Advertisement

ಏರ್ ಇಂಡಿಯಾಗೆ 10 ಲಕ್ಷ ರೂ. ದಂಡ ವಿಧಿಸಿದ ಡಿಜಿಸಿಎ

09:47 AM Jun 15, 2022 | Shreeram Nayak |

ನವದೆಹಲಿ: ಟಾಟಾ ಮಾಲಿಕತ್ವದ ಏರ್‌ ಇಂಡಿಯಾ ವಿಮಾನಯಾನ ಸಂಸ್ಥೆಗೆ ಡಿಜಿಸಿಎ (ಕೇಂದ್ರ ನಾಗರಿಕ ವಿಮಾನಯಾನ ನಿರ್ದೇಶನಾಲಯ)10 ಲಕ್ಷ ರೂ. ದಂಡವನ್ನು ವಿಧಿಸಿದೆ.

Advertisement

ಈ ಸಂಸ್ಥೆ ಸರಿಯಾದ ಟಿಕೆಟ್‌ಗಳನ್ನು ಹೊಂದಿದ್ದರೂ, ಪ್ರಯಾಣಿಕರಿಗೆ ವಿಮಾನವೇರಲು ಅವಕಾಶ ನೀಡಿಲ್ಲ. ಮಾತ್ರವಲ್ಲ ಪರಿಹಾರವನ್ನೂ ನೀಡಿಲ್ಲ.

ಇಂತಹ ಪ್ರಕರಣಗಳು ಬೆಂಗಳೂರು, ದೆಹಲಿ, ಹೈದರಾಬಾದ್‌ನಲ್ಲಿ ನಡೆದಿವೆ. ಇದನ್ನು ಗಂಭೀರವಾಗಿ ಪರಿಗಣಿಸಿರುವ ಡಿಜಿಸಿಎ ಪ್ರಕರಣಗಳನ್ನು ತನಿಖೆ ನಡೆಸಿ ಇಂತಹ ಆದೇಶ ನೀಡಿದೆ.

ಏರ್‌ ಇಂಡಿಯಾ ಬಳಿ ಇಂತಹ ಪ್ರಕರಣದ ವೇಳೆ ಪರಿಹಾರ ನೀಡುವ ಒಂದು ವ್ಯವಸ್ಥೆಯೇ ಇದ್ದಂತಿಲ್ಲ ಎಂದು ಡಿಜಿಸಿಎ ಹೇಳಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next