Advertisement

Congress ಪಕ್ಷಕ್ಕೆ ತಮ್ಮ ಮಾಸಿಕ ವೇತನದ 1.38 ಲ.ರೂ.ದೇಣಿಗೆ ನೀಡಿದ ಎಐಸಿಸಿ ಅಧ್ಯಕ್ಷ ಖರ್ಗೆ

12:21 AM Dec 19, 2023 | Team Udayavani |

ಹೊಸದಿಲ್ಲಿ: ತಮ್ಮ ವೇತ ನದ 1,38,000ರೂ.ಗಳ ನ್ನು ದೇಣಿಗೆ ನೀಡುವ ಮೂಲಕ ಕಾಂಗ್ರೆಸ್‌ನ “ದೇಶಕ್ಕಾಗಿ ದೇಣಿಗೆ’ ಅಭಿ ಯಾನಕ್ಕೆ ಪಕ್ಷದ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸೋಮವಾರ ಚಾಲನೆ ನೀಡಿದರು.
ಈ ವೇಳೆ ಮಾತನಾಡಿದ ಖರ್ಗೆ, “ಸಣ್ಣ ದೇಣಿಗೆದಾರ ರಿಂದ ಪಕ್ಷ ಹಣ ಸಂಗ್ರಹಿಸಲಿದೆ. ಶ್ರೀಮಂತರಿಂದ ಮಾತ್ರ ದೇಣಿಗೆ ಸಂಗ್ರಹಿಸಿದರೆ, ಅವರ ಪರವಾಗಿ ಯೋಜನೆಗಳು, ನೀತಿಗಳನ್ನು ರೂಪಿಸಬೇಕಾಗುತ್ತದೆ. ನಮ್ಮ ಪಕ್ಷ ಶೋಷಿತರ, ದಲಿತರ, ಆದಿವಾಸಿಗಳ, ಹಿಂದುಳಿದ ವರ್ಗ ಗಳ, ಅಲ್ಪಸಂಖ್ಯಾಕರ ಪರವಾಗಿ ಮೊದಲಿನಿಂದಲೂ ಇದೆ. ಅವರೂ ನಮಗೆ ಬೆಂಬಲ ನೀಡುತ್ತಾ ಬಂದಿದ್ದಾರೆ. ಜನಸಾಮಾ ನ್ಯರ ಸಹಾಯದಿಂದ ದೇಶ ಕಟ್ಟಲು ಈ ಅಭಿಯಾನ ಆರಂಭಿಸಿ ದ್ದೇವೆ’ ಎಂದರು. ಡಿ.28ರಂದು ಕಾಂಗ್ರೆಸ್‌ ಪಕ್ಷಕ್ಕೆ 138 ವರ್ಷ ತುಂಬಲಿದ್ದು, ಈ ಹಿನ್ನೆಲೆಯಲ್ಲಿ 138 ರೂ., 1,380 ರೂ., 13,800ರೂ. ದೇಣಿಗೆ ನೀಡುವಂತೆ ಜನಸಾಮಾನ್ಯರಲ್ಲಿ ಕೋಶಾಧಿಕಾರಿ ಅಜಯ್‌ ಮಕೇನ್‌ ಮನವಿ ಮಾಡಿದರು.

Advertisement

ಕಾಂಗ್ರೆಸ್‌ಗೆ ದೇಣಿಗೆ ನೀಡಲು ಹೋದರೆ ಬಿಜೆಪಿ ಪೇಜ್‌ ಓಪನ್‌!
ದೇಣಿಗೆ ಅಭಿ ಯಾನ ಆರಂಭಿ ಸಿದ ಕಾಂಗ್ರೆ ಸ್‌ ಆರಂಭ ದಲ್ಲೇ ಪೇಚಿಗೆ ಸಿಲುಕಿದ ಘಟನೆ ನಡೆದಿದೆ. “ಡೊನೇಟ್‌ ಫಾರ್‌ ದೇಶ್‌’ ಹೆಸರಿನ ಡೊಮೈನ್‌ ಅನ್ನು ಇಂಟರ್‌ನೆಟ್‌ನಲ್ಲಿ ಬಿಜೆಪಿ ಮೊದಲೇ ಬಿಜೆಪಿ ಕ್ರಿಯೇಟ್‌ ಮಾಡಿತ್ತು. ಆದರೆ ಇದೇ ಹೆಸ ರಲ್ಲಿ ಸೋಮವಾರ ಕಾಂಗ್ರೆಸ್‌ ಅಭಿಯಾನ ಆರಂಭಿಸುತ್ತಿದ್ದಂತೆ, ದೇಣಿಗೆ ನೀಡ ಲೆಂದು ಈ ಡೊಮೈನ್‌ಗೆ ಹೋದರೆ ಬಿಜೆಪಿಯ ಪೇಜ್‌ ಓಪನ್‌ ಆಗುತ್ತಿತ್ತು. ಅನಂತರ ಇದನ್ನು ಅರಿತ ಕಾಂಗ್ರೆಸ್‌, ತನ್ನ ಡೊಮೈನ್‌ ಹೆಸರನ್ನು ಬದಲಿಸಿತು. ಜತೆಗೆ ಬಿಜೆಪಿ ವಿರುದ್ಧ ಕಿಡಿ ಕಾ ರಿದ ಕಾಂಗ್ರೆಸ್‌, “ನಾವು ಅಭಿಯಾನ ಆರಂಭಿಸುತ್ತಿದ್ದೇವೆ ಎಂದು ಹೇಳಿದ ತತ್‌ಕ್ಷಣ ಬಿಜೆಪಿ ಕಡೆಯವರು ನಕಲಿ ಡೊಮೈನ್‌ಗಳನ್ನು ಕ್ರಿಯೇಟ್‌ ಮಾಡಿ, ಗೊಂದಲ ಉಂಟುಮಾಡಿದ್ದಾರೆ. ಆದರೆ ಅಭಿಯಾನದ ಹೆಸರಲ್ಲೂ ನಮ್ಮನ್ನೇ ಕಾಪಿ ಮಾಡಿದ್ದಕ್ಕೆ ಧನ್ಯವಾದಗಳು’ ಎಂದು ಕಾಂಗ್ರೆಸ್‌ ನಾಯಕಿ ಸುಪ್ರಿಯಾ ಶ್ರೀನಾಥೆ ವ್ಯಂಗ್ಯವಾಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next