Advertisement

ಸ್ವಾಗತ ಕಮಾನಿಗೆ ಎನ್‌ಆರ್‌ವಿ ನಾಯಕ ಹೆಸರಿಡಲು ಒಪ್ಪಿಗೆ

05:18 PM Aug 09, 2022 | Team Udayavani |

ಸುರಪುರ: ನಗರಸಭೆ ನಿರ್ಮಿಸುತ್ತಿರುವ ಮೂರು ಸ್ವಾಗತ ಕಮಾನುಗಳಿಗೆ ಇಲ್ಲಿಯ ಅರಸ ವೀರ ಸೇನಾನಿ ರಾಜಾ ನಾಲ್ವಡಿ ವೆಂಕಟಪ್ಪನಾಯಕ ಅವರ ಹೆಸರಿಡಲು ನಗರಸಭೆ ಸದಸ್ಯರು ಸರ್ವಾನುಮತದಿಂದ ಅನುಮೋದನೆ ನೀಡಿದರು.

Advertisement

ನಗರಸಭೆ ಸಭಾಂಗಣದಲ್ಲಿ ಸೋಮವಾರ ಸುಜಾತಾ ಜೇವರ್ಗಿ ಅಧ್ಯಕ್ಷತೆಯಲ್ಲಿ ನಡೆದ ತುರ್ತು ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಯಿತು ಪೌರಾಯಕ್ತ ಜೀವನಕುಮಾರ ಕಟ್ಟಿಮನಿ ಮಾತನಾಡಿ, 2017-18ನೇ ಸಾಲಿನ ಎಸ್‌ಎಫ್‌ಸಿ ಯೋಜನೆಯಡಿ ನಗರದ ಮೂರು ಹೆದ್ದಾರಿಗಳಲ್ಲಿ ಸ್ವಾಗತ ಕಮಾನ ನಾಮಫಲಕಕ್ಕೆ ಮೂರ್‍ನಾಲ್ಕು ಹೆಸರುಗಳು ಪ್ರಸ್ತಾಪವಾಗಿವೆ. ಸದಸ್ಯರು ಈ ಕುರಿತು ಅಂತಿಮ ಹೆಸರು ತೀರ್ಮಾನಿಸುವಂತೆ ಹೇಳಿದರು.

ಹಿರಿಯ ಸದಸ್ಯ ವೇಣುಮಾಧವನಾಯಕ ಮಾತನಾಡಿ, ಸ್ವಾತಂತ್ರ್ಯ ಸಂಗ್ರಾಮದಲ್ಲಿ ಸುರಪುರ ಸಂಸ್ಥಾನದ ಅರಸು ನಾಲ್ವಡಿ ರಾಜಾ ವೆಂಕಟಪ್ಪನಾಯಕ ಅವರ ಹೋರಾಟ ಅವಿಸ್ಮರಣೀಯವಾಗಿದೆ. ಅವರ ಕೊಡುಗೆಯನ್ನು ಜನಮಾನಸಕ್ಕೆ ತಿಳಿಸಬೇಕಾಗಿದೆ. ಆ ನಿಟ್ಟಿನಲ್ಲಿ ಸ್ವಾಗತ ಕಮಾನಿಗೆ ನಾಲ್ವಡಿ ರಾಜಾ ವೆಂಕಟಪ್ಪನಾಯಕರ ಹೆಸರಿಡಬೇಕು ಎಂದು ಕೋರಿದಾಗ ಸರ್ವ ಸದಸ್ಯರು ಒಪ್ಪಿಗೆ ಸೂಚಿಸಿದರು.

ಗಾಂಧಿ  ಪ್ರತಿಮೆ ಅನಾವರಣ: ಇದೇ 13ಕ್ಕೆ ಸ್ವಾತಂತ್ರ್ಯದ ಅಮೃತ ಮಹೋತ್ಸವ ನಿಮಿತ್ತ ನಗರದ ಮಹಾತ್ಮ ಗಾಂಧಿಧೀಜಿ ವೃತ್ತದಲ್ಲಿ ಗಾಂಧಿ  ಪ್ರತಿಮೆ ಅನಾವರಣ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಶಾಸಕರು ದಿನಾಂಕ ನಿಗದಿಪಡಿಸಿದ್ದು, ಎಲ್ಲ ಸದಸ್ಯರು ಅಂದು ಬೆಳಗ್ಗೆ 10ಕ್ಕೆ ಆಗಮಿಸಿ ಕಾರ್ಯಕ್ರಮದ ಯಶಸ್ವಿಗೆ ಸಹಕರಿಸಬೇಕು ಎಂದು ಪೌರಯುಕ್ತ ಜೀವನಕುಮಾರ ಕಟ್ಟಿಮನಿ ತಿಳಿಸಿದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next