Advertisement

ಮುಷ್ಕರ ಹಿಂಪಡೆದ AIIMS ವೈದ್ಯರು; ಆರೋಗ್ಯ ಸಚಿವರ ಭೇಟಿಗೈದ IMA ನಿಯೋಗ

09:27 AM Jun 18, 2019 | Team Udayavani |

ಹೊಸದಿಲ್ಲಿ : ಏಮ್ಸ್‌ ರೆಸಿಡೆಂಟ್‌ ಡಾಕ್ಟರ್‌ ಗಳ ಸಂಘ ವೈದ್ಯರ ಮುಷ್ಕರವನ್ನು ಇಂದು ಶನಿವಾರ ಹಿಂಪಡೆದುಕೊಂಡಿದೆ. ಭಾರತೀಯ ವೈದ್ಯಕೀಯ ಸಂಘದ ನಿಯೋಗ ಇಂದು ಮತ್ತೆ ಆರೋಗ್ಯ ಸಚಿವರನ್ನು ಭೇಟಿಯಾಗಿದೆ.

Advertisement

ಈಗಾಗಲೇ ತಾನು ನೀಡಿರುವ 48 ತಾಸುಗಳ ಗಡುವಿನೊಳಗೆ ವೈದ್ಯರ ಬೇಡಿಕೆಯನ್ನು ಈಡೇರಿಸಬೇಕೆಂದು ಪಶ್ಚಿಮ ಬಂಗಾಲ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರನ್ನು ಸಂಘವು ಆಗ್ರಹಿಸಿದೆ.

48 ತಾಸೊಳಗೆ ವೈದ್ಯರ ಬೇಡಿಕೆ ಈಡೇರದಿದ್ದರೆ ದಿಲ್ಲಿ ಆಸ್ಪತ್ರೆಯಲ್ಲಿ ಜೂನ್‌ 17ರ ಸೋಮವಾರದಿಂದ ಅನಿರ್ದಿಷ್ಟಾವಧಿಯ ಮುಷ್ಕರ ನಡೆಸುವುದು ಅನಿವಾರ್ಯವಾದೀತು ಎಂಬ ಎಚ್ಚರಿಕೆಯನ್ನು ಸಂಘ ನೀಡಿದೆ.

“ಎಲ್ಲ ಜೂನಿಯರ್‌ ಮತ್ತು ಸೀನಿಯರ್‌ ವೈದ್ಯರು ಇಂದು ಶನಿವಾರ ಕರ್ತವ್ಯಕ್ಕೆ ಮರಳಿದ್ದಾರೆ; ಆದರೂ ನಮ್ಮ ಪ್ರತಿಭಟನೆಯನ್ನು ನಾವು ಕಪ್ಪು ಬ್ಯಾಜ್‌, ಹೆಲ್ಮೆಟ್‌ ಮತ್ತು ಬ್ಯಾಂಡಿಟ್ಸ್‌ ಗಳನ್ನು ತೊಟ್ಟುಕೊಂಡು ಸಾಂಕೇತಿಕವಾಗಿ ಮುಂದುವರಿಸಿದ್ದೇವೆ. ಸಿಎಂ ಮಮತಾ ಬ್ಯಾನರ್ಜಿ ಮತ್ತು ಪಶ್ಚಿಮ ಬಂಗಾಲದ ಆರೋಗ್ಯ ಸಚಿವರಿಗೆ ನಾವು ವೈದ್ಯರ ಬೇಡಿಕೆಗಳನ್ನು 48 ತಾಸೊಳಗೆ ಈಡೇರಿಸಬೇಕೆಂಬ ಗಡುವು ಹಾಕಿದ್ದೇವೆ; ಅದು ಆಗದಿದ್ದಲ್ಲಿ ನಾವು ಜೂನ್‌ 17ರಿಂದ ಅನಿರ್ದಿಷ್ಟಾವಧಿ ಮುಷ್ಕರವನ್ನು ಆರಂಭಿಸುತ್ತೇವೆ” ಎಂದು ಏಮ್ಸ್‌ನ ರೆಸಿಡೆಂಟ್‌ ವೈದ್ಯರ ಸಂಘದ ಅಧ್ಯಕ್ಷ ಅಮರೀಂದರ್‌ ಸಿಂಗ್‌ ಮಾಲಿ ಮಾಧ್ಯಮದೊಂದಿಗೆ ಮಾತನಾಡುತ್ತಾ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next