Advertisement

ಸ್ಪರ್ಧಾತ್ಮಕ ಪರೀಕ್ಷೆಗೆ ಗುರಿ ಅಗತ್ಯ: ಡೀಸಿ

03:47 PM Feb 11, 2021 | Team Udayavani |

ಶ್ರೀರಂಗಪಟ್ಟಣ: ಸ್ಪರ್ಧಾತ್ಮಕ ಪರೀಕ್ಷೆಗೆ ಸಿದ್ಧತೆಗೊಳ್ಳುವ ವಿದ್ಯಾರ್ಥಿಗಳು ಒಂದೇ ಗುರಿ ಇರಬೇಕು. ಛಲವಿದ್ದರೆ ಪರೀಕ್ಷೆಯಲ್ಲಿ ಉತ್ತೀರ್ಣವಾಗಬಹುದು ಎಂದು ಜಿಲ್ಲಾಧಿಕಾರಿ ಡಾ. ಎಂ.ವಿ. ವೆಂಕಟೇಶ್‌ ತಿಳಿಸಿದರು.

Advertisement

ಪಟ್ಟಣದ ಅಂಬೇಡ್ಕರ್‌ ಭವನದಲ್ಲಿ ಅಚಿವರ್ಸ್‌ ಅಕಾಡೆಮಿಯಿಂದ ನಡೆದ ಸ್ಪರ್ಧಾತ್ಮಕ ಪರೀಕ್ಷೆ ತರಬೇತಿಗೆ ಚಾಲನೆ ನೀಡಿ ಮಾತನಾಡಿ, ಯಾವುದೇ ಪರೀಕ್ಷೆ ತೆಗೆದುಕೊಂಡರೆ ಗುರಿ ಮುಟ್ಟುವ ತನಕ ಹಿಂದೆ ಪಡೆಯದೆ ಓದಬೇಕು. ಮಾಹಿತಿಗಳನ್ನು ಅರ್ಥ ಮಾಡಿಕೊಂಡು ಎಲ್ಲಾ ವಿಷಯಗಳಲ್ಲಿ ಧೈರ್ಯವಾಗಿ ಭಾಗವಹಿಸಬೇಕು ಎಂದು ಹೇಳಿದರು.

ಇದನ್ನೂ ಓದಿ:ಕೋವಿಡ್‌ ಲಸಿಕೆ ಕಾರ್ಯಕ್ಕೆ ಎಸ್ಪಿ ಚಾಲನೆ

ತಹಶೀಲ್ದಾರ್‌ ಎಂ.ವಿ.ರೂಪಾ, ಡಾ.ಸುಜಯ್‌ಕುಮಾರ್‌, ಪುರಸಭೆ ಮುಖ್ಯಾಧಿ ಕಾರಿ ಕೃಷ್ಣ, ಪುರಸಭೆ ಉಪಾಧ್ಯಕ್ಷ ಎಸ್‌ ಪ್ರಕಾಶ್‌, ಎನ್‌ಎಸ್‌ಎಸ್‌ ಶಿಬಿರದ ಮುಖ್ಯಸ್ಥ ಡಾ.ರಾಘವೇಂದ್ರ ಮತ್ತು ವಿದ್ಯಾರ್ಥಿಗಳು ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next