Advertisement

Sugarcane; ಎರಡು ಕಬ್ಬಿನ‌ ತಳಿ ಬೆಳೆಯದಂತೆ ರೈತರಿಗೆ ಕೃಷಿ ವಿವಿ ಮನವಿ

05:42 PM Sep 02, 2024 | Team Udayavani |

ಧಾರವಾಡ: ಕಬ್ಬಿನ ಎರಡು ತಳಿಗಳಲ್ಲಿ ಶಿಲೀಂದ್ರ ರೋಗ ತೀವ್ರವಾಗಿ ಕಾಣಿಸಿಕೊಂಡಿದ್ದು, ಹೀಗಾಗಿ ಈ ಎರಡು ತಳಿಯ ಕಬ್ಬು ಬೆಳೆಯದಂತೆ ಹಾಗೂ ಇದರ ಬೀಜ ಖರೀದಿ, ಮಾರಾಟ ಮಾಡದಂತೆ ಕೃಷಿ ವಿಶ್ವವಿದ್ಯಾಲಯವು ಕಬ್ಬು ಬೆಳೆಗಾರರಿಗೆ ಮನವಿ ಮಾಡಿದೆ.

Advertisement

ಕೃಷಿ ವಿಶ್ವವಿದ್ಯಾಲಯ ವ್ಯಾಪ್ತಿಯ ವಿವಿಧ ಸಂಶೋಧನಾ ಕೇಂದ್ರಗಳಲ್ಲಿ ಹಾಗೂ ಕೆಲ ರೈತ / ಸಂಸ್ಥೆಗಳ ಕ್ಷೇತ್ರಗಳಲ್ಲಿ ಪ್ರಾಯೋಗಿಕ ಹಂತದಲ್ಲಿದ್ದ ಎರಡು ಕಬ್ಬಿನ ತಳಿಗಳಲ್ಲಿ ಹೆಚ್ಚಿನ ಸಂಶೋಧನಾ ವಿಶ್ಲೇಷಣೆ ಕೈಗೊಳ್ಳಲಾಗಿದೆ. ಆಗ ಕಬ್ಬಿನ ತಳಿಗಳಾದ CoSNK 13436 ಮತ್ತು SNK 13374 ತಳಿಗಳು ಪಕ್ಕಾ ಬೋಯಿಂಗ್ ಎಂಬ ಗಾಳಿಯ ಮೂಲಕ ಹರಡುವ ಶಿಲೀಂದ್ರ ರೋಗಕ್ಕೆ ತೀವ್ರವಾಗಿ ತುತ್ತಾಗಿರುವ ಗುಣಲಕ್ಷಣಗಳು ಈಗಾಗಲೇ ಕಂಡು ಬಂದಿದ್ದು, ಹೀಗಾಗಿ ಈ ತಳಿಗಳನ್ನು ಬೆಳೆಯಬಾರದೆಂದು ವಿಶ್ವವಿದ್ಯಾಲಯದ ಪ್ರಕಟಣೆ ತಿಳಿಸಿದೆ.

ಕೃಷಿ ವಿಶ್ವವಿದ್ಯಾಲಯದ ವಿವಿಧ ಸಂಶೋಧನಾ ಕೇಂದ್ರಗಳಾದ ಮುಧೋಳ, ಸಂಕೇಶ್ವರ ಮತ್ತು ಜಲ ಮತ್ತು ನೆಲ ನಿರ್ವಹಣಾ ಸಂಸ್ಥೆ (ವಾಲ್ಮಿ) ಹಾಗೂ ಕೃಷಿ ವಿಜ್ಞಾನ ಕೇಂದ್ರ ಮತ್ತಿಕೊಪ್ಪದಲ್ಲಿ ಕೈಗೊಂಡ ಪ್ರಾಯೋಗಿಕ ಪರಿಶೀಲನಾ ಹಂತದ ತಾಕುಗಳಲ್ಲಿ ಈ ರೋಗವು ಅತಿಯಾಗಿ ಕಂಡು ಬಂದಿದ್ದು ದಾಖಲಾಗಿದೆ. ಹವಾಮಾನದ ವೈಪರೀತ್ಯಗಳಿಂದ ಉಂಟಾಗುವ ಉಷ್ಣತೆಯ ಏರುಪೇರುಗಳಿಗೆ ವಿಶೇಷವಾಗಿ ಹೆಚ್ಚು ಮಳೆಯಾದ ನಂತರ ಒಮ್ಮೆಲೆ ತಾಪಮಾನದಲ್ಲಿ ಉಷ್ಣ ತಾಪಮಾನ ಏರಿಕೆಯಾಗುವ (ಜುಲೈ, ಆಗಸ್ಟ್ ಮತ್ತು ಸೆಪ್ಟೆಂಬರ್) ಸಂದರ್ಭದಲ್ಲಿ ಈ ರೋಗವು ಹಠಾತ್ತಾಗಿ ಉಲ್ಬಣಗೊಳ್ಳುತ್ತದೆ. ಆದ್ದರಿಂದ, ಕೃಷಿ ವಿಶ್ವವಿದ್ಯಾಲಯದ ಹಿಂಗಾರು ವಲಯ ಸಂಶೋಧನಾ ಮತ್ತು ವಿಸ್ತರಣಾ ಸಲಹಾ ಸಮಿತಿಯ ನಡಾವಳಿಗಳ ಪ್ರಕಾರ ಈ ತಳಿಗಳನ್ನು ಬೆಳೆಯದಿರಲು ವಿಶ್ವವಿದ್ಯಾಲಯ ನಿರ್ಧರಿಸಿದೆ. ಕಾರಣ, ರೈತ ಬಾಂಧವರು ಈ ತಳಿಗಳ ಬೀಜಗಳನ್ನು ಯಾರಿಂದಲೂ ಖರೀದಿಸಕೂಡದೆಂದು ಮತ್ತು ಮಾರಾಟ ಮಾಡಬಾರದು ಎಂದು ಕೃಷಿ ವಿಶ್ವವಿದ್ಯಾಲಯ ಪ್ರಕಟಣೆ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next