Advertisement

ನಮ್ಮನೆ ಹೊಸ್ತಿಗೆ ನಮ್ದೇ ಕದಿರು!

09:32 AM Sep 27, 2022 | Team Udayavani |

ಕುಂದಾಪುರ: ನಮ್ಮನೆ ಹೊಸ್ತಿಗೆ ನಮ್ದೇ ಕದಿರು ಎಂಬ ಅಭಿಯಾನ ಇಲ್ಲಿನ ಕೋಡಿ ಭಾಗದಲ್ಲಿ ಆರಂಭವಾಗಿದೆ.

Advertisement

ಹೊಸ ಅಕ್ಕಿ ಊಟ ಗಣೇಶ ಚತುರ್ಥಿಯಿಂದ ಆರಂಭಿಸಿ ನವರಾತ್ರಿ ವಿಜಯದಶಮಿವರೆಗೆ ಕರಾವಳಿಯಲ್ಲಿ ಸಾಮಾನ್ಯವಾಗಿ ಹೊಸ ಅಕ್ಕಿ ಊಟ ಮಾಡುತ್ತಾರೆ. ರೈತಾಪಿ ಕುಟುಂಬಗಳು ತಮ್ಮ ಗದ್ದೆಯಲ್ಲಿ ಬೆಳೆದ ಪೈರನ್ನು ದೇವರಿಗೆ ಅರ್ಪಿಸಿ ಮನೆಯಲ್ಲಿ ದೇವರ ಎದುರು ಇಟ್ಟು ಬಾಗಿಲ ದಾರಂದಕ್ಕೆ ಕಟ್ಟಿ ಹೊಸ ಅಕ್ಕಿಯಿಂದ ಮಾಡಿದ ಪಾಯಸದ ಅಡುಗೆಯನ್ನು ಊಟ ಮಾಡುತ್ತಾರೆ. ಆದರೆ ಈಗ ಭತ್ತದ ಗದ್ದೆಗಳೇ ಕಡಿಮೆಯಾಗಿವೆ. ಇದ್ದ ಗದ್ದೆಗಳು ಹಡಿಲು ಬಿದ್ದಿವೆ. ಬೇಸಾಯ ಮಾಡುವವರೇ ಇಲ್ಲ ಎಂದಾಗಿದೆ.

ಬೆಳೆದಲ್ಲಿಂದ ಯಾರು ಭತ್ತ ಬೆಳೆಯುತ್ತಾರೋ ಅವರ ಗದ್ದೆಗೆ ಹೋಗಿ ಕದಿರು ತರುವ ಸಂಪ್ರದಾಯ ಚಾಲ್ತಿಯಲ್ಲಿದೆ. ಕೆಲವು ಗದ್ದೆಗಳಲ್ಲಿ ಅರ್ಧಕ್ಕರ್ಧ ಹೀಗೆ ಹೊಸ ಅಕ್ಕಿ ಊಟಕ್ಕೆ ನೀಡಲೆಂದೇ ಖಾಲಿಯಾಗುವುದೂ ಇದೆ. ಮೊದಲೇ ಮಳೆ ಅಕಾಲದಲ್ಲಿ ಬಂದು ಗದ್ದೆಯಲ್ಲಿದ್ದ ಪೈರೆಲ್ಲ ನಾಶವಾದ ಚಿಂತೆ. ಅದರ ಮಧ್ಯೆ ಇದ್ದಬದ್ದವರೆಲ್ಲ ಕದಿರಿಗೆ ದುಂಬಾಲು ಬೀಳುವ ಚಿಂತೆ. ಕೊಡಲೂ ಅಕ್ಕಪಕ್ಕದ ಸುಮಾರು 30 ಮನೆಯವರಿಗೆ ಇದರಿಂದಲೇ ಕದಿರು ಕೊಡುವುದಾಗಿ ಹೇಳಿದ್ದೇನೆ. ಯಾರ್ಯಾರ ಗದ್ದೆಗೆ ಹೋಗಬೇಡಿ, ನಮ್ಮಲ್ಲೇ ಪಡೆದುಕೊಳ್ಳಿ ಎಂದು ಸೂಚಿಸಿದ್ದೇನೆ. ಪ್ರತಿ ಮನೆಯವರೂ ತಮ್ಮ ಸಣ್ಣ ಜಾಗದಲ್ಲೇ ಒಂದಡಿಯಷ್ಟಾದರೂ ಭತ್ತ ಬೆಳೆದರೂ ಅವರ ಮನೆಯ ಆಚಾರ, ವಿಚಾರ ಸಂಸ್ಕೃತಿ ಪಾಲನೆಗೆ ಇದು ಅನುಕೂಲವಾಗಲಿದೆ ಎನ್ನುವ ಅಭಿಪ್ರಾಯ ಅವರದ್ದು.

ದೇವಾಲಯದಲ್ಲಿ ನೀಡಬೇಕು: ಹಡಿಲು ಬಿದ್ದ ಗದ್ದೆಗಳನ್ನು ತೆಗೆದುಕೊಂಡು ಊರ ಪ್ರಮುಖ ದೇವಸ್ಥಾನದವರು ಭತ್ತ ಬೆಳೆದು ಊರಿನ ಭಕ್ತರಿಗೆ ನೀಡುವ ಕ್ರಮ ಆರಂಭವಾಗಬೇಕು. ಇದರಿಂದ ಕೃಷಿಯೂ ಪುನರುತ್ಥಾನವಾಗುತ್ತದೆ, ರೈತರಿಗೂ ಅನಗತ್ಯ ಕಿರಿಯಾಗುವುದು ತಪ್ಪುತ್ತದೆ. -ಕೋಡಿ ಅಶೋಕ್‌ ಪೂಜಾರಿ

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next