ಕುಷ್ಟಗಿ: ತಾಲ್ಲೂಕಿನ ಕಂದಕೂರು ಸೀಮಾದ ರೈತರೊಬ್ಬರ ಸಮ್ಮಿಶ್ರ ಬೆಳೆ ಪದ್ಧತಿಯ ಕನಸು ನನಸಾಗುವ ನಿರೀಕ್ಷೆ ಮೂಡಿಸಿದೆ. ಮೂರುವರೆ ಎಕರೆ ಜಮೀನಿನಲ್ಲಿ ಅಡಿಕೆ ಹಾಗೂ ಲಿಂಬೆ ಗಿಡಗಳು ಅಡಿಯುದ್ದಕ್ಕೂ ಬೆಳೆದು ನಳನಳಿಸುತ್ತಿವೆ.
Advertisement
ಇದನ್ನು ಬೆಳೆಯಲು ಮಾನಸಿಕವಾಗಿ ಸಿದ್ಧರಾಗಿ ನಾಟಿ ಸಿದ್ಧತೆಯಲ್ಲಿದ್ದಾಗ ಕೆಲವರು ಉತ್ಸಾಹ ಕುಂದಿಸಲು ಯತ್ನಿಸಿದರೂ ದೊಡ್ಡಪ್ಪ ಲಿಂಗಸುಗೂರು ಅವರು, ಮಾಯಗೊಂಡನ ಹಳ್ಳಿಯಲ್ಲಿ 25 ರೂ. ಸಸಿ ಖರೀದಿ ಸಿ, ತುಂತುರು ನೀರಾವರಿ ವ್ಯವಸ್ಥೆಯಲ್ಲಿ ಅಡಿಕೆ ಸಸಿಗಳೊಂದಿಗೆ ಮಿಶ್ರ ಬೆಳೆಯಾಗಿ ಕಾಗ್ಜಿ ತಳಿ ಲಿಂಬೆ ಬೆಳೆದಿದ್ದಾರೆ.
ಲಿಂಗಸುಗೂರು. ಮಲೆನಾಡು, ಅರೆ ಮಲೆನಾಡು, ಬಯಲು ಸೀಮೆ ಸೆರಗಿನಲ್ಲಿ ಅಡಿಕೆ ಬೆಳೆಯಬಹುದಾದರೆ ಈ ತಾಲೂಕಿನಲ್ಲೇಕೆ ಅಸಾಧ್ಯ ಎಂಬ ಪ್ರಶ್ನೆಯೇ ತಾಲೂಕಿನ ಗ್ರಾಮದ ನಿವೃತ್ತ ನೌಕರ ದೊಡ್ಡಪ್ಪ ಲಿಂಗಸುಗೂರು ಅವರು ಸವಾಲಾಗಿ ಸ್ವೀಕರಿಸಿ ಅಡಿಕೆ 1,200 ಗಿಡ, ಲಿಂಬೆ 280 ಗಿಡಗಳನ್ನು ಬೆಳೆಸಿದ್ದಾರೆ. ಸದ್ಯ 13 ತಿಂಗಳ ಬೆಳೆಯಿದೆ. ಇನ್ನೂ 4 ವರ್ಷವರೆಗೂ ಆರೈಕೆ ಸಕಾಲಿಕವಾಗಿ ನಿರ್ವಹಿಸಿದರೆ ಹೊಂಬಾಳಿ ಬಿಡಲು ಆರಂಭಿಸಲಿದೆ ಎನ್ನುವುದು ಅವರ ಲೆಕ್ಕಾಚಾರ.
Related Articles
Advertisement
ನ್ಯಾಯಾಂಗ ಇಲಾಖೆಯಲ್ಲಿ ದ್ವಿತೀಯ ದರ್ಜೆ ಗುಮಾಸ್ತನಾಗಿ ಚಿತ್ರದುರ್ಗ ತಾಲೂಕಿನ ಹೊಳಲ್ಕೆರೆಯಲ್ಲಿ 16 ವರ್ಷ ಸೇವೆ ಸಲ್ಲಿಸಿ ನಂತರ ಕುಷ್ಟಗಿ ನ್ಯಾಯಾಲಯದಲ್ಲಿ 2019ರಲ್ಲಿ ಸೇವಾ ನಿವೃತ್ತಿಯಾಗಿದ್ದಾರೆ. ಸಾಂಪ್ರದಾಯಿಕವಾಗಿ ಸಜ್ಜೆ, ಮೆಕ್ಕೆಜೋಳ, ಸೂರ್ಯಕಾಂತಿ, ಹುರಳಿ ಬೆಳೆಯುವ ಭೂಮಿಯಲ್ಲೇ ಅವರು, ಸಂಪೂರ್ಣ ಮಲೆನಾಡು, ಅರೆ ಮಲೆನಾಡಿನ ಪ್ರಮುಖಬೆಳೆಯನ್ನೇ ಬೆಳೆದಿರುವುದು ಇಲ್ಲಿ ಗಮನಾರ್ಹ. ಅಡಿಕೆ ಬೆಳೆಗೆ ಸಾಲ ಹುಟ್ಟಲಿಲ್ಲ: ಸ್ಥಳೀಯ ಆರ್ ಕೆಡಿಸಿಸಿ ಬ್ಯಾಂಕಿನಲ್ಲಿ ಬೆಳೆ ಸಾಲ ಪಡೆಯಲು ಮುಂದಾಗಿದ್ದ ರೈತ ದೊಡ್ಡಪ್ಪ ಲಿಂಗಸುಗೂರು ಅವರಿಗೆ ಜಮೀನಿಲ್ಲಿ ಅಡಿಕೆ ಬೆಳೆ ಇದೆ ಎಂದಾಗ ಬ್ಯಾಂಕ್ ಸಿಬ್ಬಂದಿ ಅಚ್ಚರಿಯಿಂದ ಸಾಲ ನೀಡಲು ನಿರಾಕರಿಸಿದರು. ಇನ್ನು ತೋಟಗಾರಿಕೆ ಇಲಾಖೆ ಆಧಿಕಾರಿಗಳು ಏಕೆ ಬೆಳೆದು ಹಾಳು ಮಾಡುತ್ತೀರಿ. ಇದರ ಬದಲಾಗಿ ದಾಳಿಂಬೆ. ಪಪ್ಪಾಯ, ಪೇರಲ ಬೆಳೆಯಲು ಸಲಹೆ ನೀಡಿದರು. ದಿನ ಕಳೆದಂತೆ ಗರಿಗಳ ಬೆಳವಣಿಗೆ ಸಮೃದ್ಧ ಪೈರಿನ ಅಡಿಕೆ ಬೆಳೆ ಕಂಡು ಖುಷಿಯಾಗಿದೆ ಎನ್ನುತ್ತಾರೆ ದೊಡ್ಡಪ್ಪ. ಜಿಲ್ಲೆಯಲ್ಲಿ ಸರ್ಕಾರಿ ಸೇವೆ ಸಲ್ಲಿಸಿದ ದಿನಗಳಲ್ಲಿ ಆ ಭಾಗದ ರೈತರೊಂದಿಗೆ ಒಡನಾಟವಿದೆ. ಅಡಿಕೆ ಬೆಳೆ ಬಗ್ಗೆ ಸಾಕ್ಷಾತ್ ಅನುಭವವಿದೆ. ಪ್ರಾಯೋಗಿಕವಾಗಿ ನಮ್ಮೂರ ಸೀಮೆಯಲ್ಲಿ ಬೆಳೆದಿದ್ದಾರೆ. ಕುಷ್ಟಗಿ ತಾಲೂಕಿನ ಈ ಭಾಗದಲ್ಲಿ ನಮ್ಮೂರಿನ ರೈತ ದೊಡ್ಡಪ್ಪ ಲಿಂಗಸುಗೂರು ಅಡಿಕೆ ಬೆಳೆದಿರುವುದು ನಿಜಕ್ಕೂ ಅಪರೂಪವಾಗಿದೆ.
●ರವೀಂದ್ರನಾಥ ಎಂ.ಪತ್ತಾರ,
ಕಂದಕೂರು ■ ಮಂಜುನಾಥ ಮಹಾಲಿಂಗಪುರ