Advertisement

ಏರ್ ಇಂಡಿಯಾ ಮತ್ತು ನೇಪಾಳ ಏರ್‌ಲೈನ್ಸ್ ವಿಮಾನಗಳು ಢಿಕ್ಕಿ ಹೊಡೆಯುತ್ತಿವು!!

04:15 PM Mar 26, 2023 | Team Udayavani |

ನವದೆಹಲಿ: ಏರ್ ಇಂಡಿಯಾ ಮತ್ತು ನೇಪಾಳ ಏರ್‌ಲೈನ್ಸ್ ವಿಮಾನಗಳು ಢಿಕ್ಕಿಯಾಗುವ ಕ್ಷಣ ಬಂದಿದ್ದು, ಎಚ್ಚರಿಕೆ ವ್ಯವಸ್ಥೆಗಳು ಪೈಲಟ್‌ಗಳನ್ನು ಎಚ್ಚರಿಸಿದ ಕಾರಣ ದೊಡ್ಡ ದುರಂತ ತಪ್ಪಿಸಲಾಯಿತು. ಸಮಯೋಚಿತ ಕ್ರಮವು ಅನಾಹುತವನ್ನು ತಡೆಯಿತು ಎಂದು ಅಧಿಕಾರಿಗಳು ಭಾನುವಾರ ತಿಳಿಸಿದ್ದಾರೆ.

Advertisement

ಸಿಎಎಎನ್ ವಕ್ತಾರ ಜಗನ್ನಾಥ್ ನಿರೋಲಾ ಪ್ರಕಾರ, ನೇಪಾಳದ ನಾಗರಿಕ ವಿಮಾನಯಾನ ಪ್ರಾಧಿಕಾರ (ಸಿಎಎಎನ್) ಏರ್ ಟ್ರಾಫಿಕ್ ಕಂಟ್ರೋಲರ್ ವಿಭಾಗದ ಇಬ್ಬರು ಉದ್ಯೋಗಿಗಳನ್ನು ಅಜಾಗರೂಕತೆಗಾಗಿ ಅಮಾನತುಗೊಳಿಸಿದೆ.

ಶುಕ್ರವಾರ ಬೆಳಗ್ಗೆ ಮಲೇಷ್ಯಾದ ಕೌಲಾಲಂಪುರದಿಂದ ಕಠ್ಮಂಡುವಿಗೆ ಬರುತ್ತಿದ್ದ ನೇಪಾಳ ಏರ್ ಲೈನ್ಸ್ ವಿಮಾನ ಮತ್ತು ನವದೆಹಲಿಯಿಂದ ಕಠ್ಮಂಡುವಿಗೆ ತೆರಳುತ್ತಿದ್ದ ಏರ್ ಇಂಡಿಯಾ ವಿಮಾನ ಬಹುತೇಕ ಡಿಕ್ಕಿಯಾಗುವ ಹಂತಕ್ಕೆ ತಲುಪಿದ್ದವು.

ಏರ್ ಇಂಡಿಯಾ ವಿಮಾನವು 19,000 ಅಡಿಗಳಿಂದ ಕೆಳಗಿಳಿಯುತ್ತಿದ್ದರೆ, ನೇಪಾಳ ಏರ್‌ಲೈನ್ಸ್ ವಿಮಾನವು ಅದೇ ಸ್ಥಳದಲ್ಲಿ 15,000 ಅಡಿ ಎತ್ತರದಲ್ಲಿ ಹಾರುತ್ತಿತ್ತು. ಎರಡು ವಿಮಾನಗಳು ಸಾಮೀಪ್ಯದಲ್ಲಿವೆ ಎಂದು ರಾಡಾರ್‌ನಲ್ಲಿ ತೋರಿಸಿದ ನಂತರ, ನೇಪಾಳ ಏರ್‌ಲೈನ್ಸ್ ವಿಮಾನವು 7,000 ಅಡಿಗಳಿಗೆ ಇಳಿದಿದೆ ಎಂದು ವಕ್ತಾರರು ತಿಳಿಸಿದ್ದಾರೆ.

ಈ ಕುರಿತು ತನಿಖೆ ನಡೆಸಲು ನಾಗರಿಕ ವಿಮಾನಯಾನ ಪ್ರಾಧಿಕಾರವು ಮೂವರು ಸದಸ್ಯರ ತನಿಖಾ ಸಮಿತಿಯನ್ನು ರಚಿಸಿದೆ.ಘಟನೆಯ ಸಮಯದಲ್ಲಿ ನಿಯಂತ್ರಣ ಕೊಠಡಿಯ ಉಸ್ತುವಾರಿ ವಹಿಸಿದ್ದ ಇಬ್ಬರು ಅಧಿಕಾರಿಗಳನ್ನು ಸಿಎಎಎನ್ ಅಮಾನತುಗೊಳಿಸಿದೆ. ಏರ್ ಇಂಡಿಯಾದಿಂದ ಯಾವುದೇ ತಕ್ಷಣದ ಪ್ರತಿಕ್ರಿಯೆ ಬಂದಿಲ್ಲ.

Advertisement

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next