿಕೆ ಪ್ರೋತ್ಸಾಹನ ಮಂಡಳಿಯ ಅನುಮತಿ ಮಂಜೂರಾತಿಗೆ ಸಂಬಂಧಪಟ್ಟಿರುವ ವಿಷಯ ಇದಾಗಿದೆ. 2015ರ ಸೆಪ್ಟಂಬರ್‌ನಲ್ಲಿ ಸಿಬಿಐ ಈ ವಿಷಯಕ್ಕೆ ಸಂಬಂಧಿಸಿ ತಾಜಾ ಸ್ಥಿತಿಗತಿ ವರದಿಯನ್ನು ಸಲ್ಲಿಸಿತ್ತು. 

Advertisement

Udayavani is now on Telegram. Click here to join our channel and stay updated with the latest news.

Next