ನವದೆಹಲಿ: ಭಾರತೀಯ ವಾಯುಪಡೆಗೆ ಸೇರಿದ ಮಿಗ್-21 ಯುದ್ಧ ವಿಮಾನಗಳನ್ನು ಮುಂದಿನ ಆದೇಶದ ವರೆಗೆ ಹಾರಾಟ ನಡೆಸದೇ ಇರಲು ತೀರ್ಮಾನಿಸಲಾಗಿದೆ.
ಮೇ 8ರಂದು ರಾಜಸ್ಥಾನದಲ್ಲಿ ನಡೆದಿದ್ದ ಯುದ್ಧ ವಿಮಾನ ಪತನದಲ್ಲಿ ಮೂವರು ಅಸುನೀಗಿದ್ದರು. ಯಾವ ಕಾರಣದಿಂದಾಗಿ ಈ ಅಪಘಾತ ಉಂಟಾಗಿದೆ ಎಂದು ತಿಳಿಯುವ ವರೆಗೆ ಮಿಗ್-21 ಯುದ್ಧ ವಿಮಾನಗಳ ಪೂರ್ಣ ಸ್ವಾಡ್ರನ್ ಅನ್ನು ಬಳಕೆ ಮಾಡದೇ ಇರಲು ಭಾರತೀಯ ವಾಯುಪಡೆ ಶನಿವಾರ ನಿರ್ಧರಿಸಿದ್ದಾರೆ.
1960ರಲ್ಲಿ ಮಿಗ್-21 ಸ್ಕ್ವಾಡ್ರನ್ಗಳು ಭಾರತೀಯ ವಾಯುಪಡೆಗೆ ಸೇರ್ಪಡೆಯಾದವು. 2025ರ ವೇಳೆಗೆ ಎಲ್ಲಾ ಮಿಗ್-21 ವಿಮಾನಗಳಿಗೆ ನಿವೃತ್ತಿ ನೀಡಲು ಐಎಎಫ್ ಯೋಜಿಸಿದೆ.
ಇದನ್ನೂ ಓದಿ: ತಾನು ಹುಟ್ಟಿ ಬೆಳೆದ ಚೆನ್ನೈ ಮನೆಯನ್ನೇ ಮಾರಾಟ ಮಾಡಿದ ಗೂಗಲ್ ಸಿಇಒ, ಕಣ್ಣೀರಿಟ್ಟ ತಂದೆ…