Advertisement

4800 ಜನ ಅಕಾಲಿಕ ಸಾವು

06:00 AM Jul 15, 2018 | Team Udayavani |

ಹೊಸದಿಲ್ಲಿ: ವಾಯು ಮಾಲಿನ್ಯದ ಕಾರಣದಿಂದಾಗಿ ಬೆಂಗಳೂರಿನಲ್ಲಿ 4,800 ಮಂದಿ ಅಕಾಲಿಕ ಸಾವನ್ನಪ್ಪಿದ್ದಾರೆ ಎಂಬ ಆಘಾತಕಾರಿ ಸುದ್ದಿ ಹೊರಬಿದ್ದಿದೆ. ಬ್ರಿಟನ್‌ ಮೂಲದ ಸರ್ರೆ ಗ್ಲೋಬಲ್‌ ಸೆಂಟರ್‌ ಫಾರ್‌ ಕ್ಲೀನ್‌ ರಿಸರ್ಚ್‌ ಈ ಅಧ್ಯಯನ ನಡೆಸಿದ್ದು ಏಷ್ಯಾದಲ್ಲೇ ವಾಯು ಮಾಲಿನ್ಯದ ಪ್ರಮಾಣ ಹೆಚ್ಚಾಗಿದೆ ಎಂದು ಹೇಳಿದೆ. ದೇಶದಲ್ಲಿ ದಿಲ್ಲಿ ಮೊದಲ ಸ್ಥಾನದಲ್ಲಿದ್ದು ಇಲ್ಲಿ 15000 ಮಂದಿ ಅಕಾಲಿಕ ಮರಣ ಹೊಂದಿದ್ದಾರೆ ಎಂದು ಹೇಳಿದೆ. 2016ರಲ್ಲಿ ಈ ಅಧ್ಯಯನ ನಡೆಸಲಾಗಿದ್ದು ಇದೀಗ ಅಟ್ಮೋಸ್ಪಿಯರ್‌ ಎನ್ವಿರಾನ್‌ಮೆಂಟ್‌ ಎಂಬ ಜರ್ನಲ್‌ನಲ್ಲಿ ಈ ವರದಿ ಬಹಿರಂಗಗೊಂಡಿದೆ. 

Advertisement

ಬೀಜಿಂಗ್‌ನಲ್ಲಿ ಅತಿ ಹೆಚ್ಚು, ಅಂದರೆ 18,200, ಶಾಂಘೈನಲ್ಲಿ 17,600 ಮಂದಿ ಅಕಾಲಿಕ ಮರಣವನ್ನಪ್ಪಿದ್ದಾರೆ. ಇನ್ನು ಭಾರತದ ನಗರಗಳಲ್ಲಿ ಮುಂಬೈನಲ್ಲಿ 10,500, ಕೋಲ್ಕತಾದಲ್ಲಿ 7,300, ಬೆಂಗಳೂರು ಮತ್ತು ಚೆನ್ನೈನಲ್ಲಿ ತಲಾ 4,800 ಮಂದಿ ಸಾವನ್ನಪ್ಪಿದ್ದಾರೆ ಎಂದು ವರದಿ ಹೇಳಿದೆ. ವಾಯು ಮಾಲಿನ್ಯದಿಂದ ಹೃದಯಸಂಬಂಧಿ ಕಾಯಿಲೆಗಳು, ಶ್ವಾಸಕೋಶ ಸಂಬಂಧಿತ ರೋಗಗಳು, ಕ್ಯಾನ್ಸರ್‌ ಮತ್ತು ಅಕಾಲಿಕ ಸಾವುಗಳು ಸಂಭವಿಸುತ್ತಿವೆ ಎಂದು ಈ ವರದಿ ಪ್ರಸ್ತಾಪಿಸಿದೆ. 

ವಾಯು ಮಾಲಿನ್ಯಕ್ಕೆ ವಾಹನ ಮತ್ತು ಕೈಗಾರಿಕೆಗಳೇ ಕಾರಣ ಎಂದು ಈ ವರದಿಯಲ್ಲಿ ಹೇಳಲಾಗಿದೆ. 

ದೇಶದ ಮೆಗಾಸಿಟಿಗಳಲ್ಲಿ ಹೆಚ್ಚುತ್ತಿದೆ ಮಾಲಿನ್ಯಕಾರಕ ಸಾವು
ಮಾಲಿನ್ಯದಿಂದ ದಿಲ್ಲಿಯಲ್ಲಿ 14,800 ಮಂದಿ ಬಲಿ
ಮುಂಬಯಿನಲ್ಲಿ 10,500, ಕೋಲ್ಕತಾದಲ್ಲಿ 7,300, ಚೆನ್ನೈನಲ್ಲಿ 4,800 ಮಂದಿ ಮೃತ
ಜಗತ್ತಿನ ಮೊದಲ ಎರಡು ಸ್ಥಾನಗಳಲ್ಲಿ ಬೀಜಿಂಗ್‌ ಮತ್ತು ಶಾಂಘೈ

Advertisement

Udayavani is now on Telegram. Click here to join our channel and stay updated with the latest news.

Next