ಹೊಸದಿಲ್ಲಿ: ವ್ಯಾಂಕೋವರ್‌ಗೆ ತೆರಳುತ್ತಿದ್ದ ಏರ್ ಇಂಡಿಯಾ ವಿಮಾನ ತಾಂತ್ರಿಕ ದೋಷದಿಂದ ಶುಕ್ರವಾರ(ಮೇ 26) ಟೇಕ್ ಆಫ್ ಆದ ಕೆಲವೇ ಕ್ಷಣಗಳಲ್ಲಿ ದೆಹಲಿಗೆ ಮರಳಿದೆ.
ಬೋಯಿಂಗ್ 777 ವಿಮಾನವು ರಾಷ್ಟ್ರ ರಾಜಧಾನಿಯಲ್ಲಿ ಸುರಕ್ಷಿತವಾಗಿ ಮರಳಿದೆ ಎಂದು ವಿಮಾನಯಾನ ಸಂಸ್ಥೆ ಹೇಳಿಕೆಯಲ್ಲಿ ತಿಳಿಸಿದೆ.
ವ್ಯಾಂಕೋವರ್‌ಗೆ ತೆರಳುವ ಏರ್ ಇಂಡಿಯಾ ವಿಮಾನ AI185, B777 ವಿಮಾನದಿಂದ ಕಾರ್ಯಾಚರಣೆ ನಡೆಸಲಾಯಿತು, ಟೇಕ್ ಆಫ್ ಆದ ಸ್ವಲ್ಪ ಸಮಯದ ನಂತರ ತಾಂತ್ರಿಕ ಸಮಸ್ಯೆಯಿಂದಾಗಿ ವಿಮಾನವು ದೆಹಲಿಗೆ ಮರಳಿದೆ” ಎಂದು ಅದು ಹೇಳಿದೆ.
ವಿಮಾನದಲ್ಲಿ 298 ಪ್ರಯಾಣಿಕರಿದ್ದರು ಮತ್ತು ನಂತರ ಅವರನ್ನು ಮತ್ತೊಂದು ವಿಮಾನದಲ್ಲಿ ವ್ಯಾಂಕೋವರ್‌ಗೆ ಕರೆದೊಯ್ಯಲಾಯಿತು ಎಂದು ಏರ್‌ಲೈನ್ ವಕ್ತಾರರು ತಿಳಿಸಿದ್ದಾರೆ.