Advertisement

ಪೈಲಟ್‌ಗಳ ಎಡವಟ್ಟು

10:43 AM Sep 08, 2018 | Team Udayavani |

ಹೊಸದಿಲ್ಲಿ: ಮಾಲ್ಡೀವ್ಸ್‌ನ ಮಾಲೆ ನಗರದ ವಿಮಾನ ನಿಲ್ದಾಣದಲ್ಲಿ ನಿರ್ಮಾಣ ಹಂತದಲ್ಲಿರುವ ರನ್‌ ವೇನಲ್ಲಿ ಏರ್‌ ಇಂಡಿಯಾದ ವಿಮಾನ ಇಳಿಸಿರುವ ಆಘಾತ‌ಕಾರಿ ಘಟನೆ ನಡೆದಿದೆ. ಅಚಾತುರ್ಯ ಎಸಗಿದ ಇಬ್ಬರೂ ಪೈಲಟ್‌ಗಳನ್ನು ಅಮಾನತುಗೊಳಿಸಲಾಗಿದೆ. ತಿರುವನಂತಪುರಂನಿಂದ ಮಾಲೆಗೆ ಹೊರಟಿದ್ದ ಈ ವಿಮಾನದಲ್ಲಿ 136 ಪ್ರಯಾಣಿಕರಿದ್ದು, ಎಲ್ಲರೂ ಸುರಕ್ಷಿತವಾಗಿದ್ದಾರೆ. ನಿರ್ಮಾಣ ಹಂತದ ರನ್‌ ವೇ ಮೇಲೆ ಇಳಿಸಿದ ಕಾರಣ  ವಿಮಾನದ ಟೈರ್‌ಗಳಿಗೆ ಹಾನಿಯಾಗಿದ್ದು, ವಿಮಾನ ಪಾರ್ಕಿಂಗ್‌ ಸ್ಥಳದ ಕಡೆಗೆ ಬಂದು ವಾಲಿಕೊಂಡಿತು ಎನ್ನಲಾಗಿದೆ.
 

Advertisement
Advertisement

Udayavani is now on Telegram. Click here to join our channel and stay updated with the latest news.

Next