ನವ ದೆಹಲಿ : ಭಾರತದಲ್ಲಿ ರೈತರ ಪ್ರತಿಭಟನೆಯ ಹಿನ್ನೆಲೆಯಲ್ಲಿ, ಕೃಷಿ ಸುಧಾರಣೆಯು ಭಾರತ ಸರ್ಕಾರದ ದೇಶೀಯ ನೀತಿ ವಿಷಯವಾಗಿದೆ ಎಂದು ಬ್ರಿಟಿಷ್ ಸರ್ಕಾರ ಹೇಳಿದೆ.
“ಈ ಸುಧಾರಣೆಗಳು ಕೃಷಿಯ ಮೇಲೆ ಹೇಗೆ ಪರಿಣಾಮ ಬೀರಬಹುದು ಎಂಬುದರ ಬಗ್ಗೆ ಭಾರತದಲ್ಲಿ ಮತ್ತು ಯುಕೆಯಲ್ಲಿರುವ ಕಾಳಜಿಗಳ ಬಗ್ಗೆ ನಮಗೆ ತಿಳಿದಿದೆ ಎಂದು ಬ್ರಿಟಿಷ್ ಸಂಸತ್ತಿನಲ್ಲಿ ಶುಕ್ರವಾರ(ಫೆ. 5) ಲಿಖಿತ ಪ್ರಶ್ನೆಗೆ ಬ್ರಿಟಿಷ್ ವಿದೇಶಾಂಗ ಕಚೇರಿಯ ಏಷ್ಯಾ ಸಚಿವ ನಿಗೆಲ್ ಆಡಮ್ಸ್ ಹೇಳಿದ್ದಾರೆ.
ಓದಿ : ಕೃಷಿ ಕಾಯ್ದೆ ವಿರೋಧಿಸಿ ರಸ್ತೆ ತಡೆ: ಬೆಳಗಾವಿಯಲ್ಲಿ ರೈತರನ್ನು ವಶಕ್ಕೆ ಪಡೆದ ಪೊಲೀಸರು
“ಕಾನೂನು ಬದ್ಧವಾಗಿ ಒಟ್ಟುಗೂಡಿಸುವ ಮತ್ತು ಉದ್ದೇಶಗಳನ್ನು ತಿಳಿಹೇಳುವ ಹಕ್ಕು ಎಲ್ಲಾ ಪ್ರಜಾಪ್ರಭುತ್ವಗಳಿಗೆ ಸಾಮಾನ್ಯವಾಗಿದೆ. ಕಾನೂನು ಮತ್ತು ಸುವ್ಯವಸ್ಥೆಯನ್ನು ಜಾರಿಗೊಳಿಸುವ ಅಧಿಕಾರವೂ ಸರ್ಕಾರಗಳಿಗೆ ಇದೆ. ಒಂದು ಪ್ರತಿಭಟನೆಯು ಕಾನೂನುಬಾಹಿರವಾಗಿ ನಡೆದರೇ.. ಪ್ರತಿಭಟನೆಗಳನ್ನು ನಿಯಂತ್ರಿಸುವುದು ಹಾಗೂ ನಿಭಾಯಿಸುವುದು ಭಾರತೀಯ ಅಧಿಕಾರಿಗಳ ಆಂತರಿಕ ವಿಷಯವಾಗಿದೆ ಎಂದು ಬ್ರಿಟಿಷ್ ಸಂಸತ್ತು ಭಾರತದಲ್ಲಿ ಗಣರಾಜ್ಯೋತ್ಸವದಂದು ನಡೆದ ಹಿಂಸಾಚಾರದ ಬಗ್ಗೆ ಕೇಳಿದ ಪ್ರಶ್ನೆಗೆ ಸಚಿವರು ಉತ್ತರಿಸಿದ್ದಾರೆ.
ಇದಕ್ಕೂ ಮೊದಲು, ಕಳೆದ ವಾರ ಭಾರತಕ್ಕೆ ಸಂಬಂಧಿಸಿದ ಇತರ ವಿಷಯಗಳ ಕುರಿತು ಕೆಲವು ಬ್ರಿಟಿಷ್ ಸಂಸದರು ಹಲವಾರು ಪ್ರಶ್ನೆಗಳನ್ನು ಎತ್ತಿದ್ದರು.
ಓದಿ : ಹಾಲಿನ ಪ್ಯಾಕೆಟ್ ಗಳು ಈತನ ಟಾರ್ಗೆಟ್: ಸಿಸಿಟಿವಿಯಲ್ಲಿ ಸೆರೆಯಾಯ್ತು ಕಳ್ಳನ ಕರಾಮತ್ತು