Advertisement

ಅಹಮದಾಬಾದ್‌ ಆಸ್ಪತ್ರೆ ವಿರುದ್ಧ ಕಿಡಿ

02:43 AM May 25, 2020 | Sriram |

ಅಹಮದಾಬಾದ್‌: ದೇಶದ ಅತಿ ದೊಡ್ಡ ಸ‌ರಕಾರಿ ಆಸ್ಪತ್ರೆಗಳಲ್ಲಿ ಒಂದಾದ ಅಹಮದಾಬಾದ್‌ನ ಸರಕಾರಿ ಆಸ್ಪತ್ರೆಯಲ್ಲಿ ಈವರೆಗೆ 350ಕ್ಕೂ ಹೆಚ್ಚಿನ ಕೋವಿಡ್ 19 ಸೋಂಕಿತರು ಮೃತಪಟ್ಟಿರುವುದಕ್ಕೆ ಗುಜರಾತ್‌ ಹೈಕೋರ್ಟ್‌ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ. ಮಾನವನ ಜೀವ ಅತಿ ಅಮೂಲ್ಯವಾದುದು. ಅದನ್ನು ವ್ಯರ್ಥವಾಗಿ ಸಾಯಲು ಬಿಡಬೇಡಿ ಎಂದು ಕಿಡಿ ಕಾರಿದೆ.

Advertisement

ರಾಜ್ಯದಲ್ಲಿಯೇ ಅತಿ ಹೆಚ್ಚಿನ ಕೋವಿಡ್ 19 ಸೋಂಕಿತರು ಮೃತಪಟ್ಟಿರುವುದು ಈ ಆಸ್ಪತ್ರೆಯಲ್ಲಿ. ಕಳೆದ 8 ವಾರಗಳ ಅವಧಿ ಯಲ್ಲಿ ರಾಜ್ಯದ ಕೋವಿಡ್ 19 ಮೃತರ ಪಟ್ಟಿಗೆ ಹೆಚ್ಚಿನ ಹೆಸರನ್ನು ಸೇರಿಸಿರುವುದು ಈ ಆಸ್ಪತ್ರೆ. ಕೋವಿಡ್ 19 ಸೋಂಕಿತರು ಇಲ್ಲಿ ಚಿಕಿತ್ಸೆಗೆ ದಾಖಲಾಗುತ್ತಿದ್ದಂತೆ ನಾಲ್ಕೈದು ದಿನಗಳಲ್ಲೇ ಸಾವನ್ನಪ್ಪುತ್ತಿದ್ದಾರೆ. ಇಲ್ಲಿ ರೋಗಿಗಳಿಗೆ ಸರಿಯಾಗಿ ಚಿಕಿತ್ಸೆ ದೊರೆಯುತ್ತಿಲ್ಲ ಎಂಬುದು ಇದರಿಂದ ಕಂಡು ಬರುತ್ತದೆ. ಬಡ ಮತ್ತು ಅಸಹಾಯಕ ರೋಗಿಗಳಿಗೆ ಚಿಕಿತ್ಸೆಗಾಗಿ ಸರಕಾರಿ ಆಸ್ಪತ್ರೆಗೆ ಬರದೆ ಬೇರೆ ದಾರಿಯಿಲ್ಲ. ಆದರೆ, ಈ ಆಸ್ಪತ್ರೆ “ಕೈದಿಗಳನ್ನು ಇಡುವ ನೆಲಮಾಳಿಗೆಯ ಸೆರೆಮನೆಯಷ್ಟೇ ಉತ್ತಮ ವಾಗಿದೆ’ ಎಂದು ನ್ಯಾಯಾಲಯ ಟೀಕಿಸಿದೆ. ಈ ಆಸ್ಪತ್ರೆಯಲ್ಲಿ ಕೋವಿಡ್ 19 ಸೋಂಕಿತರಿಗಾಗಿ 1,200 ಹಾಸಿಗೆಗಳನ್ನು ಮೀಸಲಿಡಲಾಗಿದೆ.

ಇದೇ ವೇಳೆ, ರಾಜ್ಯದ ಆರೋಗ್ಯ ಸಚಿವ ನಿತಿನ್‌ಭಾಯಿ ರತಿಲಾಲ್‌ ಪಟೇಲ್‌ವಿರು ದ್ಧವೂ ಅಸಮಾಧಾನ ವ್ಯಕ್ತಪಡಿಸಿದ ನ್ಯಾಯಾಲಯ, ಸಚಿವರು ಇಲ್ಲಿಗೆ ಎಷ್ಟು ಬಾರಿ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ ಎಂದು ಪ್ರಶ್ನಿಸಿತು.

 

Advertisement

Udayavani is now on Telegram. Click here to join our channel and stay updated with the latest news.

Next