Advertisement

ಏಡ್ಸ್‌ ತಡೆಗೆ ಜಾಗೃತಿ ಅವಶ್ಯಕ

04:36 PM Dec 04, 2019 | Suhan S |

ಕೊರಟಗೆರೆ: ಎಚ್‌ಐವಿ ಸೋಂಕು ತಡೆಗಟ್ಟುವಲ್ಲಿ ಯುವಜನತೆ ಪಾತ್ರ ಅತಿ ಮುಖ್ಯವಾಗಿದೆ. ಆರೋಗ್ಯವಂತೆ ಸಮಾಜವನ್ನು ನಿರ್ಮಿಸ ಬೇಕಾದರೆ ಪ್ರತಿಯೊಬ್ಬರೂ ಈ ಮಾರಕ ರೋಗದ ಬಗ್ಗೆ ಜಾಗೃತರಾಗಿರಬೇಕು ಎಂದು ಸಾರ್ವಜನಿಕ ಆಸ್ಪತ್ರೆಯ ವೈದ್ಯಾಧಿಕಾರಿ ಡಾ.ನಾಗಭೂಷಣ್‌ ಹೇಳಿದರು.

Advertisement

ಪಟ್ಟಣದ ಸಾರ್ವಜನಿಕ ಆಸ್ಪತ್ರೆ ಆವರಣದಲ್ಲಿ ವಿಶ್ವಏಡ್ಸ್‌ ದಿನಾಚರಣೆ ಪ್ರಯುಕ್ತ ತಾಲೂಕು ಆರೋಗ್ಯ ಇಲಾಖೆ ಏರ್ಪಡಿಸಿದ್ದ ಜಾಗೃತಿ ಜಾಥಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ಎಚ್‌ಐವಿ, ಏಡ್ಸ್‌ ನಿಯಂತ್ರಿಸುವಲ್ಲಿ ಶಾಲಾಕಾಲೇಜುಗಳಲ್ಲಿ ಏಡ್ಸ್‌ ಜಾಗೃತಿ ಕಾರ್ಯಕ್ರಮಗಳ ಮುಖಾಂತರ ತಿಳಿವಳಿಕೆ ನೀಡಿದರೆ ಗಣನೀಯವಾಗಿ ಸೋಂಕು ನಿಯಂತ್ರಿಸ ಬಹುದು ಎಂದರು.

ಈ ಸೋಂಕು ಹರಡಲು ಅಸುರಕ್ಷಿತ ಲೈಂಗಿಕತೆ ಮುಖ್ಯ ಕಾರಣವಾಗಿದೆ, ಆದ್ದರಿಂದ ಸ್ವತ್ಛ ಜೀವನದ ಬಗ್ಗೆ ಶಾಲಾಕಾಲೇಜುಗಳಲ್ಲಿ ತಿಳಿವಳಿಕೆ ನೀಡುವುದು ಅವಶ್ಯಕತೆ ಇದೆ ಎಂದು ತಿಳಿಸಿದರು.

ನಿಯಂತ್ರಣ ವಿಧಾನ: ಏಕೈತ ಸಂಗಾತಿಯೊಂದಿಗೆಲೈಂಗಿಕ ಸಂಪರ್ಕ, ಸುರಕ್ಷತೆ ಲೈಂಗಿಕತೆಗೆ ನಿರೋಧ್‌ ಬಳಸುವುದು, ಹೊಸ ಸೂಜಿ, ಸಿರಂಜ್‌ಗಳ ಬಳಕೆ, ಗರ್ಭಿಣಿ ಮಹಿಳೆಯರ ಎಚ್‌ಐವಿ ಪರೀಕ್ಷೆಯನ್ನು ಸ್ವಯಂ ಪ್ರೇರಿತವಾಗಿ ಐಸಿಟಿಸಿಯಲ್ಲಿ ಮಾಡಿಸಿ ಕೊಂಡು, ಸೋಂಕಿದ್ದಲ್ಲಿ ಎಆರ್‌ಟಿ, ಎಆರ್‌ವಿ ಚಿಕಿತ್ಸೆಯನ್ನು ಪ್ರಾರಂಭಿಸು ವುದರಿಂದ ಎಚ್‌ಐವಿ ಸೋಂಕು ಹರಡುವುದನ್ನು ನಿಯಂತ್ರಿಸ ಬಹುದು ಎಂದರು.

ಇವುಗಳಿಂದ ಹರಡುವುದಿಲ್ಲ: ಸೊಳ್ಳೆ ಕೀಟಗಳು ಕಡಿಯುವುದರಿಂದ, ಸಾರ್ವಜನಿಕ ಶೌಚಾಲಯ ಬಳಸುವುದರಿಂದ, ಸೋಂಕಿತರು ಕೆಮ್ಮಿದಾಗ, ಸೀನಿದಾಗ, ಸೋಂಕಿತರ ಜೊತೆ ಯಲ್ಲಿ ಊಟ ಮಾಡುವುದರಿಂದ, ಸೋಂಕಿತರ ಬಟ್ಟೆಉಪಯೋಗಿಸುವುದರಿಂದ, ಸೋಂಕಿತ ರೊಂದಿಗೆ ಮಾತನಾಡುವುದರಿಂದ, ಸೋಂಕಿತರೊಂದಿಗೆ ಒಂದೇ ಹಾಸಿಗೆಯಲ್ಲಿ ಮಲಗುವುದರಿಂದ, ಸೋಂಕಿತರೊಂದಿಗೆ ಕೈ ಕುಲುಕುವು ದರಿಂದ ಎಚ್‌ಐವಿ ಹರುಡುವುದಿಲ್ಲ.

Advertisement

ಪರೀಕ್ಷೆ ಎಲ್ಲಿ ಮಾಡಿಸುವುದು: ಎಚ್‌ಐವಿಪರೀಕ್ಷೆಯನ್ನು ವ್ಯಕ್ತಿಯು ಇಷ್ಟಪಟ್ಟಲ್ಲಿ ಸಮಗ್ರ ಆಪ್ತ ಸಮಾಲೋಚನೆ ಮತ್ತು ಚಿಕಿತ್ಸಾ ಕೇಂದ್ರಗಳಲ್ಲಿ(ಐಸಿಟಿಸಿ) ಪರೀಕ್ಷಿಸಿಕೊಳ್ಳಬಹುದು. ಜಿಲ್ಲೆಯಲ್ಲಿನ ಎಲ್ಲಾ 24/7 ಪ್ರಾಥ ಮಿಕ ಆರೋಗ್ಯ ಕೇಂದ್ರಗಳಲ್ಲಿ ಐಸಿಟಿಸಿ ಪರೀಕ್ಷಾ ಸೌಲಭ್ಯಗಳನ್ನು ಉಚಿತವಾಗಿ ಪಡೆಯಬಹುದು. ಏಡ್ಸ್‌ ನಿಯಂತ್ರಣಾಧಿಕಾರಿ ದೇವರಾಜು, ಐಸಿಟಿಸಿ ಕೌನ್ಸಿಲರ್‌ ರವಿಚಂದ್ರ, ಉಮಾಶಂಕರ್‌, ಹರಿಪ್ರಸಾದ್‌ ಸೇರಿದಂತೆ ಆಶಾ ಕಾರ್ಯಕರ್ತರು ಇದ್ದರು. ಕಾರ್ಯಕ್ರಮಕ್ಕೂ ಮುನ್ನಾ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಜಾಥಾ ಕಾರ್ಯಕ್ರಮ ನಡೆಸಿ ಅರಿವು ಮೂಡಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next