Advertisement
ಈಗ ಗ್ರಾಮಗಳು ನಗರಗಳಾಗಿ ಪರಿವರ್ತನೆಗೊಳ್ಳುತ್ತಿವೆ. ಗ್ರಾಮೀಣ ವರದಿಗಾರರಾಗಿ ಹೆಸರು ಪಡೆದಿರುವ ನಿಮ್ಮ ಅನಿಸಿಕೆ ಏನು?2001ರಿಂದ 2011ರವರೆಗೆ ದೊಡ್ಡ ಪ್ರಮಾಣದಲ್ಲಿ ಜನರು ವಲಸೆ ಹೋಗಿದ್ದಾರೆ. ಇದು ಕೇವಲ ನಗರಕ್ಕೆ ಅಂತ ಅರ್ಥವಲ್ಲ. ಗ್ರಾಮಗಳಿಂದ ಗ್ರಾಮಗಳಿಗೆ, ಗ್ರಾಮಗಳಿಂದ ನಗರಕ್ಕೆ ಇದು ನಡೆದಿದೆ. ಗ್ರಾಮಗಳಿಂದ ಜನರು ವಲಸೆ ಹೋಗಲು ಮುಖ್ಯ ಕಾರಣ ಕೃಷಿ ಕ್ಷೇತ್ರ ಬಿದ್ದು ಹೋದದ್ದು. ನಗರಗಳಲ್ಲಿ ಎರಡು ತರಹಗಳಿವೆ. ಒಂದು ಶಾಸನಬದ್ಧ ನಗರಗಳು, ಇನ್ನೊಂದು ಜನಸಂಖ್ಯೆ ಆಧಾರಿತ ನಗರಗಳು. ಜನಸಂಖ್ಯೆ ಆಧಾರಿತ ನಗರಗಳು ಗ್ರಾಮಗಳು ಕಣ್ಮರೆಯಾಗಿ ರೂಪುಗೊಂಡವು. ಇದು ಅಧಿಸೂಚಿತ ಪ್ರದೇಶಗಳಾಗಿರುವುದಿಲ್ಲ. ಯೋಜನಾಬದ್ಧ ನಗರಗಳಾಗಿಲ್ಲ. ಆಕಸ್ಮಿಕವಾಗಿ ನಗರದ ಲಕ್ಷಣಗಳನ್ನು ಹೊಂದಿವೆ ಅಷ್ಟೆ. ಚದರ ಕಿ.ಮೀ.ಗೆ ನಿರ್ದಿಷ್ಟ ಜನಸಾಂದ್ರತೆ, ಒಟ್ಟು ಕಾರ್ಮಿಕರಲ್ಲಿ ಪುರುಷರು ಪ್ರಮಾಣ ಎಂಬಿತ್ಯಾದಿ ನಿಯಮಾವಳಿಗಳು ನಗರಗಳಿಗೆ ಅನ್ವಯವಾಗುತ್ತದೆ. ಆದರೆ ಗ್ರಾಮೀಣ ಭಾಗಕ್ಕೆ ಇಂತಹ ಮಾನದಂಡಗಳೇ ಇಲ್ಲ. ನಗರಗಳು ಹೊರತಾದ ಪ್ರದೇಶಗಳು ಗ್ರಾಮೀಣ ಎನಿಸಿಕೊಂಡಿವೆ ಅಷ್ಟೆ. ನಗರಗಳಾದರೂ ಸುಖದಲ್ಲಿದೆಯಾ ಎಂದು ಕೇಳಿದರೆ ಅದೂ ಇಲ್ಲ. ಯೋಜನಾಬದ್ಧ ಮೂಲಸೌಕರ್ಯಗಳು ಇಲ್ಲ. ಸೂಕ್ತ ಅಗ್ನಿಶಾಮಕ ವ್ಯವಸ್ಥೆ, ಸೂಕ್ತ ಆರೋಗ್ಯ ಸೌಲಭ್ಯ, ಶಿಕ್ಷಣ ವ್ಯವಸ್ಥೆ
ಗಳು ಇಲ್ಲ. ನಗರಗಳು ಗೂಂಡಾಗಳಿಂದ ತುಂಬಿ ಹೋಗಿವೆ.
ಇದು ಎಲ್ಲ ನಗರವಾಸಿಗಳ ಉಪಯೋಗಕ್ಕೆ ಬರುತ್ತಿಲ್ಲ. ನಗರಗಳ ಹೊರವಲಯಗಳನ್ನು ಸೇರಿಸಿಕೊಳ್ಳುತ್ತಿಲ್ಲ. ಕೇವಲ ಶೇ. 2.8 ಜನಸಂಖ್ಯೆಗೆ ಮಾತ್ರ ಪ್ರಯೋಜನವಾಗು ತ್ತಿದೆ. ಕೇವಲ ಸಿರಿವಂತರನ್ನು ಗಮನದಲ್ಲಿಟ್ಟುಕೊಂಡು ಇದು ರೂಪುಗೊಳ್ಳುತ್ತಿದೆ. ಆಂಧ್ರಪ್ರದೇಶದ ಅಮರಾವತಿ, ಇಂದೋರ್‌ನಲ್ಲಿ ಸ್ಮಾರ್ಟ್‌ಸಿಟಿ ಯೋಜನೆ ನಡೆಯುತ್ತಿದೆ. ಇದರಿಂದ ಬಡ ಜನರಿಗೆ ಯಾವುದೇ ಪ್ರಯೋಜನವಿಲ್ಲ. ಇದು ಕೇವಲ ಇಲೈಟ್ ವರ್ಗದ ಜನರ ಸೇವೆಗೆ ನಿಂತಿದೆ. ಗ್ರಾಮೀಣ ಭಾಗಗಳು ಕಣ್ಮರೆಯಾಗಲು ಮುಖ್ಯ ಕಾರಣ?
ಹೌದು ಕೃಷಿ ಭೂಮಿಗಳನ್ನು ಸ್ವಾಧೀನ ಪಡಿಸಿಕೊಳ್ಳುವ ಪ್ರಕ್ರಿಯೆ ಜಾಸ್ತಿಯಾಗಿದೆ. ಉದಾಹರಣೆಗೆ, ಹೈದರಾಬಾದ್ ವಿಮಾನ ನಿಲ್ದಾಣದ ಹೆಸರಿನಲ್ಲಿ ದಲಿತರು, ಬಂಜಾರರ ಬಹಳಷ್ಟು ಭೂಮಿಗಳನ್ನು ಭೂಸ್ವಾಧೀನಪಡಿಸಿಕೊಂಡರು. ಕೊನೆಗೆ ಸಾಫ್ಟ್ವೇರ್ ಪಾರ್ಕ್, ಫಾರ್ಮಾ ಪಾರ್ಕ್, ಎಸ್‌ಇಝಡ್ ವಲಯಗಳನ್ನು ಘೋಷಿಸುತ್ತಾರೆ. ಎಸ್‌ಇಝಡ್‌ನಿಂದ ಯಾವುದೇ ಪ್ರಯೋಜನವಿಲ್ಲ. ಇದು ರಿಯಲ್ ಎಸ್ಟೇಟ್ ದಂಧೆ ಅಷ್ಟೆ.
Related Articles
ಗಾಂಧೀಜಿಯವರು “ಇಂಡಿಯಾ ಲಿವ್ ಇನ್ ವಿಲೇಜಸ್’ ಎಂದರು. ನಾನು “ಇಂಡಿಯಾ ಲಿವ್ ಇನ್ ಎವ್ರಿವೇರ್’ ಅನ್ನುತ್ತೇನೆ. ಭಾರತದ ಬಹುಭಾಗ ಗ್ರಾಮಗಳಾಗಿದ್ದವು ಎನ್ನುವುದು ವಾಸ್ತವ. ನಗರ ಕೇಂದ್ರಗಳು ಹೆಚ್ಚಾಗುತ್ತಿವೆ, ಇದೇ ವೇಳೆ ನಗರದ ಕೊಳಚೆ ಪ್ರದೇಶವೂ ಜಾಸ್ತಿಯಾಗುತ್ತಿವೆ. ಇದೇ ರೀತಿ ಮುಂದುವರಿದರೆ ಬಹಳ ತೊಂದರೆ ಕಾದಿದೆ.
Advertisement
ಈ ನೇತ್ಯಾತ್ಮಕ ಬೆಳವಣಿಗೆಗಳು ಎಷ್ಟು ವರ್ಷಗಳಿಂದ ಹೆಚ್ಚಿವೆ ಎಂದು ಕಾಣುತ್ತಿದೆ? ಮುಖ್ಯ ಕಾರಣಗಳೇನು? 1980ರ ಬಳಿಕ ಈ ಬೆಳವಣಿಗೆ ಹೆಚ್ಚಾಗಿ ಕಾಣಿಸುತ್ತಿದೆ. ಜಲಕ್ಷಾಮ ಮಾನವ ನಿರ್ಮಿತ ಸಮಸ್ಯೆ, ನವ ಉದಾರೀಕರಣ ಆರ್ಥಿಕ ನೀತಿಯಂತಹ ಎಷ್ಟೋ ನೀತಿಗಳು ತಪ್ಪಾಗಿವೆಯಾದರೂ ಕೃಷಿಯನ್ನು ನಾಶ ಮಾಡುವ, ಕಾರ್ಪೊರೇಟ್ ಶಕ್ತಿಗಳಿಗೆ ಮಣೆ ಹಾಕುವ ನೀತಿ ಬಹಳ ಅಪಾಯಕಾರಿ. 25-30 ವರ್ಷಗಳಿಂದ ನಡೆಯುತ್ತಿರುವ ಈ ವಿದ್ಯಮಾನಗಳೇ ರೈತರ ಆತ್ಮಹತ್ಯೆಗಳಿಗೆ ಕಾರಣ. ಇದನ್ನು ಆಡಳಿತಾರೂಢರು ಬುದ್ಧಿಪೂರ್ವಕವಾಗಿ ಮಾಡುತ್ತಿದ್ದಾರೆ. ರೈತರ ಆತ್ಮಹತ್ಯೆಗಳು ಎಲ್ಲೆಲ್ಲಿ ಹೆಚ್ಚು ನಡೆಯುತ್ತಿವೆ? ಇದಕ್ಕೆ ಪರಿಹಾರವೇನು?
ಒಟ್ಟು ರೈತರ ಆತ್ಮಹತ್ಯೆಗಳಲ್ಲಿ ಆರು ರಾಜ್ಯಗಳು ಮೂರನೆಯ ಎರಡು ಪಾಲು ಹೊಂದಿವೆ. ಕ್ರಮವಾಗಿ ಮಹಾರಾಷ್ಟ್ರ, ಕರ್ನಾಟಕ, ಆಂಧ್ರಪ್ರದೇಶ, ತೆಲಂಗಾಣ, ಮಧ್ಯಪ್ರದೇಶ, ಛತ್ತೀಸ್‌ಗಢಗಳಲ್ಲಿ ಶೇ. 65-75 ರೈತರ ಆತ್ಮಹತ್ಯೆ ನಡೆಯುತ್ತಿವೆ. ನಾನು 2007ರಲ್ಲಿ ಸೊಮನಾಥ ಚಟರ್ಜಿಯವರು ಸ್ಪೀಕರ್ ಆಗಿರುವಾಗ ಸಂಸತ್ತಿನಲ್ಲಿ ಪ್ರಬಂಧ ಮಂಡಿಸಿದ್ದೆ. ಆದರೆ ಅದರ ಬಗ್ಗೆ ಯಾವುದೇ ಚರ್ಚೆಗಳಾಗಲಿಲ್ಲ. 20 ದಿನ ಕೃಷಿ ಸಮಸ್ಯೆಗಳ ಬಗೆಗೆ ವಿಶೇಷ ಅಧಿವೇಶನವನ್ನು ನಡೆಸಲು ಆಗ್ರಹಿಸಿದ್ದೆ. ಸರಕಾರದ ನೀತಿಗಳಲ್ಲಿ ಏನು ಬದಲಾವಣೆ ಆಗಬೇಕೆನ್ನುತ್ತೀರಿ?
ಸಂವಿಧಾನ ಕೊಟ್ಟ ಮೂಲಭೂತ ಹಕ್ಕುಗಳ ವಿವರಣೆಗಳನ್ನು ನೋಡಿದರೆ ಸಾಕು. ಆಹಾರ, ಶಿಕ್ಷಣ, ಪೌಷ್ಟಿಕಾಂಶ ಮೊದಲಾದ ಹಕ್ಕುಗಳನ್ನು ಜಾರಿಗೊಳಿಸಬೇಕು. ಅಸಮಾನತೆ ನೀಗಬೇಕು. ಎಂ.ಎಸ್.ಸ್ವಾಮಿನಾಥನ್ ಸಮಿತಿ ಶಿಫಾರಸು ಮಾಡಿದ ವರದಿ ಜಾರಿಗೊಳಿಸಬೇಕು. ಕೃಷಿ ಉತ್ಪಾದನೆ ವೆಚ್ಚಕ್ಕೆ ಶೇ.50 ರೈತರಿಗೆ ಸಿಗಬೇಕೆಂಬುದು ಸಮಿತಿಯ ಮೊದಲ ಶಿಫಾರಸು. ಇದು ಜಾರಿಗೊಳ್ಳದಿದ್ದರೆ ಕೃಷಿ ಕ್ಷೇತ್ರಕ್ಕೆ ಉಳಿಗಾಲವಿಲ್ಲ. ಮಹಿಳಾ ಸಬಲೀಕರಣಕ್ಕೆ ತಮ್ಮ ಸಲಹೆ?
ಆಸ್ತಿಯಲ್ಲಿ ಮಹಿಳೆಯರ ಹೆಸರು ದಾಖಲಾಗಬೇಕು. ಕೇವಲ ಶೇ.8 ಪ್ರಮಾಣದಲ್ಲಿ ಮಹಿಳೆಯರ ಹೆಸರು ಆಸ್ತಿ ದಾಖಲೆಯಲ್ಲಿದೆ. ಉಳಿದಂತೆ ಭೂಮಿ ಹಕ್ಕು ಗಂಡ, ತಂದೆ, ಮಕ್ಕಳ ಹೆಸರಿನಲ್ಲಿದೆ. ಶೇ.60 ಮಹಿಳೆಯರು ಕೃಷಿ ಕಾಯಕದಲ್ಲಿದ್ದಾರೆ. ಇವರ ಹೆಸರು ಕೃಷಿ ಭೂಮಿ ದಾಖಲೆಯಲ್ಲಿರಬೇಕು. ಉತ್ತರ ಕರ್ನಾಟಕಕ್ಕೂ ದಕ್ಷಿಣ ಕರ್ನಾಟಕಕ್ಕೂ ಅಭಿವೃದ್ಧಿಯಲ್ಲಿ ಬಹಳಷ್ಟು ವ್ಯತ್ಯಾಸಗಳಿವೆ. ನಿಮಗೇನನ್ನಿಸುತ್ತದೆ?
ಇದಕ್ಕೆ ಮುಖ್ಯ ಕಾರಣ ದಕ್ಷಿಣ ಕರ್ನಾಟಕಕ್ಕೆ ಸಾರಿಗೆ, ಶಿಕ್ಷಣ, ವಾಣಿಜ್ಯ, ಅಂತಾರಾಷ್ಟ್ರೀಯ ಸಂಬಂಧಗಳಂತಹ ಅವಕಾಶಗಳು ದೊರಕಿರುವುದು. ಐತಿಹಾಸಿಕವಾಗಿಯೂ ಉತ್ತರ ಕರ್ನಾಟಕದ ಕಲಬುರಗಿ, ಬೀದರ್‌ನಂತಹ ಪ್ರದೇಶಗಳು ಹೈದರಾಬಾದ್ ನಿಜಾಮನ ಆಳ್ವಿಕೆಯಲ್ಲಿದ್ದವು. ಆ ಭಾಗ ಫ್ಯೂಡಲಿಸಂ (ಪಾಳೆಗಾರಿಕೆ) ಆಡಳಿತದಿಂದ ಹಿಂದೇಟು ಕಂಡಿದೆ. ಅನ್ನಭಾಗ್ಯದಂತಹ ಯೋಜನೆಗಳಿಂದ ಬಡವರಿಗೆ ಅನುಕೂಲವಾಗಿಲ್ಲವೆ?
ಆಹಾರ ಭದ್ರತಾ ಹಕ್ಕು ಜಾರಿಗೊಳ್ಳದೆ ಪ್ರಯೋಜನವಿಲ್ಲ. ಶಾಲೆ, ಆರೋಗ್ಯ ಹೀಗೆ ಅಗತ್ಯವಾದ ಸೌಲಭ್ಯಗಳು ಗ್ರಾಮೀಣ ಭಾಗದ ಜನರಿಗೆ ತಲುಪುವಂತಾಗಬೇಕು. ಸಂಪನ್ಮೂಲ ಎಲ್ಲರಿಗೂ ಸಿಗುವಂತಾಗಬೇಕು. ಜಾತಿ ಪದ್ಧತಿ ನಿರ್ಮೂಲನವಾಗಬೇಕು. ಇಲ್ಲವಾದರೆ ನೂರು ಯೋಜನೆಗಳನ್ನು ಘೋಷಿಸಿದರೂ ಪ್ರಯೋಜನವಿಲ್ಲ. ಘೋಷಣೆ ಮಾತ್ರದಿಂದ ಏನಾಗುತ್ತದೆ? ನಗರವಾಸಿಗಳ ಸಂಖ್ಯೆ ಹೆಚ್ಚಳ
2011ರ ಜನಸಂಖ್ಯಾ ಗಣತಿ ಪ್ರಕಾರ ಶೇ.69 ಗ್ರಾಮೀಣ ಜನರಿದ್ದಾರೆ. 2001ರಿಂದ 2011ರ ಅವಧಿಯಲ್ಲಿ ಗ್ರಾಮೀಣ ಭಾಗದ ಜನಸಂಖ್ಯೆ 90 ಮಿ. ಹೆಚ್ಚಿದರೆ ನಗರ ಭಾಗದ ಜನಸಂಖ್ಯೆ 91 ಮಿ. ಹೆಚ್ಚಿದೆ. ಸ್ವತಂತ್ರ ಭಾರತದಲ್ಲಿ ಮೊತ್ತ ಮೊದಲ ಬಾರಿ ನಗರಗಳ ಜನಸಂಖ್ಯೆ ಏರಿಕೆ ಗ್ರಾಮೀಣ ಭಾಗಕ್ಕಿಂತ ಹೆಚ್ಚಾಗಿದೆ. ಆದಾಗ್ಯೂ ಶೇ.69 ಜನಸಂಖ್ಯೆ ಗ್ರಾಮೀಣ ಭಾಗದಲ್ಲಿದೆ. ಸಂದರ್ಶನ: ಮಟಪಾಡಿ ಕುಮಾರಸ್ವಾಮಿ