Advertisement

ಟಾಟಾ ಗ್ರೂಪ್ ನಿಂದ ಬೃಹತ್ ಒಪ್ಪಂದ; ಏರ್ ಬಸ್ ನಿಂದ 250 ವಿಮಾನಗಳ ಖರೀದಿ

06:23 PM Feb 14, 2023 | |

ನವದೆಹಲಿ: ಟಾಟಾ ಗ್ರೂಪ್ ಏರ್ ಬಸ್ ಸಂಸ್ಥೆಯಿಂದ ಬರೋಬ್ಬರಿ 250 ವಿಮಾನಗಳನ್ನು ಖರೀದಿಸಲಿದ್ದು, ಇದು ಇತಿಹಾಸದಲ್ಲಿಯೇ ವಿಶ್ವದ ಅತೀ ದೊಡ್ಡ ವಿಮಾನಯಾನ ಒಪ್ಪಂದವಾಗಿದೆ ಎಂದು ವರದಿ ತಿಳಿಸಿದೆ.

Advertisement

ಇದನ್ನೂ ಓದಿ:ಶಾಲೆ ಬಿಟ್ಟು ಕೂಲಿ ಕೆಲಸಕ್ಕೆ ತೆರಳಿದ್ದ 14 ವಿದ್ಯಾರ್ಥಿಗಳು ಮಕ್ಕಳ ಕಲ್ಯಾಣ ಸಮಿತಿ ವಶಕ್ಕೆ.!

ಈ ಒಪ್ಪಂದವು 40 ಎ350 ವೈಡ್-ಬಾಡಿ ರೇಂಜ್ ವಿಮಾನ ಮತ್ತು 210 ನ್ಯಾರೋ ಬಾಡಿ ವಿಮಾನಗಳನ್ನು ಒಳಗೊಂಡಿದೆ. ಏರ್ ಇಂಡಿಯಾ ಪುನರುಜ್ಜೀವನಕ್ಕೆ ಏರ್ ಬಸ್ ಸಹಾಯ ಮಾಡಲು ಇದೊಂದು ಐತಿಹಾಸಿಕ ಒಪ್ಪಂದವಾಗಿದೆ ಎಂದು ಏರ್ ಬಸ್ ಮುಖ್ಯ ಕಾರ್ಯನಿರ್ವಾಹಕ ಗಿಲ್ಲೌಮ್ ಫೌರಿ ಪ್ರಧಾನಿ ನರೇಂದ್ರ ಮೋದಿ, ರತನ್ ಟಾಟಾ, ಫ್ರಾನ್ಸ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ಮತ್ತು ಇತರ ನಾಯಕರೊಂದಿಗೆ ವಿಡಿಯೋ ಕಾನ್ಫರೆನ್ಸ್ ನಲ್ಲಿ ಮಾತನಾಡುತ್ತ ತಿಳಿಸಿದ್ದಾರೆ.

ಏರ್ ಬಸ್ ನೊಂದಿಗಿನ ಒಪ್ಪಂದವು 100 ಶತಕೋಟಿಗಿಂತ ಹೆಚ್ಚು ಎಂದು ನಿರೀಕ್ಷಿಸಲಾಗಿದೆ. ಇದು 470 ವಿಮಾನಗಳಿಗಾಗಿ ಏರ್ ಇಂಡಿಯಾದ ಬೃಹತ್ ಖರೀದಿಯ ಭಾಗವಾಗಿದೆ. ಇದು ಬೋಯಿಂಗ್ ನಿಂದ 220 ವಿಮಾನಗಳ ಖರೀದಿಯೂ ಸೇರ್ಪಡೆಗೊಂಡಿರುವ ಸಾಧ್ಯತೆ ಇದ್ದಿರುವುದಾಗಿ ವರದಿ ವಿವರಿಸಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next