Advertisement

ಇನ್ನು ಜಪಾನ್‌, ಜರ್ಮನಿ, ಕೆನಡಾದಲ್ಲೂ ಆಕಾಶವಾಣಿ

06:10 AM Oct 02, 2017 | |

ಹೊಸದಿಲ್ಲಿ: ಇನ್ನು ಮುಂದೆ ಜಪಾನ್‌, ಜರ್ಮನಿ, ಕೆನಡಾ, ದಕ್ಷಿಣ ಆಫ್ರಿಕಾ, ಮಾಲ್ಡೀವ್ಸ್‌ನಲ್ಲೂ ಆಕಾಶವಾಣಿ ಯನ್ನು ಆಲಿಸಬಹುದು. ವಿವಿಧ ದೇಶಗಳಲ್ಲಿರುವ ಭಾರತೀಯರ ತಲುಪುವ ಉದ್ದೇಶದಿಂದ ಆಲ್‌ ಇಂಡಿಯಾ ರೇಡಿಯೋ (ಎಐಆರ್‌)ವು ತನ್ನ ವ್ಯಾಪ್ತಿಯನ್ನು ವಿಸ್ತರಿಸಲು ಕ್ರಮ ಕೈಗೊಂಡಿದೆ. 

Advertisement

ಅದರಂತೆ, ಬೇರೆ ಬೇರೆ ದೇಶಗಳಲ್ಲಿ ಸೇವೆ ವಿಸ್ತರಿಸಲಿದೆ. ಈಗಾಗಲೇ 150 ದೇಶಗಳಲ್ಲಿ 27 ಭಾಷೆಗಳಲ್ಲಿ ಆಕಾಶವಾಣಿಯು ಪ್ರಸಾರವಾಗುತ್ತಿದ್ದು, ಈ ಸಂಖ್ಯೆಯನ್ನು ಇನ್ನಷ್ಟು ಹೆಚ್ಚಿಸಲಾಗುವುದು ಎಂದು ಬಾಹ್ಯ ಸೇವಾ ವಿಭಾಗ (ಇಎಸ್‌ಡಿ)ದ ನಿರ್ದೇಶಕ ಅಮ್ಲನ್‌ಜ್ಯೋತಿ ಮಜುಮಾªರ್‌ ತಿಳಿಸಿದ್ದಾರೆ. ಇಎಸ್‌ಡಿ ಕಾರ್ಯಕ್ರಮದಲ್ಲಿ ನ್ಯೂಸ್‌ ಬುಲೆಟಿನ್‌, ಸಂವಾದ, ಸಂದರ್ಶನ, ಸಾಕ್ಷ್ಯಚಿತ್ರ, ಸಂಗೀತ, ನಾಟಕಗಳು ಪ್ರಸಾರವಾಗಲಿವೆ.
 

Advertisement

Udayavani is now on Telegram. Click here to join our channel and stay updated with the latest news.

Next