Advertisement

ಡ್ರೋನ್‌ ಬಳಕೆಯಿಂದ ಕೃಷಿಯಲ್ಲಿ ಕೂಲಿ ಸಮಸ್ಯೆ ನಿವಾರಣೆ

12:04 PM May 22, 2022 | Team Udayavani |

ದೊಡ್ಡಬಳ್ಳಾಪುರ: ಕೃಷಿಯಲ್ಲಿ ಡ್ರೋನ್‌ಗಳ ಬಳಕೆಯಿಂದ ಕೂಲಿ ಆಳು ಸಮಸ್ಯೆ ನಿವಾರಣೆಯಾಗುವುದರ ಜೊತೆಗೆ ಸಂಪನ್ಮೂಲಗಳ ಸಮರ್ಪಕ ಬಳಕೆಯಿಂದ ರಸಗೊಬ್ಬರ ಮತ್ತು ನೀರಿನ ಬಳಕೆ ಕಡಿಮೆ ಮಾಡಿ ಅಧಿಕ ಉತ್ಪಾದನೆಯನ್ನು ಪಡೆಯಬಹುದು ಎಂದು ಕೃಷಿ ಇಲಾಖೆ ಅಪರ ಕೃಷಿ ನಿರ್ದೇಶಕ ವೆಂಕಟರಾಮ ರೆಡ್ಡಿ ಪಾಟೀಲ್‌ ಹೇಳಿದರು.

Advertisement

ತಾಲೂಕಿನ ಹಾಡೋನಹಳ್ಳಿ ಕೃಷಿ ವಿಜ್ಞಾನ ಕೇಂದ್ರದಲ್ಲಿ ಕೃಷಿ ವಿಜ್ಞಾನ ಕೇಂದ್ರ, ಇಫ ಸಂಸ್ಥೆ, ಕೃಷಿ ಇಲಾಖೆ ಸಹಯೋಗದಲ್ಲಿ ನಡೆದ ಡ್ರೋನ್‌ ಪೈಲಟ್‌ಗಳ ತರಬೇತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಪ್ರಧಾನ ಮಂತ್ರಿಗಳ ಆಶಯದಂತೆ ಆತ್ಮನಿರ್ಭರ ಕೃಷಿಗೆ, ಕೃಷಿಯಲ್ಲಿ ಡ್ರೋನ್‌ಗಳ ಬಳಕೆ ಬಹಳಉಪಕಾರಿಯಾಗಿದೆ. ನ್ಯಾನೋ ರಸಗೊಬ್ಬರಗಳಬಳಕೆಗೆ ಡ್ರೋನ್‌ ಬಹಳ ಪರಿಣಾಮಕಾರಿಯಾಗಿದೆ ಎಂದು ತಿಳಿಸಿದರು.

ಕೃಷಿ ಕ್ಷೇತ್ರದಲ್ಲಿ ಕ್ರಾಂತಿಕಾರಿ ಬದಲಾವಣೆ: ಕೃಷಿ ವಿಜ್ಞಾನ ಕೇಂದ್ರದ ಹಿರಿಯ ವಿಜ್ಞಾನಿ ಹಾಗೂ ಮುಖ್ಯಸ್ಥ ಡಾ. ಎ.ಪಿ. ಮಲ್ಲಿಕಾರ್ಜುನ ಗೌಡ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ವೈಜ್ಞಾನಿಕ ಆವಿಷ್ಕಾರ ಮತ್ತು ಆಧುನಿಕ ಸ್ಪರ್ಶದಿಂದ ಕೂಡಿದ ಡ್ರೋನ್‌ ಮುಂದಿನ ದಿನಗಳಲ್ಲಿ ಕೃಷಿಕ್ಷೇತ್ರದಲ್ಲಿ ಕ್ರಾಂತಿಕಾರಿ ಬದಲಾವಣೆ ಮಾಡುತ್ತದೆ. ದೇಶದ ರಸಗೊಬ್ಬರ ಸ್ವಾವಲಂಬನೆಗೆ ಅನುಕೂಲ ಆಗಲಿದೆ. 500 ಮಿ.ಲೀ. ನ್ಯಾನೋ ಯೂರಿಯಾ, 45 ಕಿ.ಗ್ರಾಂ. ಯೂರಿಯಾ ಗೊಬ್ಬರ (1 ಚೀಲ)ಕ್ಕೆ ಸಮವಾಗಿರುತ್ತದೆ ಎಂದರು.

ತರಬೇತಿ ಕಾರ್ಯಕ್ರಮ: ಸರ್ಕಾರವು ಪ್ರತಿ ಚೀಲ ಯೂರಿಯಾ ರಸಗೊಬ್ಬರದ ಮೇಲೆ 1,500 ರೂ.ನಿಂದ 3,500ವರೆಗೆ ಸಹಾಯಧನ ನೀಡಿ, ಯೂರಿಯಾ ರಸಗೊಬ್ಬರ ಗರಿಷ್ಠ ಮಾರಾಟ ದರವನ್ನು 266 ರೂ.ಗಳಿಗೆ ಪ್ರತಿ ಚೀಲಕ್ಕೆ ನಿಗದಿಪಡಿಸಿದೆ. ಈ ನಿಟ್ಟಿನಲ್ಲಿ ಕೃಷಿ ವಿಜ್ಞಾನ ಕೇಂದ್ರ, ಕೃಷಿ ವಿಶ್ವವಿದ್ಯಾನಿಲಯದ ಸಹಯೋಗದಲ್ಲಿ ಜೂನ್‌ 3ರವರೆಗೆ ಡ್ರೋನ್‌ ಪೈಲಟ್‌ಗಳ ತರಬೇತಿ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ತಿಳಿಸಿದರು.

ತರಬೇತಿ ಕಾರ್ಯಕ್ರಮದಲ್ಲಿ ಇಫ್ಕೋ ಸಂಸ್ಥೆಯ ಕರ್ನಾಟಕ ರಾಜ್ಯ ಮಾರಾಟ ವ್ಯವಸ್ಥಾಪಕ ಡಾ. ಸಿ. ನಾರಾಯಣಸ್ವಾಮಿ, ಜಿಲ್ಲಾ ಕೃಷಿ ಉಪ ನಿರ್ದೇಶಕಿ ವಿನುತಾ, ಕೃಷಿ ಇಲಾಖೆಯ ದೊಡ್ಡಬಳ್ಳಾಪುರ ತಾಲೂಕು ಸಹಾಯಕ ಕೃಷಿ ನಿರ್ದೇಶಕಿ ಸುಶೀಲಮ್ಮ, ಇಫ್ಕೋ ಸಂಸ್ಥೆ,ಯ ಚೇತನ್‌ ಮತ್ತಿತರರು ಇದ್ದರು.

Advertisement

 

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next