ಕಲ್ಲಿಕೋಟೆ: ಅಬುಧಾಬಿಯಿಂದ ಕೇರಳದ ಕ್ಯಾಲಿಕಟ್‌ಗೆ ಹಾರುತ್ತಿದ್ದ ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನವು ಟೇಕ್-ಆಫ್ ಆಗುವ ಸಮಯದಲ್ಲಿ ಇಂಜಿನ್ ನಲ್ಲಿ ಬೆಂಕಿ ಕಾಣಿಸಿಕೊಂಡಿದ್ದನ್ನು ಗಮನಿಸಿ ತುರ್ತು ಭೂಸ್ಪರ್ಶ ಮಾಡಲಾಗಿದೆ.
ಅಬುಧಾಬಿಯಿಂದ ಕ್ಯಾಲಿಕಟ್‌ಗೆ ತೆರಳುತ್ತಿದ್ದ ವಿಮಾನ ಟೇಕಾಫ್ ಆದ ಕೆಲವೇ ಸಮಯದಲ್ಲಿ ಇಂಜಿನ್ ಒಂದರಲ್ಲಿ ಬೆಂಕಿ ಕಾಣಿಸಿಕೊಂಡಿದೆ ಎಂದು ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯ ಶುಕ್ರವಾರ ತಿಳಿಸಿದೆ.
ವಿಮಾನವು ಅಬುಧಾಬಿ ವಿಮಾನ ನಿಲ್ದಾಣಕ್ಕೆ ಮರಳಿದ್ದು, ಏರ್ ಇಂಡಿಯಾ ಎಕ್ಸ್‌ಪ್ರೆಸ್ ಪ್ರಕಾರ, ಎಲ್ಲಾ ಪ್ರಯಾಣಿಕರು ಸುರಕ್ಷಿತವಾಗಿ ಹೊರ ಬಂದರು. ಡಿಜಿಸಿಎ ಪ್ರಕಾರ ವಿಮಾನ ಟೇಕಾಫ್ ಆಗುವಾಗ 184 ಪ್ರಯಾಣಿಕರಿದ್ದರು.
“1,000 ಅಡಿಗಳಷ್ಟು ಏರಿದ ನಂತರ, ಪೈಲಟ್ ಎಂಜಿನ್ ಒಂದರಲ್ಲಿ ಜ್ವಾಲೆಯನ್ನು ಕಂಡಿದ್ದು, ಅಬುಧಾಬಿ ವಿಮಾನ ನಿಲ್ದಾಣಕ್ಕೆ ಹಿಂತಿರುಗಲು ನಿರ್ಧರಿಸಿದರು” ಎಂದು ಏರ್ ಇಂಡಿಯಾ ಎಕ್ಸ್‌ಪ್ರೆಸ್ ಎಎನ್‌ಐಗೆ ತಿಳಿಸಿದೆ. “ಏರ್ ಇಂಡಿಯಾ ಎಕ್ಸ್‌ಪ್ರೆಸ್ B737-800 ವಿಮಾನವು ಅಬುಧಾಬಿ ವಿಮಾನನಿಲ್ದಾಣಕ್ಕೆ ವಾಪಸಾಗಿದೆ ಎಂದು ಡಿಜಿಸಿಎ ತಿಳಿಸಿದೆ.