Advertisement

ಅನ್ನದಾತನ ಬಳಿಗೆ ಕೃಷಿ ಸಂಜೀವಿನಿ

06:13 PM Sep 25, 2021 | Nagendra Trasi |

ಸಿಂದಗಿ:ಸರಕಾರ ಕೃಷಿ ಸಂಜೀವಿನಿ ಯೋಜನೆ ಜಾರಿಗೊಳಿಸಿದ್ದು, ಈ ಯೋಜನೆಯ ಮೂಲಕ ‌ ಕೃಷಿ ಬೆಳೆಗಳಿಗೆ ಕಾಡುವ ಕೀಟ, ರೋಗ, ಕಳೆ ಬಾಧೆ, ಮಣ್ಣಿನ ಪರೀಕ್ಷೆ, ಮಣ್ಣಿನ ಪೋಷಕಾಂಷಗಳ ಕೊರತೆ ಮೊದಲಾದ ‌ಸಮಸ್ಯೆಗಳಿಗೆ ತರುವ ಪರಿಹಾರವನ್ನು ನೀಡುವುದು ಕೃ ‌ಷಿ ಸಂಜಿವಿನಿ ಉದ್ದೇಶವಾಗಿದೆ.

Advertisement

ಕೃಷಿ ಬೆಳೆಗಳಿಗೆ ಕಾಡುವ ಕೀಟ, ರೋಗ, ಕಳೆ ಬಾಧೆ, ಮಣ್ಣಿನ ಪರೀಕ್ಷೆ, ಮಣ್ಣಿನ ಪೋಷಕಾಂಷಗಳ ‌ ಕೊರತೆ ಕಂಡುಕೊಂಡು ಸಮರ್ಪಕವಾಗಿ ನಿರ್ವಹಣೆ ಮಾಡಲು ಹಾಗ ‌ ಕೃಷಿ ಕೀಟಗಳನ್ನು ಹತೋಟಿಗೆ ತರುವ ಮಾರ್ಗೋಪಾಯಗಳನ್ನು ರೈತನಿಗೆ ತಮ್ಮ ಜಮೀನನಲ್ಲೇ ವ್ಯವಸ್ಥೆ ಮಾಡಲು ಸರಕಾರ ಕೃಷಿ ಸಂಜೀವಿನಿ ಯೋಜನೆ ಜಾರಿಗೊಳಿಸಿದ್ದು , ತಾಲೂಕಿನಲ್ಲಿ ಯೋಜನೆಯನ್ನು ರೈತರಿಗೆ ಮುಟ್ಟಿಸಲು ಕೃಷಿ ಸಹಾಯಕ ನಿರ್ದೇಶಕ ‌ ‌ ಕಾರ್ಯಾಲಯದ ‌ ಕೃಷಿ
ಅಧಿಕಾರಿಗಳು ಶ್ರಮಿಸುತ್ತಿದ್ದಾರೆ.

ಕೃಷಿಯು ನೈಸರ್ಗಿಕ ವಿಕೋಪ, ಅನಾವೃಷ್ಟಿ, ಅತಿ ‌ವೃಷ್ಟಿ, ಚಂಡಮಾರುತ, ಬೆಳೆಗಳಿಗೆ ಕಾಡುವ ಕೀಟ ಮತ್ತು ರೋಗ ಬಾಧೆ ಹಾಗೂ ಮಣ್ಣಿನ ಫಲವತ್ತತೆ ಮತ್ತು ಇತರ ಅಂಶಗಳ ‌ ಮೇಲೆ ಅವಲಂಬಿತವಾಗಿರುತ್ತದೆ. ಕೃಷಿ ಕ್ಷೇತ್ರಕ್ಕೆ ಅಗತ್ಯವಾದ ಸುಧಾರಿತ ಕೃಷಿ ಉತ್ಪಾದನಾ ತಾಂತ್ರಿಕತೆ, ಗುಣ ಮಟ್ಟದ ಕೃಷಿ ಪರಿಕರಗಳ ಪೂರೈಕೆ ಮತ್ತು ಶಿಫಾರಸು ಮಾಡಲಾದ ರಸಗೊಬ್ಬರಗಳ ಸಮರ್ಪಕ ಬಳಕೆ, ರೋಗ, ಕೀಟಗಳ ಹತೋಟಿ, ಮಣ್ಣಿನಲ್ಲಿ ಲಭ್ಯವಿರುವ ಪೋಷಕಾಂಶಗಳ ‌ ಬಗ್ಗೆ ರೈತರಿಗೆ ಮಾಹಿತಿ ಒದಗಿಸಿ ಸೂಕ್ತ ಬೆಳೆ ಬೆಳೆಯಲು ಪ್ರೋತ್ಸಾಹಿಸುವ ಉದ್ದೇಶ ಹೊಂದಲಾಗಿದೆ.

ರೈತರ ಸಮಸ್ಯೆಗಳಿಗೆ ಕೃಷಿ ಸಂಜೀವಿನಿ ಟೋಲ್‌ ಫ್ರೀ ಹೆಲ್ಫ್ ಲೈನ್‌ (ಸಹಾಯವಾಣಿ) ಸಂಖ್ಯೆ 155313 ಆರೋಗ್ಯ ಇಲಾಖೆ ಯ ಆಂಬ್ಯುಲೆನ್ಸ್‌ನಂತೆ ಸಹಾಯವಾಣಿ ಕೆಲಸ ಮಾಡುತ್ತದೆ. ಸಕಾಲದಲ್ಲಿ ಬೆಳೆದ ಬೆಳೆಗಳನ್ನು ಎಲ್ಲಾ ಹಂತಗಳಲ್ಲಿ ಸರ್ವೇಕ್ಷಣೆ ಕೈಗೊಂಡು ಕಂಡುಬಂದಿರುವ, ಕಂಡುಬರ ‌ಬಹುದಾದ ‌ ಕೀಟ ರೋಗ ಕಳೆಗಳ ‌ ನಿರ್ವಹಣಾ ಮಾರ್ಗೋಪಾಯಗಳನ್ನು ರೈತರಿಗೆ ತಿಳಿಸುವ ಜೊತೆಗೆ ಕೃಷಿ ಇಲಾಖೆಯ ಇತರೆ ಯೋಜನೆಗಳನ್ನು ರೈತರಿಗೆ ಪ್ರಚಾರ ಮಾಡಿ ಅದನ್ನು ತಲುಪಿಸಲು ಪ್ರಯತ್ನಿಸುವುದೇ ಮೂಲ ಉದ್ದೇಶವಾಗಿದೆ.

ಟೋಲ್‌ ಫ್ರೀಹೆಲ್ಪ್ಲೈನ್‌ (ಸಹಾಯವಾಣಿ) 155313ಈ ಸಂಖ್ಯೆಗೆ ಕರೆ ಮಾಡಿ ರೈತರು ತಮ್ಮ ಸಮಸ್ಯೆ ತಿಳಿಸಿ ಪರಿಹಾರ ಪಡೆಯಬಹುದು. ಆರೋಗ್ಯ ಇಲಾಖೆಯ
ಆಂಬ್ಯುಲೆನ್ಸ್‌ನಂತೆ ಕೆಲಸ ಮಾಡುತ್ತದೆ. ಸಕಾಲದಲ್ಲಿ ಬೆಳೆಯ ಎಲ್ಲ ಹಂತಗಳಲ್ಲಿ ಸರ್ವೇಕ್ಷಣೆಕೈಗೊಂಡು ಕಂಡು ಬಂದಿರುವ, ಕಂಡು ಬರಬಹುದಾದಕೀಟ, ರೋಗ, ಕಳೆಗಳ ನಿರ್ವಹಣಾ ಮಾರ್ಗೋಪಾಯಗಳನ್ನು ರೈತರಿಗೆ ತಿಳಿಸುವುದು ಮುಖ್ಯ ಉದ್ಧೇಶವಾಗಿದೆ.
ಡಾ| ಎಚ್‌.ವೈ. ಸಿಂಗೆಗೋಳ
ಸಹಾಯಕ ಕೃಷಿ ನಿರ್ದೇಶಕರು, ಸಿಂದಗಿ

Advertisement

ಸಂಚಾರಿ ಸಸ್ಯ ಆರೋಗ್ಯ ಚಿಕಿತ್ಸಾಲಯ ವಾಹನದಲ್ಲಿ ಸೂಕ್ಷ್ಮ ಕೀಟಗಳನ್ನು ಗುರುತಿಸಲು ಸ್ಟೀರಿಯೊ ಜೂಮ್‌ ಸೂಕ್ಷ್ಮದರ್ಶಕ, ಭೂತಗನ್ನಡಿ, ರಸಗೊಬ್ಬರ ಪರೀಕ್ಷಾ ಕಿಟ್‌, ಮಣ್ಣು  ತೇವಾಂಶ ಸಂವೇದಕ,ಕೀಟ ಸಂಗ್ರಹಣಾ ಬಲೆ, ರೈತರ ಜಮೀನಿನಲ್ಲಿ ವೈಜ್ಞಾನಿಕ ಸರ್ವೇಕ್ಷಣೆ ಕೈಗೊಳ್ಳಲು ಟ್ಯಾಬ್ಸ್, ಲ್ಯಾಪ್‌ಟಾಪ್‌, ಪ್ರಿಂಟರ್‌, ಉಷ್ಣಮಾಪಕ ಸೇರಿ ವಿವಿಧ ಉಪಕರಣಗಳನ್ನು ವಾಹನದಲ್ಲಿ ಇರುತ್ತದೆ. ರೈತರುಕೃಷಿ ಸಂಜೀವಿನಿ ಪ್ರಯೋಜನ ಪಡೆಯಬೇಕು.
ಶಿವಾನಂದ ಹೂವಿನಹಳ್ಳಿ. ಕೃಷಿ ಅಧಿಕಾರಿ,
ರೈತ ಸಂಪರ್ಕ ಕೇಂದ್ರ, ಸಿಂದಗಿ

ಸುಧಾರಿತಕೃಷಿ ಉತ್ಪಾದನಾ ತಾಂತ್ರಿಕತೆ, ಗುಣಮಟ್ಟದ ಕೃಷಿ ಪರಿಕರಗಳ ಪೂರೈಕೆ ಮತ್ತು ಶಿಫಾರಸು ಮಾಡಲಾದ ರಸಗೊಬ್ಬರಗಳ ಸಮರ್ಪಕ ಬಳಕೆ, ರೋಗ,ಕೀಟಗಳ ಹತೋಟಿ, ಮಣ್ಣಿನಲ್ಲಿ ಲಭ್ಯವಿರುವ ಪೋಷಕಾಂಷಗಳ ಬಗ್ಗೆ ರೈತರುಕೃಷಿ ಅಧಿಕಾರಿಗಳ ಮಾರ್ಗದರ್ಶನದಿಂದ ಮಾಹಿತಿ ಪಡೆದು ಸೂಕ್ತ ಬೆಳೆ ಬೆಳೆಯಬೇಕು.
ರಾಜಶೇಖರ ಪೂಜಾರಿ, ನಿರ್ದೇಶಕರು,
ತಾಲೂಕಾ ಕೃಷಿಕ ಸಮಾಜ ಸಿಂದಗಿ

ರಮೇಶ ಪೂಜಾರ

Advertisement

Udayavani is now on Telegram. Click here to join our channel and stay updated with the latest news.

Next