Advertisement

ಕೃಷಿ ರಫ್ತು ನೀತಿ: ಕರಡು ಸಿದ್ಧ; ಶೀಘ್ರ ಜಾರಿ: ಸಚಿವ ಸುರೇಶ್‌ ಪ್ರಭು

11:38 AM Jan 22, 2018 | |

ಪುತ್ತೂರು: ದೇಶದಲ್ಲಿ ಮೊದಲ ಬಾರಿಗೆ ಕೃಷಿ ರಫ್ತು ನೀತಿ ರೂಪಿಸಲಾಗಿದ್ದು, ಅದು ಶೀಘ್ರ ದಲ್ಲೇ ಆನ್‌ಲೈನ್‌ನಲ್ಲಿ ಪ್ರಕಟವಾಗಲಿದೆ. ಸೂಕ್ತ ಪರಾಮರ್ಶೆ, ಪರಿಷ್ಕರಣೆಗಳ ಬಳಿಕ ಶೀಘ್ರದಲ್ಲಿ ಜಾರಿಗೆ ಬರಲಿದೆ ಎಂದು ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಸುರೇಶ್‌ ಪ್ರಭು ಹೇಳಿದರು.

Advertisement

ಅವರು ಪುತ್ತೂರಿನ ಮರೀಲ್‌ ಕ್ಯಾಂಪ್ಕೋ ಚಾಕಲೇಟ್‌ ಫ್ಯಾಕ್ಟರಿಯಲ್ಲಿ ನೂತನವಾಗಿ ನಿರ್ಮಿಸಲಾದ “ಸೌಲಭ್ಯ ಸೌಧ’ ಉದ್ಘಾಟಿಸಿ, ಕ್ಯಾಂಪ್ಕೋ ಸಂಸ್ಥಾಪಕ ವಾರಣಾಶಿ ಸುಬ್ರಾಯ ಭಟ್‌ ಪ್ರತಿಮೆ ಅನಾವರಣಗೊಳಿಸಿ ಮಾತನಾಡಿದರು. ಇದುವರೆಗೆ ಜಾಗತಿಕ ಮಾರುಕಟ್ಟೆ ದೇಶಕ್ಕೆ ದೊಡ್ಡ ಸವಾಲಾಗಿತ್ತು. ಈಗ ಕೇಂದ್ರ ಸರಕಾರವೇ ವಿದೇಶಿ ಮಾರುಕಟ್ಟೆಯನ್ನು ರೈತರ ಮುಂದೆ ತೆರೆದಿಡಲಿದೆ. ಕೃಷಿ ರಫ್ತು ನೀತಿ ರೂಪಿಸಲು ಆದೇಶ ಹೊರಡಿಸಲಾಗಿದ್ದು, ಕರಡು ನೀತಿ ಸಿದ್ಧಗೊಂಡಿದೆ. ಇದು ಸದ್ಯದಲ್ಲೇ ಜಾರಿಗೆ ಬರಲಿದೆ ಎಂದರು.

45 ದೇಶಗಳ ಜತೆ ಮಾತುಕತೆ
ಭಾರತೀಯ ಅರ್ಥ ವ್ಯವಸ್ಥೆಯ ಬೆನ್ನೆಲುಬು ರೈತ. ಆದರೆ ಇದುವರೆಗೆ ರೈತ ಹಾಗೂ ಅವನ ಮನೆಯ ಪರಿಸ್ಥಿತಿ ಚಿಂತಾಜನಕವಾಗಿತ್ತು. ಈ ಪರಿಸ್ಥಿತಿಯನ್ನು ಸುಧಾರಿಸಲು ಕ್ಯಾಂಪ್ಕೋದಂಥ ಸಂಸ್ಥೆಯ ಉಗಮವಾಯಿತು. ಕೇಂದ್ರ ಸರಕಾರ ರೈತರ ಉತ್ಪನ್ನಗಳಿಗೆ ಮಾರುಕಟ್ಟೆ ಒದಗಿಸಲು ಸಿದ್ಧವಾಗಿ ನಿಂತಿದೆ. ಜಾಗತಿಕ ಮಾರುಕಟ್ಟೆಯನ್ನು ದೇಶದ ರೈತರಿಗೆ ತೆರೆದಿಡುವ ಬಗ್ಗೆ ಈಗಾಗಲೇ ದಿಲ್ಲಿಯಲ್ಲಿ 45 ದೇಶಗಳ ಜತೆ ಮಾತುಕತೆ ನಡೆದಿದೆ ಎಂದು ಅವರು ಭರವಸೆ ತುಂಬಿದರು.

ಸಂಸ್ಕರಣ ಕ್ಷೇತ್ರ ಬೆಳೆಯಬೇಕಿದೆ
ದೇಶದಲ್ಲಿ ಕೃಷಿ, ಕೃಷ್ಯುತ್ಪನ್ನ ಮಾರುಕಟ್ಟೆ ಹಿಂದುಳಿದಿರುವುದಕ್ಕೆ ಕೃಷ್ಯುತ್ಪನ್ನ ಸಂಸ್ಕರಣ ಕ್ಷೇತ್ರ ಪ್ರಗತಿ ಹೊಂದದಿರುವುದು ಕಾರಣ. ಕೃಷ್ಯುತ್ಪನ್ನಗಳ ಸಂಸ್ಕರಣೆ ಗ್ರಾಮೀಣ ಪ್ರದೇಶದ ಬೆಳವಣಿಗೆಗೆ ಅಗತ್ಯ. ಆದ್ದರಿಂದ ಕೃಷಿ ಉತ್ಪನ್ನ ಸಂಸ್ಕರಣ, ಮೌಲ್ಯ
ವರ್ಧನ ಕ್ಷೇತ್ರ ಬೆಳೆಯಬೇಕಾಗಿದೆ. ಸಹಕಾರ ಇಲ್ಲದೆ ಈ ಬೆಳವಣಿಗೆ ಆಗದು. ಜಾಗತಿಕ ವ್ಯಾಪಾರ ಸಹಕಾರವೂ ಅಗತ್ಯ. ಇದಕ್ಕೆ ಪೂರಕವಾಗಿ ಸಹಕಾರಿ ಬ್ಯಾಂಕ್‌ಗಳು, ಸಂಸ್ಥೆಗಳು ಕೆಲಸ ನಿರ್ವಹಿಸಬೇಕಾಗಿದೆ ಎಂದ ಸಚಿವರು, ಕೃಷ್ಯುತ್ಪನ್ನ ಸಂಸ್ಕರಣೆ
ಯಲ್ಲಿ ಕ್ಯಾಂಪ್ಕೊ ಕಾರ್ಯ ದೇಶಕ್ಕೆ ಮಾದರಿ ಎಂದು ಶ್ಲಾ ಸಿದರು.

ಬಹುರಾಷ್ಟ್ರೀಯ ಕಂಪೆನಿಗಳಿಗೆ ಸ್ಪರ್ಧೆ ನೀಡುವ ಮಟ್ಟಕ್ಕೆ ಕ್ಯಾಂಪ್ಕೋ ಬೆಳೆದು ನಿಂತಿದೆ. ನೆಸ್ಲೆಯಂಥ ಎನ್‌ಎಂಸಿ ಜತೆ ಒಡಂಬಡಿಕೆ ಮಾಡಿಕೊಂಡಿ ರುವುದೇ ಇದಕ್ಕೆ ಸಾಕ್ಷಿ. ದೊಡ್ಡ ಕಂಪೆನಿಗಳ ಜತೆ ಸ್ಪರ್ಧೆ ಕಷ್ಟ. ಹಾಗಿದ್ದೂ ಕ್ಯಾಂಪ್ಕೋ ಇದನ್ನು ಸಾಧಿಸಿದೆ ಎಂದರು.
ರಾಷ್ಟ್ರೀಯ ರಬ್ಬರ್‌ ನೀತಿ ಕೇಂದ್ರ ಸರಕಾರ ರಾಷ್ಟ್ರೀಯ ರಬ್ಬರ್‌ ನೀತಿ ರೂಪಿಸಲು ನಿರ್ಧರಿಸಿದೆ. ಇದರ ಜತೆಗೆ ಸಂಬಾರ ಪದಾರ್ಥಗಳ ಪ್ಯಾಕೇಜನ್ನು ಕೂಡ ಘೋಷಿಸಲಿದೆ ಎಂದು ಅವರು ಭರವಸೆ ನೀಡಿದರು.

Advertisement

ರಕ್ಷಣಾತ್ಮಕ ಕಾನೂನಿಗೆ ಮನವಿ
ಸಹಕಾರ ಭಾರತಿಯ ರಾಷ್ಟ್ರೀಯ ಅಧ್ಯಕ್ಷ ಜ್ಯೋತೀಂದ್ರ ಭಾç ಮೆಹ್ತಾ ಮಾತನಾಡಿ, ರೈತ ಸಹಕಾರ ರಂಗದ ಆಸ್ತಿಯಾಗಿದ್ದು, ಆತ ಅದರ ಮಾಲಕನೂ ಹೌದು. ಇಂತಹ ಸಹಕಾರಿ ರಂಗಕ್ಕೆ ಬಲ ನೀಡುವ ಕೆಲಸ ಕ್ಯಾಂಪ್ಕೋದಿಂದ ಆಗಿದೆ ಎಂದರು. ನಮ್ಮ ರೈತರನ್ನು ರಕ್ಷಿಸುವಂತಹ ಕಾನೂನು-ನೀತಿಗಳನ್ನು ಜಾರಿ ಮಾಡುವ ಅಗತ್ಯವಿದೆ. ಈ ನಿಟ್ಟಿನಲ್ಲಿ ವಾಣಿಜ್ಯ ಕೃಷಿ ಮಂಡಳಿ ಸೂಕ್ತ ಕ್ರಮ ಕೈಗೊಳ್ಳಬೇಕು. ರೈತರಿಗೆ ಉತ್ತೇಜನ ಅಗತ್ಯ, ಅದು ಲಭಿಸಿದರೆ ಅವರು ಆದರ್ಶ ಕೃಷಿ ರಂಗವನ್ನು ನಿರ್ಮಿಸಿ ತೋರಿಸಬಲ್ಲರು ಎಂದರು.

ಕೇಂದ್ರದ ಕ್ರಮಕ್ಕೆ ಮನವಿ
ಅಧ್ಯಕ್ಷತೆ ವಹಿಸಿದ್ದ ಕ್ಯಾಂಪ್ಕೋ ಅಧ್ಯಕ್ಷ ಎಸ್‌.ಆರ್‌. ಸತೀಶ್ಚಂದ್ರ ಮಾತನಾಡಿ, ಕಳೆದ ಒಂದೂವರೆ ವರ್ಷದಲ್ಲಿ ಕೆಲವು ನೀತಿಗಳಿಂದ ಸಮಸ್ಯೆಯಾಗಿದೆ. ಇದರ ಬಗ್ಗೆ ಕೇಂದ್ರ ಸರಕಾರದ ಗಮನ ಸೆಳೆದು, ಸೂಕ್ತ ಕ್ರಮ ಕೈಗೊಳ್ಳುವ ನಿಟ್ಟಿನಲ್ಲಿ ಸಚಿವ ಸುರೇಶ್‌ ಪ್ರಭು ಹಾಗೂ ಜ್ಯೋತೀಂದ್ರ ಭಾç ಮೆಹ್ತಾ ಪ್ರಯತ್ನಿಸಬೇಕು ಎಂದು ಮನವಿ ಮಾಡಿದರು. ಕಾವಿನಲ್ಲಿ ನಿರ್ಮಿಸಲು ಉದ್ದೇಶಿಸಿರುವ ದಾಸ್ತಾನು ಗೋಡೌನಿಗೆ ಸಂಸದ ನಳಿನ್‌ ಶಂಕು ಸ್ಥಾಪನೆ ನೆರವೇರಿಸಿದರು. ಕ್ಯಾಂಪ್ಕೋದ ಪ್ರೀಮಿಯಂ ಚಾಕಲೇಟನ್ನು ಶಾಸಕಿ ಶಕುಂತಳಾ ಶೆಟ್ಟಿ ಅನಾವರಣಗೊಳಿಸಿದರು. ಜಿ.ಪಂ. ಅಧ್ಯಕ್ಷೆ ಮೀನಾಕ್ಷಿ ಮಂಜುನಾಥ್‌, ತಾ.ಪಂ. ಅಧ್ಯಕ್ಷೆ ಭವಾನಿ ಚಿದಾನಂದ್‌, ನಗರಸಭೆ ಅಧ್ಯಕ್ಷೆ ಜಯಂತಿ ಬಲಾ°ಡು ಉಪಸ್ಥಿತರಿದ್ದರು. ಕ್ಯಾಂಪ್ಕೋ ಉಪಾಧ್ಯಕ್ಷ ಶಂಕರನಾರಾಯಣ ಭಟ್‌ ಖಂಡಿಗೆ ಸ್ವಾಗತಿಸಿದರು. ಎಂ.ಡಿ. ಸುರೇಶ್‌ ಭಂಡಾರಿ ವಂದಿಸಿದರು. ಜೆನಿತಾ, ಹರಿಪ್ರಸಾದ್‌ ನಿರೂಪಿಸಿದರು.

ಆಧುನಿಕ ಮಂದಿರ
ಸಹಕಾರ ರಂಗವನ್ನು ದೇವಸ್ಥಾನಕ್ಕೆ ಹೋಲಿಸಿದ ಸಚಿವ ಸುರೇಶ್‌ ಪ್ರಭು, ಕೃಷಿಕರು ತಮ್ಮ ಇಷ್ಟಾರ್ಥ ನಿವೇದನೆಯನ್ನು ಇಲ್ಲೇ ಮಾಡಬೇಕು ಎಂದರು. ಪ್ರತಿದಿನ ದೇವಸ್ಥಾನ, ಚರ್ಚ್‌, ಮಸೀದಿಗೆ ಹೋಗಿ ಪ್ರಾರ್ಥಿಸುತ್ತೇವೆ. ಇನ್ನು ಮುಂದೆ ಸಹಕಾರ ರಂಗವೇ ಮಂದಿರ ಎಂದುಕೊಳ್ಳಿ, ದಿನಂಪ್ರತಿ ಸಹಕಾರ ರಂಗಕ್ಕೇ ಕೈ ಮುಗಿಯಿರಿ ಎಂದು ಅವರು ಕೃಷಿಕರಿಗೆ ಕಿವಿಮಾತು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next