ಶಿವಮೊಗ್ಗ: ಆಗುಂಬೆ ಘಾಟಿಯಲ್ಲಿ ಲಾರಿ ಟೈರ್ ಸ್ಪೋಟಗೊಂಡು ಕೆಲವು ಹೊತ್ತು ವಾಹನ ಸಂಚಾರ ಸ್ಥಗಿತವಾಗಿತ್ತು.
ಘಾಟಿಯ 8ನೇ ತಿರುವಿನಲ್ಲಿ ಘಟನೆ ಸಂಭವಿಸಿದೆ ಎಂದು ತಿಳಿದು ಬಂದಿದೆ. ಕ್ಯಾಂಟರ್ ಲಾರಿಯ ಹಿಂಬದಿ ಟೈರ್ ಸ್ಪೋಟಗೊಂಡಿದೆ. ತಿರುವಿನಲ್ಲೇ ಲಾರಿ ನಿಂತಿದ್ದರಿಂದ ಇತರೆ ವಾಹನಗಳ ಸಂಚಾರಕ್ಕೆ ಕಷ್ಟವಾಗಿತ್ತು.
ಪೊಲೀಸರು ಕ್ರೇನ್ ತರಿಸಿ ಲಾರಿಯನ್ನು ಪಕಕ್ಕೆ ಸರಿಸಿದ್ದಾರೆ. ಬಸ್ಸುಗಳು ಕೂಡ ಸುಗಮವಾಗಿ ಸಂಚರಿಸಲು ಅವಕಾಶ ಕಲ್ಪಿಸಲಾಯಿತು. ಇದರಿಂದ ವಾಹನಗಳು ನಿಧಾನವಾಗಿ ಸಂಚರಿಸುತ್ತಿವೆ.
ತಿರುವಿನಲ್ಲಿ ಲಾರಿ ನಿಂತಿದ್ದರಿಂದ ಹಿಂಬದಿಯಲ್ಲಿ ಕಿ.ಮೀ.ಗಟ್ಟಲೆ ಟ್ರಾಫಿಕ್ ಜಾಮ್ ಉಂಟಾಗಿತ್ತು. ತೀರ್ಥಹಳ್ಳಿ ಕಡೆಯಲ್ಲೂ ದೊಡ್ಡ ಸಂಖ್ಯೆಯ ವಾಹನಗಳು ನಿಂತಿವೆ. ಸೋಮೇಶ್ವರದಲ್ಲಿ ಘಾಟಿಯ ಪ್ರವೇಶದಲ್ಲಿ ಪೊಲೀಸರು ವಾಹನಗಳನ್ನು ತಡೆ ಹಿಡಿದಿದ್ದಾರೆ. ಒಮ್ಮೆಗೆ ಕೆಲವು ವಾಹನಗಳನ್ನು ಘಾಟಿಯ ಮೇಲೆ ಬಿಡಲಾಗುತ್ತಿದೆ.
Related Articles
ಇದನ್ನೂ ಓದಿ: ಟ್ರಾಫಿಕ್ ನಿಯಮಾವಳಿ ಉಲ್ಲಂಘನೆ: ನಗರದಲ್ಲಿ 63 ಲ.ರೂ. ದಂಡ ಸಂಗ್ರಹ!