Advertisement

ವಿಜ್ಞಾನಿಗಳ “ಮೋಹ’ಕ ಬಲೆಗೆ ಬಿದ್ದ ಹಣ್ಣು ನೊಣ

01:37 AM Sep 15, 2020 | mahesh |

ಧಾರವಾಡ: “ಮೋಹ’ ಎಲ್ಲರನ್ನೂ ಖೆಡ್ಡಾಕ್ಕೆ ಕೆಡುವುತ್ತದೆ. ಇದನ್ನೇ ಮುಂದಿಟ್ಟುಕೊಂಡು ಧಾರವಾಡದ ಕೃಷಿ ವಿಜ್ಞಾನಿಗಳು ರೈತರಿಗೆ ತೀವ್ರ ಕಾಟ ಕೊಡುತ್ತಿದ್ದ ಹಣ್ಣು ನೊಣ (ಫ್ಲೈ ಫ್ಲೂ)ವನ್ನು ಖೆಡ್ಡಾಕ್ಕೆ ಬೀಳಿಸಿದ್ದಾರೆ. ಈ ನೊಣಗಳ ಕಾಟಕ್ಕೆ ರೋಸಿ ಹೋಗಿದ್ದ ಮಾವು, ಪೇರಳೆ ಮತ್ತು ತರಕಾರಿ ರೈತರು ಇನ್ನು ಕೇವಲ 200 ರೂ. ಖರ್ಚಿನಲ್ಲಿ ತಮ್ಮ ಬೆಳೆಗಳನ್ನು ರಕ್ಷಿಸಿಕೊಳ್ಳಬಹುದು.

Advertisement

ಸತತ 5 ವರ್ಷಗಳಿಂದ ತೀವ್ರ ಹಾವಳಿ ಎಬ್ಬಿಸಿದ್ದ ಹಣ್ಣು ನೊಣಗಳು ಈ ಕೃಷಿ ವಿಜ್ಞಾನಿಗಳು ಬೀಸಿದ ಬಲೆಗೆ ಬೀಳುತ್ತಿವೆ. ಅನೇಕ ಬಾರಿ ಈ ನೊಣಗಳನ್ನು ನಿಗ್ರಹಿಸಲು ಪ್ರಯೋ ಗಗಳು ನಡೆದಿದ್ದವು. ಅಂತಿಮವಾಗಿ ಮೋಹಕ ಬಲೆ ಪ್ರಯೋಗದಲ್ಲಿ ಯಶಸ್ಸು ಕಂಡಿದ್ದಾರೆ.

ಪೇರಳೆ, ಸೀತಾಫಲ, ದಾಳಿಂಬೆ, ಲಿಂಬೆಹಣ್ಣು ಮತ್ತು ತರಕಾರಿ ತೋಟಗಳಿಗೂ ಕಂಟಕವಾಗಿರುವ ನೊಣದ ಅಧ್ಯಯನ ಮಾಡಿದ ಡಾ| ಜ್ಞಾನೇಶ್ವರ ಬಿ. ಗೋಪಾಲಿ ನೇತೃತ್ವದಲ್ಲಿ ಡಾ| ನಾಗೇಶ ನಾಯಕ್‌, ಡಾ| ಶಾಂತಪ್ಪ ತಿರಕಣ್ಣವರ ಹಾಗೂ ಡಾ| ಸುವರ್ಣ ಪಾಟೀಲ್‌ ಅವರ ತಂಡ ಈ ಪ್ರಯೋಗವನ್ನು ಮಾಡಿದೆ.

ಏನಿದು ಮೋಹಕ ಬಲೆ?
ರೈತರು ತಮ್ಮ ತೋಟಗಳಲ್ಲಿ ಪ್ಲಾಸ್ಟಿಕ್‌ ಬಾಟಲಿಗಳ ಕುತ್ತಿಗೆ ಭಾಗದಲ್ಲಿ 10 ಮಿ. ಮೀ. ಅಳತೆಯ 4 ರಂಧ್ರ ಕೊರೆಯಬೇಕು. ಅನಂತರ ಪ್ರತಿ ಲೀಟರ್‌ ನೀರಿಗೆ 1 ಮಿ. ಲೀ. ಮಿಥೈಲ್‌ ಯುಜಿನಾಲ್‌ ಹಾಗೂ 2.0 ಮಿ. ಲೀ. ಪ್ರೊಪೆನೋಪಾಸ್‌ 50 ಇ.ಸಿ. ಹಾಕಿ ಮಿಶ್ರಣ ಮಾಡಬೇಕು. ಈ ದ್ರಾವಣವನ್ನು ಪ್ರತಿ ಬಾಟಲಿಗೆ 100 ಮಿ. ಲೀ. ಲೀಟರ್‌ ಹಾಕಿ ಅವು ಗಳನ್ನು ಗಿಡಗಳಿಗೆ ನೇತು ಹಾಕಬೇಕು. ಒಂದು ಹೆಕ್ಟೇರ್‌ಗೆ ಕೇವಲ ಇಂತಹ 10 ಬಲೆಗಳಿದ್ದರೆ ಸಾಕು. ಹಣ್ಣು ನೊಣಗಳು ಈ ದ್ರಾವಣದ ವಾಸನೆಗೆ ಆಕರ್ಷಿತಗೊಂಡು ಬಾಟಲಿಗಳ ಒಳಗಡೆ ಬಂದು ದ್ರಾವಣ ಕುಡಿದು ಸಾಯುತ್ತವೆ. ಇದನ್ನು ವಾರಕ್ಕೆ ಎರಡು ಬಾರಿ ಬದಲಿಸಬೇಕು. ಮಾಗಿದ ಬಾಳೆಹಣ್ಣಿಗೆ ಶೇ. 10 ಬೆಲ್ಲ, ಶೇ.1 ಕಾಬೋಪುರಾನ್‌ 3ಜಿ ಸ್ಪೈನೋಸ್ಯಾಡ, 45 ಎಸ್‌.ಸಿ. ಮಿಶ್ರಣದ ದ್ರಾವಣದಲ್ಲಿ ಅದ್ದಿ ಬಾಟಲಿಗೆ ಹಾಕಿ ಗಿಡಗಳಿಗೆ ಕಟ್ಟಿ ದರೆ ನೊಣದ ಹಾವಳಿ ತಡೆಯ ಬಹುದು. ಹಣ್ಣು ಲಿಂಬೆಹಣ್ಣಿನ ಗಾತ್ರಕ್ಕೆ ಬೆಳೆಯುವ ಮೊದಲೇ ಇದನ್ನು ಮಾಡಬೇಕು.

ಕೀಟಕಾಟ ಅಧಿಕ?
ಮೊಟ್ಟೆ, ಮರಿಹುಳು, ಕೋಶಾವಸ್ಥೆ, ಪ್ರೌಢಾವಸ್ಥೆಯ ನಾಲ್ಕು ಬಗೆಯ ಜೀವನ ಚಕ್ರ ಹೊಂದಿರುವ ಈ ನೊಣಗಳು ಮಾವು, ಪೇರಳೆ ಹಣ್ಣುಗಳು ಲಿಂಬೆಹಣ್ಣಿನ ಗಾತ್ರಕ್ಕೆ ಬಂದ ಕೂಡಲೇ ಅದರಲ್ಲಿ ಮೊಟ್ಟೆ ಇಟ್ಟು ಹಾರಿ ಹೋಗುವ ಹಳದಿ ಬಣ್ಣದ ನೊಣದಿಂದ ಆ ಹಣ್ಣು, ತರಕಾರಿ ಗಳು ಕೊಳೆಯಲಾರಂಭಿಸುತ್ತವೆ. ಅದರ ಲಾರ್ವಾಗಳು ವಿಷಕಾ ರಕ ವಾಗಿದ್ದು, ಹಣ್ಣುಗಳ ಜೀವಕಣ ಗಳ ಮೇಲೆ ಸವಾರಿ ಮಾಡುತ್ತವೆ.

Advertisement

ರೈತರು ಹಣ್ಣು ನೊಣದಿಂದ ಕಂಗಾ ಲಾಗಿದ್ದರು. ತೋಟಗಾರಿಕೆ ಬೆಳೆ ಗಳಾದ ಮಾವು, ಪೇರಳೆ ಮಾತ್ರ ವಲ್ಲದೆ ತರಕಾರಿಗೂ ಈ ನೊಣ ಮಾರಕವಾಗಿತ್ತು. ಈಗ ನಮ್ಮ ಪ್ರಯೋಗ ಯಶಸ್ಸು ಕಂಡಿದೆ.
– ಡಾ| ಜ್ಞಾನೇಶ್ವರ ಗೋಪಾಲಿ, ಧಾರವಾಡ ಸಂಶೋಧಕ ಕೃಷಿ ವಿಜ್ಞಾನಿ

 ಬಸವರಾಜ ಹೊಂಗಲ್‌

Advertisement

Udayavani is now on Telegram. Click here to join our channel and stay updated with the latest news.

Next