ಕುಮಟಾ: ರೈತರು ಹಾಗೂ ಯುವ ಸಮುದಾಯ ಹೆಚ್ಚಿನ ಸಂಖ್ಯೆಯಲ್ಲಿ ಕೃಷಿ ಚಟುವಟಿಕೆಯಲ್ಲಿ ತೊಡಗಿಕೊಳ್ಳುವ ಮೂಲಕ ಕೃಷಿಯಲ್ಲಿ ಯಾಂತ್ರೀಕರಣಕ್ಕೆ ಪ್ರೋತ್ಸಾಹ ನೀಡಿ ಕೃಷಿಯನ್ನು ಸಹ ಒಂದು ಸ್ವಾವಲಂಬಿ ಉದ್ಯೋಗವನ್ನಾಗಿ ಸ್ಥಾಪಿಸುವುದೇ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಉದ್ದೇಶವಾಗಿದೆ ಎಂದು ಯೋಜನೆಯ ಕೃಷಿ ಯಾಂತ್ರೀಕರಣ ವಿಭಾಗದ ಪ್ರಾದೇಶಿಕ ನಿರ್ದೇಶಕ ಅಬ್ರಾಹಂ ಎಂ.ಕೆ. ಅಭಿಪ್ರಾಯಪಟ್ಟರು.
ನಬಾರ್ಡ್ ಸಂಸ್ಥೆ ಸಹಯೋಗದೊಂದಿಗೆ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆವತಿಯಿಂದ ಕುಮಟಾದ ಜಿಲ್ಲಾ ಕೃಷಿ ತರಬೇತಿಕೇಂದ್ರದಲ್ಲಿ ನಡೆದ ಕರಾವಳಿ ಭಾಗದ ಆಯ್ದ ಫಲಾನುಭವಿಗಳಿಗೆ ನಡೆಯಲಿರುವ ಭತ್ತದ ಕೃಷಿಯಲ್ಲಿ ಬಳಸುವ ಯಂತ್ರಗಳ ರಿಪೇರಿ ಮತ್ತುನಿರ್ವಹಣಾ ತರಬೇತಿ ಕಾರ್ಯಾಗಾರವನ್ನುಉದ್ಘಾಟಿಸಿ ಅವರು ಮಾತನಾಡಿದರು. ರೈತರ ಜೀವನಾಡಿ ಕೃಷಿಯನ್ನು ಲಾಭದಾಯಕಹಾಗೂ ರೈತ ಸ್ನೇಹಿಯನ್ನಾಗಿ ಮಾಡುವಉದ್ದೇಶದಿಂದ ಕೃಷಿಯಲ್ಲಿ ಹೆಚ್ಚಿನ ಯಂತ್ರ ಬಳಕೆಗೆ ಪ್ರೋತ್ಸಾಹ ನೀಡುತ್ತಿದ್ದು, ಇದರ ನಿರ್ವಹಣೆಮತ್ತು ರಿಪೇರಿ ಕಾರ್ಯ ರೈತರಿಗೆ ಸವಾಲಾಗಿದೆ. ಇದನ್ನು ಮನಗಂಡ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ರೈತರಿಗೆ ನೆರವಾಗುವ ಉದ್ದೇಶದಿಂದ ಈ ತರಬೇತಿ ಹಮ್ಮಿಕೊಂಡಿದೆ ಎಂದರು.
ತರಬೇತಿ ಪಡೆದವರು ಕೃಷಿಗೆ ಸಂಬಂಧಿಸಿದ ಉದ್ದಿಮೆಗಳ ಮುಖಾಂತರ ಸ್ವಯಂ ಉದ್ಯೋಗ ಪ್ರಾರಂಭಿಸಲು ಹಾಗೂ ಯೋಜನೆಯ ಸೂಕ್ತತೆಗೆ ಅನುಗುಣವಾಗಿ ಸಾಲ ಸೌಲಭ್ಯ ಒದಗಿಸಲುನಬಾರ್ಡ್ ಹಣಕಾಸಿನ ಪ್ರೋತ್ಸಾಹ ನೀಡುತ್ತಿದ್ದು,ಕೇವಲ ಕಾಟಾಚಾರಕ್ಕಾಗಿ ತರಬೇತಿಯಲ್ಲಿಪಾಲ್ಗೊಳ್ಳದೇ, ವಿಷಯಗಳನ್ನು ಮನದಟ್ಟುಮಾಡಿಕೊಂಡು ಮುಂದಿನ ದಿನಗಳಲ್ಲಿ ರೈತರಿಗೆಮುಕ್ತವಾಗಿ ಸೇವೆ ನೀಡುವುದರೊಂದಿಗೆಯಶಸ್ಸಿನ ಹಾದಿಯಲ್ಲಿ ನಡೆಯಲು ಸಹಕರಿಸಿಎಂದ ಅವರು, ಸ್ವಂತ ಉದ್ಯೋಗದ ಅಭಿವೃದ್ಧಿಜೊತೆಗೆ ಕೃಷಿ ಅಭಿವೃದ್ಧಿ ಮಾಡಲು ತಮ್ಮ ಸೇವೆ ಅತ್ಯಗತ್ಯ ಎಂದು ಕರೆ ನೀಡಿದರು.
ಜಿಲ್ಲಾ ತರಬೇತಿ ಕೇಂದ್ರದ ಸಹಾಯಕ ನಿರ್ದೇಶಕಿ ಮಮತಾ ಬಿ.ಆರ್ ಅಧ್ಯಕ್ಷತೆ ವಹಿಸಿ,ಸರ್ಕಾರದ ಅನೇಕ ಇಲಾಖೆಗಳ ಕಾರ್ಯ ವೈಖರಿಗಮನಿಸಿದರೆ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯವರು ಜನರೊಂದಿಗೆ ನೇರವಾಗಿಭಾಗಿಯಾಗಿ, ಉತ್ತಮ ರೀತಿಯಲ್ಲಿ ಕೆಲಸಮಾಡುತ್ತಿದ್ದು, ಆ ಮೂಲಕ ಬಡ ಜನರ ಎಲ್ಲಕಾರ್ಯಗಳು ಯಶÕಸ್ವಿಯಾಗಿ ಮೂಡಿಬರುತ್ತಿವೆ ಎಂದು ಶ್ಲಾಘಿಸಿದರು.
ಕೃಷಿ ಇಲಾಖೆ ಸಹಾಯಕ ಕೃಷಿ ನಿರ್ದೇಶಕಿ ರಶ್ಮಿ ಶಹಾಪುರಮಠ, ಎಸ್‌ಬಿಐ ಬ್ಯಾಂಕ್‌ವ್ಯವಸ್ಥಾಪಕ ನಾರಾಯಣ ಶಾನಭಾಗ, ಯೋಜನೆಯ ಜಿಲ್ಲಾ ನಿರ್ದೇಶಕ ಶಂಕರ ಶೆಟ್ಟಿ,ತಾಲೂಕು ಯೋಜನಾಧಿಕಾರಿ ನಾಗರಾಜನಾಯ್ಕ, ಸಂಪನ್ಮೂಲ ವ್ಯಕ್ತಿ, ಉಪನ್ಯಾಸಕರಮೇಶ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.ಗ್ರಾಮಾಭಿವೃದ್ಧಿ ಯೋಜನೆಯ ಜ್ಞಾನ ವಿಕಾಸಸಮನ್ವಯಾಧಿಕಾರಿ ಆಶಾಚಂದ್ರ ಸ್ವಾಗತಿಸಿದರು.ರಮೇಶ ನಿರೂಪಿಸಿದರು. ಪ್ರಬಂಧಕ ಭಾಸ್ಕರ ಪಟಗಾರ ವಂದಿಸಿದರು.