Advertisement

Agriculture: ಭತ್ತದ ಕೃಷಿಗೆ ಯಂತ್ರವೂ ಸಿಗುತ್ತಿಲ್ಲ, ಕಾರ್ಮಿಕರೂ ಬರುತ್ತಿಲ್ಲ

12:44 AM Jul 03, 2024 | Team Udayavani |

ಉಡುಪಿ: ಕರಾವಳಿಯ ಉಭಯ ಜಿಲ್ಲೆಗಳಲ್ಲಿ ಮುಂಗಾರು ಸಮಾಧಾನ ತಂದಿದ್ದು, ಕೃಷಿ ಚಟುವಟಿ ಕೆಗಳಿಗೂ ವೇಗ ಸಿಕ್ಕಿದೆ. ಆದರೂ ಭತ್ತ ಬೆಳೆಯುವ ಕೃಷಿಕರ ಮೊಗದಲ್ಲಿ ಖುಷಿ ಯಿಲ್ಲ. ಕಾರಣ, ನೇಜಿ ಯಂತ್ರವೂ ಸಿಗುತ್ತಿಲ್ಲ, ಕಾರ್ಮಿಕರೂ ಬರುತ್ತಿಲ್ಲ.
ರೈತರು ಕೂಡಲೇ ಭತ್ತದ ಕೃಷಿ ಮಾಡಬೇಕಿರುವ ಕಾರಣ ದುಬಾರಿ ಹಣ ತೆತ್ತು ಖಾಸಗಿ ಮಾಲಕತ್ವದ ಯಂತ್ರಗಳನ್ನೇ ಆಶ್ರಯಿಸಬೇಕಿದೆ.
ಉಡುಪಿ ಜಿಲ್ಲೆಯಲ್ಲಿ 36, 509 ಹಾಗೂ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 9,390 ಹೆಕ್ಟೇರ್‌ಗಳ ಬಿತ್ತನೆಯ ಗುರಿ ಹೊಂದಲಾಗಿದೆ. ಇದರಲ್ಲಿ ಸಾಂಪ್ರದಾ ಯಿಕ ಪದ್ಧತಿಯಲ್ಲಿ ಕೃಷಿ ಮಾಡುವ ರೈತರ ಸಂಖ್ಯೆ ಕಡಿಮೆ. ಉಳುಮೆಗೆ ಎತ್ತುಗಳನ್ನು ಬಳಸುವವರಿಲ್ಲ. ಗದ್ದೆ ಹದಗೊಳಿಸಲು, ನೇಜಿಗೆ ಯಂತ್ರ ಗಳೇ ಗತಿ. ಆದರೆ ಜಿಲ್ಲಾದ್ಯಂತ ಯಂತ್ರಗಳ ಕೊರತೆ ತೀವ್ರವಾಗಿದೆ.
ಹೋಬಳಿಗೆ ಒಂದರಂತೆ ಉಡುಪಿ ಜಿಲ್ಲೆಯ 9 ಹೋಬಳಿಗಳಲ್ಲಿ ಕೃಷಿ ಇಲಾಖೆಯ ಮೂಲಕ ರೈತರಿಗೆ ಕೈಗೆಟುಕುವ ದರದಲ್ಲಿ ಟ್ರ್ಯಾಕ್ಟರ್‌ ಹಾಗೂ ನೇಜಿ ಯಂತ್ರವನ್ನು ಬಾಡಿ ಗೆಗೆ ನೀಡುವ ವ್ಯವಸ್ಥೆ ಇತ್ತೀಚಿನ ವರ್ಷಗಳಲ್ಲಿ ಜಾರಿ ಮಾಡಲಾಗಿತ್ತು. 9 ರಲ್ಲಿ ಉಡುಪಿ ಹಾಗೂ ವಂಡ್ಸೆ ಹೋಬಳಿಯಲ್ಲಿ ತಲಾ ಒಂದು ಯಂತ್ರ ಕಾರ್ಯ ನಿರ್ವಹಿಸುತ್ತಿದೆ. ಉಳಿದ 7 ಹೋಬಳಿಗಳಲ್ಲಿ ಕೃಷಿ ಇಲಾಖೆಯ ಯಂತ್ರವಿಲ್ಲ. ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆಯ ಮೂಲಕ ಬೈಂದೂರು, ಬ್ರಹ್ಮಾವರ, ಅಜೆಕಾರಿನಲ್ಲಿ ಬಾಡಿಗೆಗೆ ನೀಡಲಾ ಗುತ್ತದೆ. ಉಳಿದೆಲ್ಲೆಡೆ ರೈತರು ಖಾಸಗಿ ಯಂತ್ರಗಳ ಮೂಲಕವೇ ಭತ್ತದ ಕೃಷಿ ಮಾಡಬೇಕಾಗಿದೆ.
ಖಾಸಗಿ ದುಬಾರಿ
ಕೃಷಿ ಇಲಾಖೆಯ ಯಂತ್ರಕ್ಕೆ ಗಂಟೆಗೆ 800ರಿಂದ 850 ರೂ. ಬಾಡಿಗೆ ಇದ್ದರೆ, ಖಾಸಗಿ ಮಾಲಕತ್ವದ ಯಂತ್ರಗಳಿಗೆ 1,500 ರಿಂದ 1,600 ರೂ. ಇರುತ್ತದೆ. ಕೆಲವೆಡೆ ಇನ್ನೂ ದುಬಾರಿ. ಸ್ಥಳೀಯ ಬೇಡಿಕೆಯ ಆಧಾರದಲ್ಲಿ ದರ ಹೆಚ್ಚಳ ಮಾಡಲಾಗುತ್ತದೆ. ಕೆಲವು ಕಡೆಗಳಲ್ಲಿ ದುಬಾರಿ ಹಣ ನೀಡಿದರೂ ಯಂತ್ರಗಳಿಲ್ಲ ಎನ್ನುತ್ತಾರೆ ರೈತರು.
ಭತ್ತದ ಕೃಷಿಗೆ ಕಾರ್ಮಿಕರು ಸಿಗದಿರುವುದು ಹೊಸತಲ್ಲ. ಹೀಗಾ ಗಿ ಬಹುತೇಕ ರೈತರು ಯಂತ್ರದ ಮೊರೆ ಹೋಗಿದ್ದರು. ಈಗ ರೈತರಿಗೆ ಕೈಗೆಟುಕುವ ದರದಲ್ಲಿ ಯಂತ್ರವೂ ಸಿಗದ ಕಾರಣ ಪುನಃ ಕೃಷಿಗೆ ಕಾರ್ಮಿಕರ ಅಗತ್ಯವಿದೆ. ಈ ಹಿಂದೆ ಇತರೆ ಜಿಲ್ಲೆಯ ಕಾರ್ಮಿಕರು ಭತ್ತದ ಕೃಷಿ ಚಟುವಟಿಕೆಗೆ ಲಭ್ಯವಾಗು ತ್ತಿದ್ದರು. ಇದೀಗ ಝಾರ್ಖಂಡ್‌ ಹಾಗೂ ಒಡಿಶಾದ ಕಾರ್ಮಿಕರು ಹೆಚ್ಚಾಗಿ ಭತ್ತದ ಕೃಷಿಗೆ ಬರುತ್ತಿದ್ದಾರೆ. ಈ ರಾಜ್ಯಗಳಲ್ಲೂ ಭತ್ತದ ಕೃಷಿ ಇರುವ ಕಾರಣ ಸುಲಭವಾಗಿ ಒಗ್ಗಿ ಕೊಳ್ಳುತ್ತಾರೆ. ವಿಶೇಷ ತರಬೇತಿ ಅಗತ್ಯವಿಲ್ಲ. ಆದರೆ, ಜುಲೈ ಬಳಿಕ ಇವರು ಸಿಗುವುದಿಲ್ಲ. ಅವರ ರಾಜ್ಯಗಳಲ್ಲಿ ಕೃಷಿ ಚಟುವಟಿಕೆ ಆರಂಭವಾಗುವುದರಿಂದ ಅವರೆಲ್ಲ ಅಲ್ಲಿಗೆ ಮರಳುತ್ತಾರೆ. ಒಟ್ಟಿನಲ್ಲಿ ಕೃಷಿಗೆ ಯಂತ್ರವೂ ಸಿಗುತ್ತಿಲ್ಲ. ಕಾರ್ಮಿಕರೂ ಸಿಗದಂತಾಗಿದೆ ಎನ್ನುತ್ತಾರೆ ರೈತರು.

Advertisement

“ಜಿಲ್ಲೆಯಲ್ಲಿ 2 ಯಂತ್ರ ಕಾರ್ಯ ನಿರ್ವ ಹಿಸುತ್ತಿವೆ. ಉಳಿದೆಡೆ ಆದಷ್ಟು ಬೇಗ ಯಂತ್ರಗಳ ಲಭ್ಯತೆಗೆ ಕ್ರಮ ಕೈಗೊಳ್ಳುತ್ತೇವೆ.”
-ಡಾ. ಸೀತಾ ಎಂ.ಸಿ., ಜಂಟಿ ನಿರ್ದೇಶಕರು, ಕೃಷಿ ಇಲಾಖೆ ಉಡುಪಿ

ನಿರ್ವಹಣೆ ಕೊರತೆ

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಭತ್ತದ ಕೃಷಿ ಪ್ರಮಾಣ ಕಡಿಮೆಯಿದೆ. ಸುಮಾರು 9,390 ಹೆಕ್ಟೇರ್‌ಗೆ ಎಲ್ಲ ಹೋಬಳಿಗಳಲ್ಲೂ ಒಂದೊಂದು ಯಂತ್ರವಿದ್ದು, ಪರಿ ಣಾಮಕಾರಿಯಾಗಿ ಬಳಸಲಾಗುತ್ತಿದೆ. ಆದರೆ ಉಡುಪಿ ಜಿಲ್ಲೆಯಲ್ಲಿ 2 ಯಂತ್ರ ಮಾತ್ರ ಇದೆ. ಉಳಿದೆಡೆ ಕೃಷಿ ಇಲಾಖೆಯ ಯಂತ್ರ ಇದ್ದರೂ ನಿರ್ವಹಣೆ ಇಲ್ಲ.ಕೃಷಿ ಇಲಾಖೆಯ ಉನ್ನತಾಧಿಕಾರಿಗಳು ಈ ಬಗ್ಗೆ ತತ್‌ಕ್ಷಣ ಎಚ್ಚೆತ್ತು ಅಗತ್ಯವಿರುವ ಕಡೆ ಯಂತ್ರ ಲಭ್ಯತೆ ಮಾಡಬೇಕು ಎಂಬ ಆಗ್ರಹ ಕೇಳಿ ಬರುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next