Advertisement

12,128 ಮಕ್ಕಳಿಗೆ ಲಸಿಕೆ ಹಾಕುವ ಗುರಿ

09:03 PM Jan 04, 2022 | Team Udayavani |

ರಾಣಿಬೆನ್ನೂರ: ಯಾರೂ ಕೊರೊನಾಗೆ ಭಯ ಪಡುವ ಅಗತ್ಯವಿಲ್ಲ. ಮಕ್ಕಳು ಸೇರಿದಂತೆ ಎಲ್ಲ ವಯೋಮಾನದವರು ಕಡ್ಡಾಯವಾಗಿ ಲಸಿಕೆ ಹಾಕಿಸಿಕೊಳ್ಳುವುದರ ಮೂಲಕ ಈ ಕ್ಷೇತ್ರವನ್ನು ಕೊರೊನಾ ಮುಕ್ತವನ್ನಾಗಿ ಮಾಡಲು ಸಮಾರೋಪಾದಿಯಲ್ಲಿ ಶ್ರಮಿಸಬೇಕಾಗಿದೆ ಎಂದು ಶಾಸಕ ಅರುಣಕುಮಾರ ಪೂಜಾರ ಹೇಳಿದರು.

Advertisement

ಸೋಮವಾರ ಇಲ್ಲಿನ ರಾಜರಾಜೇಶ್ವರಿ ಹೆಣ್ಣು ಮಕ್ಕಳ ಶಾಲೆಯಲ್ಲಿ 15ರಿಂದ 18 ವಯಸ್ಸಿನ ಮಕ್ಕಳಿಗೆ ಏರ್ಪಡಿಸಿದ್ದ ಲಸಿಕಾ ವಿತರಣೆ ಅಭಿಯಾನ ಉದ್ಘಾಟಿಸಿ ಅವರು ಮಾತನಾಡಿದರು. ತಾಲೂಕಿನಲ್ಲಿ 15ರಿಂದ 18 ವರ್ಷದ 12,128 ಮಕ್ಕಳಿಗೆ ಲಸಿಕೆ ಹಾಕಿಸುವ ಗುರಿ ಹೊಂದಲಾಗಿದ್ದು, ಈಗಾಗಲೇ 30 ವರ್ಷ ಮೇಲ್ಪಟ್ಟ 2.26 ಲಕ್ಷ ಜನರು ಪ್ರಥಮ ಡೋಸ್‌ ಮತ್ತು 1.78 ಲಕ್ಷ ಜನರು 2ನೇ ಡೋಸ್‌ ಹಾಕಿಸಿಕೊಂಡಿದ್ದಾರೆ ಎಂದರು.

ವಿ.ಪಿ. ಲಿಂಗನಗೌಡ್ರ, ನಗರಸಭೆ ಅಧ್ಯಕ್ಷೆ ರೂಪಾ ಚಿನ್ನಕಟ್ಟಿ, ಕಸ್ತೂರಿ ಚಿಕ್ಕಬಿದರಿ, ಪೌರಾಯುಕ್ತ ಬಿ.ಟಿ. ಉದಯಕುಮಾರ, ಶಂಕರ್‌ ಜಿ.ಎಸ್‌., ಚೋಳಪ್ಪ ಕಸವಾಳ, ಬಿಇಒ ಎನ್‌.ಜೆ. ಗುರುಪ್ರಸಾದ, ಡಾ| ಸಂತೋಷಕುಮಾರ ಜಿ., ವಿಜಯಲಕ್ಷಿ ¾à, ಬಸವರಾಜ ಹುಲ್ಲತ್ತಿ, ಎ.ಬಿ.

 

Advertisement

Udayavani is now on Telegram. Click here to join our channel and stay updated with the latest news.

Next