Advertisement

ಪಂಚಾಯ್ತಿಗೊಂದು ಮಾದರಿ ಶಾಲೆ ತೆರೆಯಿರಿ

04:46 PM Jul 30, 2022 | Team Udayavani |

ಮೈಸೂರು: ಪಂಚಾಯ್ತಿಗೊಂದು ಮಾದರಿ ಶಾಲೆ ಸ್ಥಾಪನೆ ಹೆಸರಿನಲ್ಲಿ ರಾಜ್ಯ ಸರ್ಕಾರ ಸರ್ಕಾರಿ ಶಾಲೆಗಳನ್ನು ಮುಚ್ಚಲು ಯತ್ನಿಸುತ್ತಿದೆ ಎಂದು ಆರೋಪಿಸಿ ಎಐಡಿಎಸ್‌ಒ ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು.

Advertisement

ನಗರದ ಜಿಲ್ಲಾಧಿಕಾರಿಗಳ ಕಚೇರಿ ಬಳಿಈಶ್ವರ ಚಂದ್ರ ವಿದ್ಯಾಸಾಗರ್‌ ಅವರ ಸ್ಮರಣದಿನದ ಅಂಗವಾಗಿ ಪ್ರತಿಭಟನೆ ನಡೆಸಿದ ಸಂಘಟನೆ ಕಾರ್ಯಕರ್ತರು, ರಾಜ್ಯದಲ್ಲಿ 13,800ಸರ್ಕಾರಿ ಶಾಲಾ ಕಾಲೇಜುಗಳನ್ನು ಮುಚ್ಚಲುಸರ್ಕಾರ ಮುಂದಾಗಿದೆ ಎಂದು ಆರೋಪಿಸಿದರು.

ಈ ವೇಳೆ ಮಾತನಾಡಿದ ಎಐಡಿಎಸ್‌ಒರಾಜ್ಯಾಧ್ಯಕ್ಷೆ ಕೆ.ಎಸ್‌.ಅಶ್ವಿ‌ನಿ, ಈ ವರ್ಷ ರಾಜ್ಯದಲ್ಲಿ 13,800 ಸರ್ಕಾರಿ ಶಾಲೆಮುಚ್ಚುತ್ತೇವೆ ಎಂದು ಸರ್ಕಾರ ಹೇಳಿದೆ. ಈಸುದ್ದಿಯಿಂದ ರಾಜ್ಯದ ಲಕ್ಷಾಂತರ ಬಡವಿದ್ಯಾರ್ಥಿಗಳು ಹಾಗೂ ಪೋಷಕರಿಗೆ ಬರಸಿಡಿಲು ಬಡಿದಂತಾಗಿದೆ. ಸರ್ಕಾರದನಿರ್ಧಾರದಿಂದಾಗಿ ಲಕ್ಷಾಂತರ ವಿದ್ಯಾರ್ಥಿಗಳುಶಾಶ್ವತವಾಗಿ ಶಿಕ್ಷಣದಿಂದ ದೂರಉಳಿಯುವಂತಾಗುತ್ತಿದೆ ಎಂದು ಆಕ್ರೋಶವ್ಯಕ್ತಪಡಿಸಿದರು.

ಇಂದಿನ ಲಾಭಕೋರ ವ್ಯವಸ್ಥೆಯಡಿಯಲ್ಲಿ ಸಿಲುಕಿ ಶಿಕ್ಷಣ ಕ್ಷೇತ್ರ ಕಮರಿ ಹೋಗುತ್ತಿದೆ.ಸರ್ಕಾರದ ನೀತಿಗಳು ಶಿಕ್ಷಣವನ್ನು ಮತ್ತಷ್ಟು ದುಬಾರಿಗೊಳಿಸುವತ್ತ, ಖಾಸಗೀಕರಣ ಗೊಳಿಸುವತ್ತ ರೂಪುಗೊಳ್ಳುತ್ತಿವೆ ಎಂದರು.

ಹೋರಾಟಗಾರ ನಾ.ದಿವಾಕರ್‌ ಮಾತನಾಡಿ, ಯಾವುದೇ ಒಂದು ಸರ್ಕಾರಿಶಾಲೆಗಳನ್ನು ಮುಚ್ಚಲು ನಾವು ಬಿಡುವುದಿಲ್ಲ. ಪ್ರತಿ ಹಳ್ಳಿಯಲ್ಲಿ ಸರ್ಕಾರಿ ಶಾಲಾ ಕಾಲೇಜುಗಳನ್ನು ಅಭಿವೃದ್ಧಿಪಡಿಸುವುದುಸರ್ಕಾರದ ಜವಾಬ್ದಾರಿಯಾಗಬೇಕು. ಸರ್ಕಾರ ಶಿಕ್ಷಣಕ್ಕೆ ಹೆಚ್ಚುವರಿ ಬಜೆಟನ್ನುಮೀಸಲಿಡಬೇಕು. ಅದೇ ರೀತಿ ಪ್ರತಿಯೊಬ್ಬ ವಿದ್ಯಾರ್ಥಿಗೂ ವೈಜ್ಞಾನಿಕ ಶಿಕ್ಷಣ ತಲುಪುವಂತೆ ಮಾಡುವುದು ಸರ್ಕಾರದ ಜವಾಬ್ದಾರಿ ಆಗಬೇಕು ಎಂದು ಆಗ್ರಹಿಸಿದರು.

Advertisement

ಎಐಡಿಎಸ್‌ಒ ಜಿಲ್ಲಾಧ್ಯಕ್ಷ ಸುಭಾಷ್‌, ಉಪಾಧ್ಯಕ್ಷೆ ಆಸಿಯಾ ಬೇಗಂ, ಕಾರ್ಯದರ್ಶಿ ಚಂದ್ರಕಲಾ, ಜಿಲ್ಲಾ ಸಮಿತಿಯ ಸದಸ್ಯರಾದ ಸ್ವಾತಿ, ನಿತಿನ್‌, ಚಂದ್ರಿಕಾ, ಮೊನಿಷಾ, ಪ್ರಶಾಂತಿ, ಚಂದನಾ, ತೇಜು, ಹೇಮಲತಾ ಇದ್ದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next