Advertisement

Agra: ಪ್ರವಾಸಿಗರಂತೆ ವೇಷ ಧರಿಸಿ ತಡರಾತ್ರಿ ಓಡಾಡಿದ ಮಹಿಳಾ ಪೋಲೀಸ್; ಮಂದೆ ಆಗಿದ್ದೇನು?

11:42 AM Sep 29, 2024 | Team Udayavani |

ಆಗ್ರಾ: ನಗರದಲ್ಲಿ ಮಹಿಳೆಯರ ಸುರಕ್ಷತೆಯನ್ನು ಪರಿಶೀಲಿಸಲು ಆಗ್ರಾದ ಹಿರಿಯ ಮಹಿಳಾ ಪೋಲೀಸ್ ಅಧಿಕಾರಿಯೊಬ್ಬರು ಸಾದಾ ಉಡುಪು ಧರಿಸಿ ಪ್ರವಾಸಿ ವೇಷದಲ್ಲಿ ತಡರಾತ್ರಿ ಆಟೋದಲ್ಲಿ ಏಕಾಂಗಿಯಾಗಿ ಪ್ರಯಾಣಿಸಿದ್ದಾರೆ. ಸಹಾಯಕ ಪೊಲೀಸ್ ಆಯುಕ್ತೆ (ACP) ಸುಕನ್ಯಾ ಶರ್ಮಾ ಅವರು ನಗರದಲ್ಲಿ ತುರ್ತು ಪ್ರತಿಕ್ರಿಯೆ ಬೆಂಬಲ ವ್ಯವಸ್ಥೆಯನ್ನು ಪರಿಶೀಲಿಸಲು ಇದೇ ವೇಳೆ 112 ಗೆ ಕರೆ ಮಾಡಿದರು.

Advertisement

ಆಗ್ರಾ ಕಂಟೋನ್ಮೆಂಟ್ ರೈಲು ನಿಲ್ದಾಣದ ಹೊರಗೆ ನಿಂತು, 33 ವರ್ಷದ ಅಧಿಕಾರಿ ತಾಜ್ ಮಹಲ್ ನಗರದಲ್ಲಿ ಪ್ರವಾಸಿಯಂತೆ ಪೋಸ್ ನೀಡಿದರು. ಅಲ್ಲದೆ ಸಹಾಯಕ್ಕಾಗಿ ಪೊಲೀಸರನ್ನು ಕರೆದರು.

ತಡರಾತ್ರಿಯಾದ ಕಾರಣ ಪೊಲೀಸರ ಸಹಾಯದ ಅಗತ್ಯವಿದೆ. ನಿರ್ಜನ ರಸ್ತೆಯಿಂದಾಗಿ ಭಯಗೊಂಡಿದ್ದೇನೆ ಎಂದು ಮಾರುವೇಷದಲ್ಲಿದ್ದ ಅವರು ಪೊಲೀಸರಿಗೆ ಹೇಳಿದರು.

ಸಹಾಯವಾಣಿ ನಿರ್ವಾಹಕರು ಆಕೆಯನ್ನು ಸುರಕ್ಷಿತ ಸ್ಥಳದಲ್ಲಿ ನಿಲ್ಲುವಂತೆ ಹೇಳಿ ಆಕೆ ಇರುವ ಬಗ್ಗೆ ಮಾಹಿತಿ ಪಡೆದರು. ನಂತರ ಆಕೆಗೆ ಕರೆ ಮಾಡಿದ ಮಹಿಳಾ ಗಸ್ತು ತಿರುಗುವ ತಂಡ, ಅವಳನ್ನು ಕರೆದುಕೊಂಡು ಹೋಗಲು ಬರುತ್ತಿದ್ದೇವೆ ಎಂದು ಹೇಳಿದರು.

Advertisement

ಇದಾದ ಬಳಿಕ ಶರ್ಮಾ ಅವರು ತನ್ನ ಈ ಪರೀಕ್ಷೆಯ ಬಗ್ಗೆ ಹೇಳಿದ್ದಾರೆ. ತುರ್ತು ಪ್ರತಿಕ್ರಿಯೆ ವ್ಯವಸ್ಥೆಯನ್ನು ಪರಿಶೀಲಿಸುತ್ತಿದ್ದು, ನೀವು ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಾರೆ ಎಂದು ತಂಡಕ್ಕೆ ಹೇಳಿದರು.

ನಂತರ ಮಹಿಳೆಯರ ಸುರಕ್ಷತೆಯನ್ನು ಪರಿಶೀಲಿಸಲು ಅವರು ಆಟೋದಲ್ಲಿ ಅವರು ತೆರಳಿದ್ದಾರೆ. ಚಾಲಕನಿಗೆ ತನ್ನ ಡ್ರಾಪ್ ಸ್ಥಳವನ್ನು ತಿಳಿಸಿ ಅವನು ಅವರಿಗೆ ದರ ಹೇಳಿದ ನಂತರ ಆಟೋ ಹತ್ತಿದರು.

ತನ್ನ ಗುರುತನ್ನು ಬಹಿರಂಗಪಡಿಸದೆ, ನಗರದಲ್ಲಿನ ಮಹಿಳೆಯರ ಸುರಕ್ಷತೆಯ ಬಗ್ಗೆಯೂ ಅವಳು ಅವನೊಂದಿಗೆ ಮಾತನಾಡಿದ್ದರು. ಪೊಲೀಸರು ಆತನನ್ನು ಪರಿಶೀಲಿಸಿದ್ದು, ಶೀಘ್ರದಲ್ಲೇ ಸಮವಸ್ತ್ರದಲ್ಲಿ ಆಟೋ ಓಡಿಸಲು ಪ್ರಾರಂಭಿಸುವುದಾಗಿ ಚಾಲಕ ಹೇಳಿದ್ದಾನೆ.

ಕಾರ್ಯಕರ್ತೆ ದೀಪಿಕಾ ನಾರಾಯಣ ಭಾರದ್ವಾಜ್ ಅವರು ಸುಕನ್ಯಾ ಶರ್ಮಾ ಅವರನ್ನು ಶ್ಲಾಘಿಸಿದರು. ಇದು ವಾಸ್ತವವಾಗಿ ಮಹಿಳಾ ಸುರಕ್ಷತೆಯ ಮೊದಲ ಸರಿಯಾದ ಹೆಜ್ಜೆ ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next