Advertisement

ಉತ್ತರಪ್ರದೇಶ; ಹಿಂದೂ ಯುವತಿ ಅಪಹರಣಕ್ಕೆ ಆಕ್ರೋಶ, ಮುಸ್ಲಿಂ ಯುವಕನ ಮನೆಗೆ ಬೆಂಕಿ

03:08 PM Apr 16, 2022 | Team Udayavani |

ಆಗ್ರಾ/ಉತ್ತರಪ್ರದೇಶ: 22 ವರ್ಷದ ಹಿಂದೂ ಯುವತಿ ಜೊತೆ ನಾಪತ್ತೆಯಾಗಿದ್ದ ಮುಸ್ಲಿಮ್ ಯುವಕನ ಕುಟುಂಬಕ್ಕೆ ಸೇರಿದ್ದ ಎರಡು ಮನೆಗಳಿಗೆ ಉದ್ರಿಕ್ತ ಗುಂಪೊಂದು ಬೆಂಕಿ ಹಚ್ಚಿರುವ ಘಟನೆ ಉತ್ತರಪ್ರದೇಶದ ಆಗ್ರಾದಲ್ಲಿ ನಡೆದಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

Advertisement

ಇದನ್ನೂ ಓದಿ:ಸೋಲಿನ ಸುಳಿಯಲ್ಲಿರುವ ಮುಂಬೈಗೆ ಲಕ್ನೋ ಸವಾಲು; ಎರಡೂ ತಂಡದಲ್ಲೂ ಬದಲಾವಣೆ

ಆಗ್ರಾದ ರುನಾಕ್ತಾ ಪ್ರದೇಶದಲ್ಲಿರುವ ಆಗ್ರಾದ ಜಿಮ್ ಮಾಲೀಕ ಸಾಜಿದ್ ಕುಟುಂಬಕ್ಕೆ ಸೇರಿದ ಎರಡು ಮನೆಗಳಿಗೆ ಧರ್ಮ ಜಾಗರಣ್ ಸಮನ್ವಯ್ ಸಂಘದ ಗುಂಪಿನ ಸದಸ್ಯರು ಬೆಂಕಿ ಹಚ್ಚಿರುವುದಾಗಿ ಪೊಲೀಸರು ಮಾಹಿತಿ ನೀಡಿರುವುದಾಗಿ ವರದಿ ಹೇಳಿದೆ.

22 ವರ್ಷದ ಹಿಂದೂ ಯುವತಿ ಜತೆ ಅನೈತಿಕ ಸಂಬಂಧ ಹೊಂದಿರುವುದಾಗಿ ಆರೋಪಿಸಿರುವ ಜಾಗರಣ್ ಸಮನ್ವಯ ಸಂಘದ ಸದಸ್ಯರು, ಯುವತಿಯನ್ನು ಅಪಹರಿಸಿಕೊಂಡು ಹೋಗಿರುವ ಆರೋಪಿಯನ್ನು ಕೂಡಲೇ ಬಂಧಿಸಬೇಕೆಂದು ಆಗ್ರಹಿಸಿರುವುದಾಗಿ ವರದಿ ತಿಳಿಸಿದೆ.

ಘಟನೆಯ ಹಿನ್ನೆಲೆಯಲ್ಲಿ ಅಂಗಡಿ-ಮುಂಗಟ್ಟುಗಳನ್ನು ಮುಚ್ಚುವಂತೆ ಸ್ಥಳೀಯರಿಗೆ ಸಂಘಟನೆ ಸೂಚಿಸಿರುವುದಾಗಿ ವರದಿ ಹೇಳಿದೆ. ಮನೆಗೆ ಬೆಂಕಿ ಹಚ್ಚಿರುವ ಘಟನೆಯಲ್ಲಿ ಯಾವುದೇ ಸಾವು-ನೋವು ಸಂಭವಿಸಿಲ್ಲ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

Advertisement

ಸಾಜಿದ್ ಮನೆಗೆ ಬೆಂಕಿ ಹಚ್ಚಿರುವ ಘಟನೆಯಲ್ಲಿ ನಿರ್ಲಕ್ಷ್ಯ ತೋರಿಸಿರುವ ಆರೋಪದಡಿ ಠಾಣಾಧಿಕಾರಿಯನ್ನು ಅಮಾನತುಗೊಳಿಸಲಾಗಿದ್ದು, ಸಿಕಂದ್ರಾ ಪೊಲೀಸ್ ಠಾಣಾಧಿಕಾರಿ ವಿರುದ್ಧ ತನಿಖೆಗೆ ಆದೇಶಿಸಲಾಗಿದೆ. ಒಂದು ವೇಳೆ ದೋಷಿ ಎಂದಾದಲ್ಲಿ ಕಠಿಣ ಕ್ರಮ ಕೈಗೊಳ್ಳುವುದಾಗಿ ಆಗ್ರಾದ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ಸುಧೀರ್ ಕುಮಾರ್ ಸಿಂಗ್ ಸುದ್ದಿಗಾರರ ಜತೆ ಮಾತನಾಡುತ್ತ ತಿಳಿಸಿದ್ದಾರೆ.

ಸೋಮವಾರದಿಂದ ಯುವತಿ ನಾಪತ್ತೆಯಾಗಿದ್ದು, ಎರಡು ದಿನಗಳ ಬಳಿಕ ಯುವತಿ ಪತ್ತೆಯಾಗಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಆದರೆ ಸಾಜಿದ್ ಎಲ್ಲಿದ್ದಾನೆ ಎಂಬ ಬಗ್ಗೆ ತಿಳಿದು ಬಂದಿಲ್ಲ. ನಾನು ವಯಸ್ಕಳಾಗಿದ್ದು, ತನ್ನ ಸ್ವ ಇಚ್ಛೆಯಿಂದಲೇ ಸಾಜಿದ್ ಜೊತೆ ಹೋಗಿರುವುದಾಗಿ ಯುವತಿ ನೀಡಿರುವ ಹೇಳಿಕೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವುದಾಗಿ ವರದಿ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next