Advertisement

ಏರ್‌ಇಂಡಿಯಾ ವಿಮಾನ ಬರೋಬ್ಬರಿ 8 ಗಂಟೆ ತಡ

10:12 AM Nov 17, 2019 | Team Udayavani |

ಹೊಸದಿಲ್ಲಿ: ರೈಲುಗಳು, ಬಸ್ಸುಗಳು ಗಂಟೆ ಗಟ್ಟಲೆ ತಡವಾಗುವುದು ಗೊತ್ತು. ಆದರೆ ವಿಮಾನಗಳು? ಎಲ್ಲೂ ಇಲ್ಲ. ಆದರೆ ಹೀಗೆ ವಿಳಂಬ ಪ್ರಯಾಣಕ್ಕೆ ಕುಖ್ಯಾತಿ ಪಡೆದಿರುವ ಏರ್‌ ಇಂಡಿಯಾ ವಿಮಾನವೊಂದು ಬರೋಬ್ಬರಿ 8 ಗಂಟೆ ತಡವಾಗಿದೆ.

Advertisement

ಅಷ್ಟೇ ಅಲ್ಲ, ತಡವಾದ ಹೊತ್ತಿಗೆ ಪ್ರಯಾಣಿಕರನ್ನು ನಾಲ್ಕು ಬಾರಿ ಇಳಿಸಿ, ಹತ್ತಿಸಿ ಮಾಡಲಾಗಿದೆ! ಸುಮಾರು 150 ಮಂದಿ ಪ್ರಯಾಣಿಕರಿದ್ದು, ಅಕ್ಷರಶಃ ತಾಳ್ಮೆಗೆಟ್ಟಿದ್ದರಂತೆ.

ಪುಣೆಯಿಂದ ದೆಹಲಿಗೆ ತೆರಳಬೇಕಿದ್ದ ಏರ್‌ ಇಂಡಿಯಾ 854 ವಿಮಾನವೇ ಇಷ್ಟೊಂದು ತಡವಾದ ವಿಮಾನ. ಗುರುವಾರ ಈ ವಿಮಾನ ಪುಣೆಯಿಂದ ರಾತ್ರಿ 10.15ಕ್ಕೆ ಹೊರಟು ಮಧ್ಯರಾತ್ರಿ 12.25 ಕ್ಕೆ ದಿಲ್ಲಿಗೆ ಬಂದಿತ್ತು.

ಬಳಿಕ ಕೆಲವೇ ಸಮಯದ ಅಂತರದಲ್ಲಿ ಅದು ಮತ್ತೆ ಪುಣೆಗೆ ಹೊರಡಬೇಕಿತ್ತು. ಆದರೆ ತಾಂತ್ರಿಕ ಕಾರಣಗಳಿಂದಾಗಿ ವಿಮಾನ ಹೊರಡಲೇ ಇಲ್ಲ.

ಪ್ರಯಾಣಿಕರನ್ನು ಕೂರಿಸಿ-ಇಳಿಸುವುದನ್ನು ವಿಮಾನ ಸಿಬಂದಿ ನಾಲ್ಕು ಬಾರಿ ಮಾಡಿದರು. ಅಂತೂ ಇಂತೂ ಕೊನೆಗೆ ಶುಕ್ರವಾರ ಬೆಳಗ್ಗೆ 8.15ಕ್ಕೆ ವಿಮಾನ ಮತ್ತೆ ಪುಣೆಗೆ ತಲುಪಿದೆ.

Advertisement

ವಿಮಾನ ಹೀಗೆ ವಿಳಂಬವಾದ್ದರಿಂದ ಪುಣೆಯಿಂದ ದಿಲ್ಲಿಗೆ ಬಂದು ಅಂ.ರಾ. ವಿಮಾನಗಳನ್ನು ಹತ್ತಬೇಕಿದ್ದ ಹಲವು ಪ್ರಯಾಣಿಕರಿಗೆ ವಿಮಾನಗಳು ತಪ್ಪಿವೆ. ಈ ಕಾರಣಕ್ಕೆ ಹಲವು ಪ್ರಯಾಣಿಕರು ಏರ್‌ ಇಂಡಿಯಾ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next