Advertisement

ಗರುಡ ಜೊತೆ ಐಂದ್ರಿತಾ ಎಂಟ್ರಿ; ಮೇ 20ಕ್ಕೆ ಚಿತ್ರ ತೆರೆಗೆ

02:21 PM May 16, 2022 | Team Udayavani |

ಇತ್ತೀಚೆಗಷ್ಟೇ ನಟಿ ಐಂದ್ರಿತಾ ರೇ ಅಭಿನಯದ “ಕ್ಷಮಿಸಿ ನಿಮ್ಮ ಖಾತೆಯಲ್ಲಿ ಹಣವಿಲ್ಲ’ ಚಿತ್ರ ತೆರೆಗೆ ಬಂದಿತ್ತು. ವೈವಾಹಿಕ ಜೀವನಕ್ಕೆ ಕಾಲಿಟ್ಟ ಬಳಿಕ ಸುಮಾರು ಮೂರು ವರ್ಷಗಳ ನಂತರ ಐಂದ್ರಿತಾ ಮತ್ತೆ ಪ್ರೇಕ್ಷಕರ ಮುಂದೆ ಬಂದಿದ್ದರು. ಇದರ ಬೆನ್ನಲ್ಲೇ ಈ ವಾರ ಐಂದ್ರಿತಾ ನಾಯಕಿಯಾಗಿ ಅಭಿನಯಿಸಿರುವ ಮತ್ತೂಂದು ಚಿತ್ರ “ಗರುಡ’ ತೆರೆಗೆ ಬರುತ್ತಿದೆ.

Advertisement

ಈ ಹಿಂದೆ “ಸಿಪಾಯಿ’ ಚಿತ್ರದಲ್ಲಿ ನಾಯಕರಾಗಿ ನಟಿಸಿದ್ದ ಸಿದ್ಧಾರ್ಥ್ ಮಹೇಶ್‌ ನಾಯಕನಾಗಿ ಅಭಿನಯಿಸಿರುವ ಈ ಚಿತ್ರದಲ್ಲಿ ಐಂದ್ರಿತಾ ರೇ ಮತ್ತು ಅಶಿಕಾ ರಂಗನಾಥ್‌ ನಾಯಕಿಯರಾಗಿ ಕಾಣಿಸಿಕೊಂಡಿದ್ದಾರೆ. ನಟ ಶ್ರೀನಗರ ಕಿಟ್ಟಿ ಚಿತ್ರದಲ್ಲಿ ಖಡಕ್‌ ಪೊಲೀಸ್‌ ಆಫೀಸರ್‌ ಆಗಿ ಕಾಣಿಸಿಕೊಂಡಿದ್ದಾರೆ. ಉಳಿದಂತೆ ಕಾಮ್ನಾ ಜೇಠ್ಮಲಾನಿ, ರಮೇಶ್‌ ಭಟ್‌, ರಂಗಾಯಣ ರಘು, ಆದಿ ಲೊಕೇಶ್‌, ರಾಜೇಶ್‌ ನಟರಂಗ, ರವಿಶಂಕರ್‌ ಗೌಡ, ಗಿರಿ, ಸುಜಯ್‌ ಶಾಸ್ತ್ರೀ, ಸುನೇತ್ರಾ ಪಂಡಿತ್‌, ಮೈಕೋ ನಾಗರಾಜ್‌, ಜಹಾಂಗೀರ್‌ ಮುಂತಾದವರು ಚಿತ್ರದ ಇತರ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.

ಇನ್ನು “ಗರುಡ’ ಔಟ್‌ ಆ್ಯಂಡ್‌ ಔಟ್‌ ಫ್ಯಾಮಿಲಿ ಸಬೆjಕ್ಟ್ ಸಿನಿಮಾ ಎಂಬುದು ಚಿತ್ರತಂಡ ಮಾತು. ಒಂದು ಆ್ಯಕ್ಷನ್‌, ಲವ್‌, ಎಮೋಷನ್ಸ್‌, ಕಾಮಿಡಿ ಎಲ್ಲವೂ ಸಿನಿಮಾದಲ್ಲಿದೆ. ಈಗಾಗಲೇ ಬಿಡುಗಡೆಗೊಂಡಿರುವ “ಗರುಡ’ ಚಿತ್ರದ ಟ್ರೇಲರ್‌ಗೆ ಮೆಚ್ಚುಗೆ ವ್ಯಕ್ತವಾಗುತ್ತಿದ್ದು, ಸಿನಿಮಾ ಥಿಯೇಟರ್‌ನಲ್ಲಿ ಪ್ರೇಕ್ಷಕರಿಗೂ ಇಷ್ಟವಾಗುತ್ತದೆ ಎಂಬ ನಂಬಿಕೆ ಐಂದ್ರಿತಾ ಅವರದ್ದು.

ಇದನ್ನೂ ಓದಿ:ತಾ ಮುಂದು, ನಾ ಮುಂದು ಎನ್ನುತ್ತಿರುವ ಹೊಸಬರು; ಈ ವಾರ ಹತ್ತು ಚಿತ್ರಗಳು ತೆರೆಗೆ?

ಬಿ.ಕೆ. ರಾಜಾ ರೆಡ್ಡಿ, ಕಿಶೋರ್‌ “ಗರುಡ’ ಚಿತ್ರಕ್ಕೆ ಬಂಡವಾಳ ಹೂಡಿ ನಿರ್ಮಿಸಿದ್ದಾರೆ. ನೂರಾರು ಹಾಡುಗಳಿಗೆ ನೃತ್ಯ ಸಂಯೋಜನೆ ಮಾಡಿ ಸೈ ಎನಿಸಿಕೊಂಡಿರುವ ಧನಕುಮಾರ್‌.ಕೆ ಈ ಚಿತ್ರಕ್ಕೆ ಆ್ಯಕ್ಷನ್‌-ಕಟ್‌ ಹೇಳಿದ್ದಾರೆ. ಚಿತ್ರದ ಹಾಡುಗಳಿಗೆ ರಘು ದೀಕ್ಷಿತ್‌ ಸಂಗೀತ ಸಂಯೋಜಿಸಿದ್ದು, ಜೈ ಆನಂದ ಛಾಯಾಗ್ರಹಣ, ದೀಪು ಎಸ್‌. ಕುಮಾರ್‌ ಸಂಕಲನ ಚಿತ್ರಕ್ಕಿದೆ.

Advertisement

ಒಟ್ಟಾರೆ ಒಂದೇ ತಿಂಗಳ ಅಂತರದಲ್ಲಿ ಎರಡನೇ ಬಾರಿಗೆ ಹೊಸ ಪಾತ್ರದಲ್ಲಿ ಪ್ರೇಕ್ಷಕರ ಮುಂದೆ ಬರುತ್ತಿರುವ ಐಂದ್ರಿತಾ ತೆರೆಮೇಲೆ ಪ್ರೇಕ್ಷಕರಿಗೆ ಎಷ್ಟರ ಮಟ್ಟಿಗೆ ಇಷ್ಟವಾಗುತ್ತಾರೆ ಅನ್ನೋದು ಇದೇ ವಾರಾಂತ್ಯಕ್ಕೆ ಗೊತ್ತಾಗಲಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next