ಜಮ್ಮು: ದೇಶದ ಸ್ವಾತಂತ್ರ್ಯ ದಿನಾಚರಣೆಗೂ ಮುನ್ನ ಗಡಿ ಭದ್ರತಾ ಪಡೆ ಮತ್ತು ಯೋಧರು ಸೋಮವಾರ (ಆಗಸ್ಟ್ 09) ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ ಉಗ್ರರ ಅಡಗು ತಾಣವನ್ನು ಬೇಧಿಸುವ ಮೂಲಕ ಭಾರೀ ಪ್ರಮಾಣದ ಶಸ್ತ್ರಾಸ್ತ್ರ ಮತ್ತು ಸ್ಫೋಟಕಗಳನ್ನು ವಶಪಡಿಸಿಕೊಂಡಿರುವುದಾಗಿ ವರದಿ ತಿಳಿಸಿದೆ.
ಇದನ್ನೂ ಓದಿ:ಕೋವಿಡ್ ಮೂರನೇ ಅಲೆಯ ಭೀತಿ : ಗೋವಾದಲ್ಲಿ ಮತ್ತೆ ಒಂದು ವಾರ ಕರ್ಫ್ಯೂ ಮುಂದುವರಿಕೆ
ವರದಿಯ ಪ್ರಕಾರ, ಬಿಎಸ್ ಎಫ್ ಯೋಧರ ಮುನ್ನೆಚ್ಚರಿಕೆಯ ಪರಿಣಾಮ 75ನೇ ಸ್ವಾತಂತ್ರ್ಯ ದಿನಾಚರಣೆಗೂ ಮುನ್ನ ಪೂಂಚ್ ಸೆಕ್ಟರ್ ನಲ್ಲಿ ಉಗ್ರರ ಅಡಗುತಾಣವನ್ನು ಬೇಧಿಸುವ ಮೂಲಕ ಅಪಾರ ಪ್ರಮಾಣದ ಸ್ಫೋಟಕ ವಶಪಡಿಸಿಕೊಂಡು, ಭಯೋತ್ಪಾದಕ ದಾಳಿಯ ಸಂಚನ್ನು ವಿಫಲಗೊಳಿಸುವಲ್ಲಿ ಯಶಸ್ವಿಯಾಗಿದೆ ಎಂದು ಅಧಿಕಾರಿಗಳು ವಿವರಿಸಿದ್ದಾರೆ.
ಇಂದು ಖಚಿತ ಮಾಹಿತಿ ಮೇರೆಗೆ ಗಡಿ ಭದ್ರತಾ ಪಡೆ, ರಾಷ್ಟ್ರೀಯ ರೈಫಲ್ಸ್ ಮತ್ತು ವಿಶೇಷ ಕಾರ್ಯಾಚರಣೆ ಪಡೆ ಜಂಟಿಯಾಗಿ ಪೂಂಚ್ ಪ್ರದೇಶದಲ್ಲಿ ಶೋಧ ಕಾರ್ಯಾಚರಣೆ ನಡೆಸಿ, ಉಗ್ರರ ದಾಳಿ ಸಂಚನ್ನು ವಿಫಲಗೊಳಿಸಿರುವುದಾಗಿ ಬಿಎಸ್ ಎಫ್ ನ ಡಿಐಜಿ ಮೆಂಧಾರ್ ತಿಳಿಸಿದ್ದಾರೆ.
ಉಗ್ರರ ಅಡಗುತಾಣದಲ್ಲಿ ಎಕೆ 47 ರೈಫಲ್ಸ್ ಎರಡು, ಚೀನಾ ನಿರ್ಮಿತ ಪಿಸ್ತೂಲ್ ಒಂದು, ಗ್ರೆನೇಡ್ಸ್ 04, ಡಿಟೋನೇಟರ್ಸ್ 04 ಸೇರಿದಂತೆ ಭಾರೀ ಪ್ರಮಾಣದ ಶಸ್ತ್ರಾಸ್ತ್ರ, ಸ್ಫೋಟಕ ವಶಪಡಿಸಿಕೊಳ್ಳಲಾಗಿದೆ ಎಂದು ವರದಿ ಹೇಳಿದೆ.