Advertisement
ಬೆಂಗಳೂರು ಕೃಷಿ ವಿಶ್ವವಿದ್ಯಾಲಯ, ವಲಯ ಕೃಷಿ ಸಂಶೋಧನಾ ಕೇಂದ್ರ, ಕೃಷಿ ಮಹಾವಿದ್ಯಾಲಯ ಮತ್ತು ಕೃಷಿ ವಿಜ್ಞಾನ ಕೇಂದ್ರದ ಸಹಯೋಗದಲ್ಲಿ “ಸುಸ್ಥಿರ ಕೃಷಿಗೆ ನೀರಿನ ಸದ್ಭಳಕೆ‘ ಶೀರ್ಷಿಕೆಯಡಿ ಕೃಷಿಮೇಳ ನಡೆಯಲಿದೆ ಎಂದು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.
Related Articles
Advertisement
ರೈತರೊಂದಿಗೆ ಸಂವಾದ: ನಿರ್ದೇಶಕ ಡಾ.ವಾಸುದೇವನ್ ಮಾತನಾಡಿ, ಕೃಷಿಯಲ್ಲಿ ನೀರಿನ ಸದ್ಭಳಕೆ ಜತೆಗೆ ಕಡಿಮೆ ಖರ್ಚಿನಲ್ಲಿ ಹೆಚ್ಚಿನ ಇಳುವರಿ ಪಡೆಯುವ ಬಗ್ಗೆ ರೈತರಿಗೆ ಮಾಹಿತಿ ನೀಡಲಾಗುವುದು. ಅಂತೆಯೇ, 25ರಿಂದ 30
ತರಕಾರಿ ಬೆಳೆಯನ್ನು ಪ್ರಾತ್ಯಕ್ಷಿಕೆ ಮೂಲಕ ತೋರಿಸಲಾಗುವುದು. ಭತ್ತ, ರಾಗಿ, ಸಿರಿಧಾನ್ಯ, ಮುಸುಕಿನ ಜೋಳ, ವಾಣಿಜ್ಯ ಬೆಳೆ, ದ್ವಿದಳ ಧಾನ್ಯ ಮತ್ತು ಎಣ್ಣೆ ಕಾಳುಬೆಳೆ, ಮೇವಿನ ಬೆಳೆ ಹೊಸ ಮಾದರಿ ಪರಿಚಯ, ರೈತರೊಂದಿಗೆ ಸಂವಾದ ನಡೆಯಲಿದೆ ಎಂದರು.
ತರಕಾರಿ ಬೆಳೆ ಪ್ರಾತ್ಯಕಿಕೆ: ಕೃಷಿ ಮೇಳದಲ್ಲಿ ಗಂಗಾವತಿ ಸೋನಾ ಎಂಬ ಭತ್ತದ ಹೊಸ ತಳಿಯನ್ನು ಪರಿಚಯಿಸ ಲಾಗುತ್ತಿದೆ. 20 ಬಗೆಯ ಹೊಸ ತರಕಾರಿಬೆಳೆಯ ಪ್ರಾತ್ಯಕ್ಷಿಕೆ, ಸಿಒಬಿ ಸಿಎಂ 16061, 16062 ಎಂಬ ಕಬ್ಬಿನ ಹೊಸ ತಳಿಯನ್ನು ಪರಿಚಯಿಸಲಾಗುತ್ತಿದೆ. ಕೆ.ಎಂ. ಆರ್. 430 ಎಂಬ ರಾಗಿ ತಳಿ ಹಾಗೂ ಎಂ.ಎ. ಎಚ್. 14-5 ಮುಸುಕಿನ ಜೋಳ ತಳಿ ಪರಿಚಯಿಸ ಲಾಗುತ್ತದೆ ಎಂದು ವಿವರಿಸಿದರು.
ಮೇಳದಲ್ಲಿ 150 ರಿಂದ 160 ಮಳಿಗೆ ತೆರೆಯಲಾಗುತ್ತಿದೆ. ವಿವಿಧ ಇಲಾಖೆಯಿಂದ ರೈತರಿಗೆ ಸಿಗಬಹುದಾದ ಸೌಲಭ್ಯದ ಮಾಹಿತಿಯೂ ನೀಡಲಾಗುತ್ತದೆ. ನಗರದಿಂದ ವಿ.ಸಿ.ಫಾರಂವರೆಗೆ ವಾಹನದ ಸೌಲಭ್ಯವಿರಲಿದೆ. ಬೆಳಗ್ಗೆ 9ರಿಂದ ಸಂಜೆ 6ಗಂಟೆವರೆಗೆ ಬಸ್ ಸಂಚರಿಸಲಿದೆ ಎಂದರು. ವಲಯ ಕೃಷಿ ಸಂಶೋಧನಾ ಕೇಂದ್ರದ ಸಹ ವಿಸ್ತರಣಾ ನಿರ್ದೇಶಕ ಡಾ.ಡಿ.ರಘುಪತಿ ಇದ್ದರು.