Advertisement

ಶೀಘ್ರವೇ ಎಐಎಡಿಎಂಕೆ ಉಭಯ ಬಣಗಳ ವಿಲಯನ : ಓಪಿಎಸ್‌

04:11 PM Aug 19, 2017 | udayavani editorial |

ಚೆನ್ನೈ : ಎಐಎಡಿಎಂಕೆ ಉಭಯ ಬಣಗಳ ವಿಲಯನ ಕುರಿತ ಮಾತುಕತೆಗಳು ಸರಿಯಾದ ಹಾದಿಯಲ್ಲಿ ಸುಗಮವಾಗಿ ಸಾಗುತ್ತಿದ್ದು ಇನ್ನೆರಡು ದಿನಗಳ ಒಳಗೆ ಧನಾತ್ಮಕ ಫ‌ಲಿತಾಂಶ ಮೂಡಿಬರಲಿದೆ ಎಂದು ತಮಿಳು ನಾಡು ಮಾಜಿ ಮುಖ್ಯಮಂತ್ರಿ ಓ ಪನ್ನಿರಸೆಲ್ವಂ ಹೇಳಿದ್ದಾರೆ. 

Advertisement

2016ರ ಡಿಸೆಂಬರ್‌ನಲ್ಲಿ  ಜಯಲಲಿತಾ ಸಾವಿನ ಬಳಿಕ ಎಐಎಡಿಎಂಕೆ ಮೂರು ಹೋಳಾಗಿತ್ತು. 

ಮೊದಲ ಬಂಡಾಯ ಪನ್ನೀರಸೆಲ್ವಂ ಅವರಿಂದ ಪಕ್ಷದ ಪ್ರಧಾನ ಕಾರ್ಯದಶಿರ ಹಾಗೂ ಈಗ ಜೈಲುಪಾಲಾಗಿರುವ ವಿ ಕೆ ಶಶಿಕಲಾ ವಿರುದ್ಧ ನಡೆದಿತ್ತು. 

ಅನಂತರದ ಎರಡು ಬಂಡಾಯಗಳು ಮುಖ್ಯಮಂತ್ರಿ ಪಳನಿಸ್ವಾಮಿ ನೇತೃತ್ವದಲ್ಲಿ ಮತ್ತು ಉಪ ಪ್ರಧಾನ ಕಾರ್ಯದರ್ಶಿ ಟಿ ಟಿ ವಿ ದಿನಕರನ್‌ (ಶಶಿಕಲಾ ಸೋದರ ಸಂಬಂಧಿ) ಅವರಿಂದ ನಡೆದಿತ್ತು. 

Advertisement

Udayavani is now on Telegram. Click here to join our channel and stay updated with the latest news.

Next