ತಿರುವನಂತಪುರ: ವಿಮಾನಗಳಲ್ಲಿ ಚಿನ್ನ ಕಳ್ಳಸಾಗಣೆ ಮಾಡಲು ಯತ್ನಿಸಿ ಸಿಕ್ಕಿಬಿದ್ದವರ ಪ್ರಕರಣಗಳನ್ನು ನೋಡುತ್ತಿದ್ದೆವು. ಆದರೀಗ ವಿಮಾನಸಂಸ್ಥೆಯೊಂದರ ಸಿಬ್ಬಂದಿಯೇ 1.5 ಕೆಜಿ ಚಿನ್ನ ಕಳ್ಳಸಾಗಣೆ ಮಾಡಲು ಯತ್ನಿಸಿ ಸಿಕ್ಕಿಬಿದ್ದಿರುವ ಘಟನೆ ಕೇರಳದ ಕೊಚ್ಚಿ ವಿಮಾನ ನಿಲ್ದಾಣದಲ್ಲಿ ವರದಿಯಾಗಿದೆ.
ಏರ್ ಇಂಡಿಯಾ ಎಕ್ಸ್‌ಪ್ರೆಸ್‌ನ ಕ್ಯಾಬಿನ್ ಸಿಬ್ಬಂದಿ ಶಫಿ, 1,487 ಗ್ರಾಂ ಚಿನ್ನದ ಗಟ್ಟಿ ತುಂಬಿದ್ದ ಕವರ್ ಅನ್ನು ತನ್ನ ಕೈಗಳಿಗೆ ಸುತ್ತಿಕೊಂಡು, ಕವರ್ ಕಾಣದಂತೆ ಸಮವಸ್ತ್ರ ಧರಿಸಿದ್ದ. ವಯನಾಡ್ ಮೂಲದ ಈ ವ್ಯಕ್ತಿ, 75 ಲಕ್ಷ ರೂ. ಮೌಲ್ಯದ ಚಿನ್ನ ಕಳ್ಳಸಾಗಣೆ ಮಾಡುತ್ತಿದ್ದಾನೆ ಎನ್ನುವ ಗುಪ್ತಚರ ಮಾಹಿತಿ ಮೇರೆಗೆ ಕಸ್ಟಮ್ಸ್ ಅಧಿಕಾರಿಗಳು ಆತನನ್ನು ಸೆರೆ ಹಿಡಿದು, ತನಿಖೆಗೆ ಒಳಪಡಿಸಿದ್ದರು.